ಸಮಂತಾ-ನಗಚೈತನ್ಯ ವಿಚ್ಛೇದನೆ: ಸ್ಟಾರ್ ಜೋಡಿಗೆ ನಟಿ ಶ್ರೀರೆಡ್ಡಿ ಕಿವಿಮಾತಿದು

First Published | Sep 30, 2021, 12:01 PM IST
  • ಸಮಂತಾ - ನಾಗ ಚೈತನ್ಯ ವಿಚ್ಚೇದನೆ ಬಗ್ಗೆ ನಟಿ ಶ್ರೀರೆಡ್ಡಿ ಪ್ರತಿಕ್ರಿಯೆ
  • ಸ್ಯಾಮ್-ನಾಗ್‌ಗೆ ಶ್ರೀರೆಡ್ಡಿ ಕಿವಿ ಮಾತಿದು

ತೆಲುಗು ಚಿತ್ರರಂಗದ ಅತ್ಯಂತ ವಿವಾದಾತ್ಮಕ ಹೆಸರುಗಳಲ್ಲಿ ಒಂದಾದ ಶ್ರೀ ರೆಡ್ಡಿ ಮತ್ತೊಮ್ಮೆ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯರ ಬಗ್ಗೆ ಟೀಕೆ ಮಾಡಿ ಸುದ್ದಿಯಾಗಿದ್ದಾರೆ.  ಶ್ರೀ ರೆಡ್ಡಿ ಸೆಲೆಬ್ರಿಟಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಈ ಬಾರಿ ಅವರು ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಅವರು ಸುಂದರ ಜೋಡಿ. ಎಂದೆಂದಿಗೂ ಒಳ್ಳೆಯ ನೆನಪುಗಳು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ಶ್ರೀರೆಡ್ಡಿ. ಒಂದು ವಿಡಿಯೋ ಕೂಡ ವೈರಲ್ ಆಗುತ್ತಿದೆ. ಅದರಲ್ಲಿ ಶ್ರೀ ರೆಡ್ಡಿ ನೀವು ಇಬ್ಬರು ಒಟ್ಟಿಗೆ ಇರಬೇಕೆಂದು ನಾವು ಬಯಸುತ್ತೇವೆ ಎನ್ನುವುದನ್ನು ಕೇಳಬಹುದು. 

Tap to resize

ನೀವು ಸ್ಫೂರ್ತಿದಾಯಕ ದಂಪತಿಗಳಾಗಿರಬೇಕು. ಅನೇಕ ಜನರು ನಿಮ್ಮನ್ನು ನೋಡಿ ಸ್ಫೂರ್ತಿ ಪಡೆಯುತ್ತಾರೆ. ಏನಾದರೂ ಆಗಬಹುದು. ಆದರೆ ನೀವಿಬ್ಬರೂ ಒಟ್ಟಿಗೆ ಇರಿ. ಇದು ನನ್ನ ವಿನಂತಿ ಮಾತ್ರ ಎಂದಿದ್ದಾರೆ.

ಕಳೆದ ವರ್ಷ, ಶ್ರೀ ರೆಡ್ಡಿ ಸಮಂತಾ ಅಕ್ಕಿನೇನಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅವರು ಉದ್ಯಮದ ಪ್ರತಿಭಾವಂತ ನಟಿಯರನ್ನು ಗುರಿಯಾಗಿಸಿಕೊಂಡಿದ್ದರು. ಶ್ರೀ ರೆಡ್ಡಿ ತಮ್ಮ ಫೇಸ್‌ಬುಕ್‌ನಲ್ಲಿ ಸಮಂತಾ ನಿಂಬೆಹಣ್ಣು, ತ್ರಿಷಾ ದ್ರಾಕ್ಷಿ ನನ್ನ ಮುಂದೆ ಏನೂ ಅಲ್ಲ ಎಂದು ಹೇಳಿದ್ದರು.

ಶ್ರೀ ರೆಡ್ಡಿ ದಕ್ಷಿಣ ಉದ್ಯಮದ ನಿರ್ಮಾಪಕರು ಮತ್ತು ಕಾಸ್ಟಿಂಗ್ ಕೌಚ್ ಬಗ್ಗೆ ಆರೋಪಗಳನ್ನು ಮಾಡಿದ ನಂತರ 2018 ರಲ್ಲಿ ಭಾರೀ ಸುದ್ದಿಯಾಗಿದ್ದರು.

ಶ್ರೀ ರೆಡ್ಡಿ ನ್ಯಾಚುರಲ್ ಸ್ಟಾರ್ ನಾನಿ, ವಿಶಾಲ್, ಸುಂದರ್ ಸಿ, ರಾಘವ ಲಾರೆನ್ಸ್, ಕೊರಟಾಲ ಶಿವ, ವಿಶಾಲ್, ಅಬ್ರಿರಾಮ್ ದಗ್ಗುಬಾಟಿ ಮತ್ತು ಇತರರನ್ನು ಟಾರ್ಗೆಟ್ ಮಾಡಿದ್ದರು.

Latest Videos

click me!