Published : Jul 08, 2024, 02:55 PM ISTUpdated : Jul 08, 2024, 02:59 PM IST
ಇಮ್ರಾನ್ ಹಶ್ಮಿಯನ್ನು ಬಾಲಿವುಡ್‌ನ ಮುತ್ತಯ್ಯ ಎಂದರೂ ತಪ್ಪಿಲ್ಲ. ಆತನ ಚಿತ್ರ ಎಂದ ಮೇಲೆ ಅಲ್ಲಿ ರೋಮಾಂಚನವಾಗುವಂಥ ಚುಂಬನ ಇರಲೇಬೇಕು. ಒಮ್ಮೆ ಇಮ್ರಾನ್ ನಟಿಯೊಬ್ಬರಿಗೆ ಆಕೆ ಕೆಟ್ಟ ಕಿಸ್ಸರ್ ಎಂದಿದ್ದಕ್ಕಾಗಿ ಆಕೆ 20 ವರ್ಷ ಮಾತು ಬಿಟ್ಟಿದ್ದಳು.
ಇಮ್ರಾನ್ ಹಶ್ಮಿಯನ್ನು ಬಾಲಿವುಡ್‌ನ ಮುತ್ತಯ್ಯ ಎಂದರೂ ತಪ್ಪಿಲ್ಲ. ಆತನ ಚಿತ್ರ ಎಂದ ಮೇಲೆ ಅಲ್ಲಿ ರೋಮಾಂಚನವಾಗುವಂಥ ಚುಂಬನ ಇರಲೇಬೇಕು.
211
ಬಾಡಿ ಸ್ಟಾರ್, ಕಿಸ್ಸಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದ ಹಶ್ಮಿ ಒಮ್ಮೆ ಒಬ್ಬ ನಟಿಯನ್ನು ಕೆಟ್ಟ ಕಿಸ್ಸರ್ ಎಂದಿದ್ದಕ್ಕೆ 20 ವರ್ಷ ದ್ವೇಷ ಎದುರಿಸಬೇಕಾಯಿತಂತೆ!
311
ಆ ನಟಿ ಬೇರಾರೂ ಅಲ್ಲ, ಮಲ್ಲಿಕಾ ಶೆರಾವತ್. ಇತ್ತೀಚಿನ ಸಂದರ್ಶನವೊಂದರಲ್ಲಿ, ಇಮ್ರಾನ್ ಹಶ್ಮಿ ಮಲ್ಲಿಕಾ ಶೆರಾವತ್ ಅವರೊಂದಿಗಿನ 20 ವರ್ಷಗಳ ದ್ವೇಷದ ಬಗ್ಗೆ ತೆರೆದುಕೊಂಡರು.
411
ಇಮ್ರಾನ್ ಹಶ್ಮಿ ಮತ್ತು ಮಲ್ಲಿಕಾ ಶೆರಾವತ್ ಅವರು 2004ರಲ್ಲಿ ಮರ್ಡರ್ ಎಂಬ ಒಂದೇ ಒಂದು ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರೂ ಸಾರ್ವಕಾಲಿಕ ಅಪ್ರತಿಮ ಜೋಡಿಗಳಲ್ಲಿ ಒಂದಾಗಿ ಗುರುತಿಸಿಕೊಂಡರು.
511
ಚಿತ್ರದುದ್ದಕ್ಕೂ ಅವರ ಹಸಿಬಿಸಿ ದೃಶ್ಯಗಳು, ಜೋಡಿಯ ಕೆಮಿಸ್ಟ್ರಿ ನೋಡುಗರ ಮೈ ಬೆಚ್ಚಗಾಗಿಸಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಹಣದ ಮೇಲೆ ಹಣ ಬಾಚಿ ಸೂಪರ್ ಹಿಟ್ ಆಯಿತು.
