ಮಲಯಾಳಂನ ಡ್ರೈವಿಂಗ್‌ ಲೈಸೆನ್ಸ್ ಹಿಂದಿಯಲ್ಲಿ, ಅಕ್ಷಯ್, ಇಮ್ರಾನ್ ಸಿನಿಮಾ

First Published | Sep 30, 2021, 1:53 PM IST
  • ಮಾಲಿವುಡ್ ಸಿನಿಮಾ ಡ್ರೈವಿಂಗ್ ಲೈಸೆನ್ಸ್ ಹಿಂದಿಯಲ್ಲಿ
  • ಅಹಂ ಆಧರಿಸಿ ನಡೆಯೋ ಇಡೀ ಸಿನಿಮಾ ಹಿಂದಿ ರಿಮೇಕ್

ನಿರ್ದೇಶಕ ರಾಜ್ ಮೆಹ್ತಾ ಅವರ ಮುಂದಿನ ಸಿನಿಮಾಗೋಸ್ಕರ ಅಕ್ಷಯ್ ಕುಮಾರ್ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಜೊತೆ ಮತ್ತೆ ಸೇರಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಮೂವರು ಕೊನೆಯದಾಗಿ ಗುಡ್ ನ್ಯೂಜ್ ಸಿನಿಮಾಗಾಗಿ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಇತ್ತೀಚಿನ ವರದಿಗಳ ಪ್ರಕಾರ ಈ ತಂಡವನ್ನು ಇಮ್ರಾನ್ ಹಶ್ಮಿ ಕೂಡ ಸೇರಿಕೊಂಡಿದ್ದಾರೆ. 

Tap to resize

ಸಿನಿಮಾ ಪೃಥ್ವಿರಾಜ್ ಅವರ ಮಲಯಾಳಂ ಚಿತ್ರ ಡ್ರೈವಿಂಗ್ ಲೈಸೆನ್ಸ್ (2019)(Driving License ) ನ ಅಧಿಕೃತ ಹಿಂದಿ ರಿಮೇಕ್ ಆಗಿದೆ. ಮೂಲ ಚಿತ್ರದಲ್ಲಿ, ಪೃಥ್ವಿರಾಜ್ ಚಲನಚಿತ್ರ ಸೂಪರ್‌ಸ್ಟಾರ್ ಆಗಿ ನಟಿಸಿದ್ದು, ಸೂರಜ್ ವೆಂಜರಮೂಡು ಮೋಟಾರ್ ಇನ್ಸ್‌ಪೆಕ್ಟರ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಒಂದು ತಪ್ಪುಗ್ರಹಿಕೆಯು ಇಬ್ಬರ ಅಹಂ ಪರಸ್ಪರ ಕ್ಲಾಷ್‌ಗೆ ಕಾರಣವಾಗುತ್ತದೆ. ಇಬ್ಬರು ಪರಸ್ಪರರ ಜೀವನವನ್ನು ನರಕವನ್ನಾಗಿಸಲು ಪ್ರಯತ್ನಿಸುತ್ತಾರೆ.

ಸ್ಕ್ರಿಪ್ಟ್‌ನಲ್ಲಿ ಕೆಲವು ಬದಲಾವಣೆಗಳೊಂದಿಗೆ ಸಿನಿಮಾವನ್ನು ಹಿಂದಿ ಪ್ರೇಕ್ಷಕರಿಗೆ ಪ್ರಸ್ತುತಪಡಿಸಲಾಗುತ್ತದೆ. ಯುಕೆ ನಲ್ಲಿ 40 ದಿನಗಳ ಶೂಟಿಂಗ್ ಮುಗಿಸಿ ಸಿನಿಮಾ ಜನವರಿ ತಿಂಗಳಲ್ಲಿ ತೆರೆ ಕಾಣಲಿದೆ.

Latest Videos

click me!