ದುಲ್ಕರ್ ಸಲ್ಮಾನ್ Birtday: ಮಲಯಾಳಂ ಸೂಪರ್‌ಸ್ಟಾರ್ ಬಗ್ಗೆ ನಿಮಗೆಷ್ಷು ಗೊತ್ತು

First Published Jul 28, 2023, 5:52 PM IST

ಮಾಲಿವುಡ್‌ ಸೂಪರ್‌ಸ್ಟಾರ್‌ ದುಲ್ಕರ್ ಸಲ್ಮಾನ್‌ (Dulquer Salmaan) ಅವರಿಗೆ ಇಂದು 37ನೇ ಹುಟ್ಟುಹಬ್ಬದ ಸಂಭ್ರಮ. ಮಲಯಾಳಂ-ತಮಿಳು ಚಲನಚಿತ್ರೋದ್ಯಮದ ಈ ಯಶಸ್ವಿ ನಟದೊಡ್ಡ ಅಭಿಮಾನಿ ಬಳಗವನ್ನು  ಹೊಂದಿರುವ ದಕ್ಷಿಣ ಭಾರತದ ಫೇಮಸ್‌ ಸೆಲೆಬ್ರೆಟಿ. ದುಲ್ಕರ್ ಸಲ್ಮಾನ್‌ ಅವರ ಬರ್ತ್‌ಡೇ ಸಮಯದಲ್ಲಿ ಅವರ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌ ಇಲ್ಲಿದೆ

2016 ರಲ್ಲಿ ಭಾರತೀಯರಲ್ಲಿ ಅತ್ಯಂತ ಪ್ರಭಾವಶಾಲಿಯಾದ 50 ಜನರಲ್ಲಿ ದುಲ್ಕರ್ ಸಲ್ಮಾನ್ ಅವರಿಗೆ GQ 4ನೇ ಸ್ಥಾನ ನೀಡಿದೆ. ಅಷ್ಟೇ  ಅಲ್ಲ 2016 ರ ಅತ್ಯುತ್ತಮ ಪುರುಷರ ಪಟ್ಟಿಯಲ್ಲಿ ಅವರನ್ನು ಗುರುತಿಸಿದೆ.

.

ದುಲ್ಕರ್ ಸಲ್ಮಾನ್ 2014 ರಲ್ಲಿ ಚೆನ್ನೈನ ಅತ್ಯಂತ ಅಪೇಕ್ಷಣೀಯ ವ್ಯಕ್ತಿಗಳಲ್ಲಿ 7 ನೇ ಸ್ಥಾನ ಪಡೆದ ಏಕೈಕ ಮಲಯಾಳಂ ನಟ. ಅವರು 2014 ರಲ್ಲಿ ನಡೆದ ಜಾಗತಿಕ ಇಂಟರ್ನೆಟ್ ಸಮೀಕ್ಷೆಯಲ್ಲಿ ಐದನೇ ಸ್ಥಾನ ಪಡೆದರು.

Latest Videos


ದುಲ್ಕರ್ ಚೆನ್ನೈನಲ್ಲಿ ಡೆಂಟಲ್‌ ಬ್ಯುಸಿನೆಸ್‌ ಅನ್ನು ನಿರ್ವಹಿಸುತ್ತಿದ್ದಾರೆ. ನಟನೆಯ ಜೊತೆಗೆ ದುಲ್ಕರ್ ಮದರ್‌ಹುಡ್‌ ಆಸ್ಪತ್ರೆ ನಿರ್ದೇಶಕರೂ ಆಗಿದ್ದಾರೆ.
  

ವೇಫೇರರ್ ಫಿಲ್ಮ್ಸ್ಎಂಬ ತನ್ನಸ್ವಂತ ಚಲನಚಿತ್ರ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ಅವರು ಸಮೀರ್ ತಾಹಿರ್ ಅವರೊಂದಿಗೆ ನೀಲಕ್ಷಂ ಪಚ್ಚಕದಲ್ ಚುವನ್ನ ಭೂಮಿ ಸಿನಿಮಾಕ್ಕಾಗಿ ಅಸಿಸ್ಟ್‌ ಮಾಡಿದ್ದಾರೆ.
 

ನಟ ದುಲ್ಕರ್ ಪ್ರಾಥಮಿಕ ಶಿಕ್ಷಣವನ್ನು ಕೊಚ್ಚಿಯ ಟೊಕ್-ಎಚ್ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದರು ಮತ್ತು ನಂತರ ತಮ್ಮ ಮಾಧ್ಯಮಿಕ ಶಿಕ್ಷಣಕ್ಕಾಗಿ ಚೆನ್ನೈನ ಶಿಷ್ಯ ಶಾಲೆಯಲ್ಲಿ ಅಧ್ಯಯನ ಮಾಡಿದರು.

 ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಬ್ಯುಸಿನೆಸ್‌ ಮ್ಯಾನೆಜ್ಮೆಂಟ್‌ನಲ್ಲಿ  ತಮ್ಮ ಪದವಿಯನ್ನು ಪೂರ್ಣಗೊಳಿಸಿದ ದುಲ್ಕರ್‌  ಅವರು ತಮ್ಮ ನಟನಾ ವೃತ್ತಿಜೀವನದ ಮೊದಲು ದುಬೈನ ಐಟಿ ಬ್ಯುಸಿನೆಸ್‌ನಲ್ಲಿ ಕೆಲಸ ಮಾಡುತ್ತಿದ್ದರು.
 

ಚೆನ್ನೈನಲ್ಲಿರುವ ಉತ್ತರ ಭಾರತದ ಮುಸ್ಲಿಂ ಕುಟುಂಬದಿಂದ ಬಂದ  ದುಲ್ಕರ್ ಸಲ್ಮಾನ್ ಅವರ ಪತ್ನಿ ಅಮಲ್ ಸೋಫಿಯಾ ವಾಸ್ತುಶಿಲ್ಪಿ. ದುಲ್ಕರ್ ಮತ್ತು ಅಮಲ್ ದಂಪತಿಗೆ ಒಬ್ಬ ಮಗಳಿದ್ದಾಳೆ.

ದುಲ್ಕರ್ ಸಲ್ಮಾನ್  ಅಕ್ಟೋಬರ್ 2019 ರ ಆವೃತ್ತಿಗಾಗಿ ವೋಗ್ ಇಂಡಿಯಾದ ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು ಮತ್ತು  ಈ ಗೌರವ ಪಡೆದ ಕೇರಳದ ಮೊದಲ ನಟರಾದರು.

ಹಾಡುವ ಹವ್ಯಾಸ ಹೊಂದಿರುವ ದುಲ್ಕರ್‌ ಅವರು  ಎಬಿಸಿಡಿ, ಮಂಗ್ಲೀಷ್ ಮತ್ತು ಚಾರ್ಲಿ ಚಿತ್ರಗಳಲ್ಲಿನ ಹಾಡುಗಳಿಗೆ ತಮ್ಮ ಧ್ವನಿ ನೀಡಿದ್ದಾರೆ. ಇದರ ಜೊತೆಗ ಅವರು ಕಾರುಗಳ ವ್ಯಾಪಾರದ ವೆಬ್ ಪೋರ್ಟಲ್‌ನ ಮಾಲೀಕರಾಗಿದ್ದಾರೆ.

click me!