611
ಇದು ಇಮ್ರಾನ್ ಮತ್ತು ಮಲ್ಲಿಕಾ ಅವರ ವೃತ್ತಿಜೀವನವನ್ನು ಸಂಪೂರ್ಣವಾಗಿ ವಿಭಿನ್ನ ಮಟ್ಟಕ್ಕೆ ಕೊಂಡೊಯ್ಯಿತು. ಆದರೆ, ಇಮ್ರಾನ್ ಆಡಿದ ಒಂದು ಮಾತು ಇಬ್ಬರನ್ನೂ ಮತ್ತೆ ಯಾವ ಚಿತ್ರದಲ್ಲೂ ಒಟ್ಟಿಗೆ ಕಾಣಿಸದಂತೆ ಮಾಡಿತು.
711
ಕರಣ್ ಜೋಹರ್ ಅವರ ಕಾರ್ಯಕ್ರಮವಾದ ಕಾಫಿ ವಿತ್ ಕರಣ್‌ನಲ್ಲಿ ಕಾಣಿಸಿಕೊಂಡ ಇಮ್ರಾನ್ ಹಶ್ಮಿಗೆ ಕೆಟ್ಟ ಕಿಸ್ಸರ್ ಯಾರು ಎಂದು ಕೇಳಿದಾಗ ಅವರು ಮಲ್ಲಿಕಾ ಹೆಸರು ಹೇಳಿದರು.
811
ಇಷ್ಟೇ ಅಲ್ಲ, ಮಲ್ಲಿಕಾ ಅವರ ಬೆಡ್‌ರೂಮ್‌ನಲ್ಲಿ ಸಿಗುವ ಒಂದು ವಸ್ತುವನ್ನು ಹೆಸರಿಸುವಂತೆ ಕರಣ್ ಇಮ್ರಾನ್ ಅವರನ್ನು ಕೇಳಿದಾಗ, 'ಹಾಲಿವುಡ್‌ನಲ್ಲಿ ಯಶಸ್ವಿಯಾಗಲು ಈಡಿಯಟ್‌ನ ಕೈಪಿಡಿ' ಎಂದು ನಟ ಉರಿಸುವ ಪ್ರತಿಕ್ರಿಯೆಯನ್ನು ನೀಡಿದರು.
911
ಇದರಿಂದ ಉರಿದು ಬಿದ್ದ ಮಲ್ಲಿಕಾ, ತಮ್ಮ ಚಲನಚಿತ್ರವಾದ ಹಿಸ್ಸ್‌ನಲ್ಲಿ ಮುತ್ತಿಟ್ಟ ಹಾವು ಇಮ್ರಾನ್‌ಗಿಂತ ಉತ್ತಮ ಚುಂಬಕ ಎನ್ನುವ ಮೂಲಕ ಸೇಡು ತೀರಿಸಿಕೊಂಡರು.
1011
ಅಷ್ಟಕ್ಕೇ ಸುಮ್ಮನಾಗದೆ, 20 ವರ್ಷಗಳ ಕಾಲ ನಟನೊಂದಿಗೆ ಮಾತು ಬಿಟ್ಟರು. ಆದರೆ, ಈ ವರ್ಷ ಏಪ್ರಿಲ್‌ನಲ್ಲಿ ಇಬ್ಬರೂ ಕಾರ್ಯಕ್ರಮವೊಂದರಲ್ಲಿ ಭೇಟಿಯಾದಾಗ ಹಳೆಯ ದ್ವೇಷ ಮರೆತು ಮಾತಾಡಿದರು.
1111
ಈ ಭೇಟಿ ಸೌಹಾರ್ದಯುತವಾಗಿತ್ತು. ಬಹಳ ಸಮಯದ ನಂತರ ನಾನು ಅವಳನ್ನು ನೋಡಿದೆ. ಮರ್ಡರ್ ಬಿಡುಗಡೆಯಾದ ನಂತರ ನಾನು ಅವಳನ್ನು ಒಂದೆರಡು ಬಾರಿ ಮಾತ್ರ ಭೇಟಿಯಾಗಿದ್ದೆ. ಆ ಸಮಯದಲ್ಲಿ ನಮಗೆ ಪ್ರಬುದ್ಧತೆ ಇರಲಿಲ್ಲ, ಮೂರ್ಖರಂತೆ ವರ್ತಿಸಿದೆವು ಎಂದು ಇಮ್ರಾನ್ ಹೇಳಿದ್ದಾರೆ.