12 ನೇ ತರಗತಿ ಫೇಲ್‌ ಆಗಿದ್ಗಕ್ಕೆ ಧನುಷ್‌ಗೆ ಬ್ರೇಕ್ ಅಪ್ ಆಗಿತ್ತಂತೆ!

First Published | Jul 28, 2023, 5:35 PM IST

ಜುಲೈ 28, 1983 ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಧನುಷ್ (Dhanush) ಪ್ರಸಿದ್ಧ ನಟ, ಹಿನ್ನೆಲೆ ಗಾಯಕ ಮತ್ತು ಚಲನಚಿತ್ರ ನಿರ್ಮಾಪಕರ. ಇವರು ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಾರೆ. ಧನುಷ್ ಅವರು ಅಭಿನಯ ಮತ್ತು ಡೌನ್ ಟು ಅರ್ಥ್ ನಡತೆಯಿಂದ ವಿಶ್ವಾದ್ಯಂತ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗಳಿಸಿದ್ದಾರೆ. ಅವರ 40 ನೇ ಹುಟ್ಟುಹಬ್ಬದಂದು, ಈ ತಮಿಳು ಸೂಪರ್‌ಸ್ಟಾರ್ ಬಗ್ಗೆ ಕೆಲವು ಇಂಟರ್ಸ್ಟಿಂಗ್‌ ಸಂಗತಿಗಳು ಇಲ್ಲಿವೆ.

Dhanush

ವೆಂಕಟೇಶ್ ಪ್ರಭು ಕಸ್ತೂರಿ ರಾಜ್ ಎಂಬುದು ಧನುಷ್‌  ಅವರ ಮೂಲ ಹೆಸರು. ತಂದೆ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಕಸ್ತೂರಿ ರಾಜ ಮತ್ತು ಅವರ ಸಹೋದರ ಪ್ರತಿಭಾವಂತ ನಟ ಸೆಲ್ವರಾಘವನ್.

ಧನುಷ್ ತನ್ನ 16 ನೇ ವಯಸ್ಸಿನಲ್ಲಿ ತನ್ನ ತಂದೆ ನಿರ್ದೇಶನದ ಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು. ಅವರ ತಂದೆ ಸಹಾಯಕ ನಿರ್ದೇಶಕರಾಗುವ ಮೊದಲು ಗಿರಣಿ ಕೆಲಸಗಾರರಾಗಿದ್ದರು.

Tap to resize

ಧನುಷ್ 16 ವರ್ಷದವನಾಗಿದ್ದಾಗ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದರಂತೆ, ಆದರೆ ಧನುಷ್‌ 12 ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣವಾದಾಗ ಅವಳು ನಟನನ್ನು ತ್ಯಜಿಸಿದಳು.

2002 ರಲ್ಲಿ  ತುಳ್ಳುವದೋ ಇಳಮೈ ಎಂಬ ತಮಿಳು ಚಲನಚಿತ್ರದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದ ಧನುಷ್ ತಮ್ಮ ಪಾತ್ರಕ್ಕಾಗಿ ವಿಮರ್ಶಾತ್ಮಕ ಪ್ರಶಂಸೆಯನ್ನು ಪಡೆದರು.

ಆದರೆ  ಹಿಟ್ ಚಿತ್ರ  ಪುದುಪೆಟ್ಟೈ  ಸಿನಿಮಾದಲ್ಲಿನ ಕೊಕ್ಕಿ ಕುಮಾರ್ ಪಾತ್ರ ಅವರಿಗೆ  ಖ್ಯಾತಿ ತಂದುಕೊಟ್ಟಿತು. ಈ ಪಾತ್ರವು ಅತ್ಯಂತ ನಿಪುಣ ನಟರಲ್ಲಿ ಒಬ್ಬರಾಗಿ ಅವರನ್ನು ಸ್ಥಾಪಿಸಿತು.

ತಮ್ಮ ವೃತ್ತಿ ಜೀವನದಲ್ಲಿ ಧನುಷ್ ಇಲ್ಲಿವರೆಗೆ ಲೆಕ್ಕವಿಲ್ಲದಷ್ಟು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ, ವಿವಿಧ ಪುರಸ್ಕಾರ ಮತ್ತು ಬಹುಮಾನಗಳನ್ನು ಗಳಿಸಿದ್ದಾರೆ ಮತ್ತು ಅವರ ಸಹಜ ನಟನಾ ಸಾಮರ್ಥ್ಯಗಳಿಗಾಗಿ ಮೆಚ್ಚುಗೆ ಗಳಿಸಿದ್ದಾರೆ.

ಇದರ ಜೊತೆಗೆ ಧನುಷ್ ಒಬ್ಬ ಪ್ರತಿಭಾವಂತ ಹಿನ್ನೆಲೆ ಗಾಯಕ, ಅವರು ತಮಿಳು ಚಿತ್ರರಂಗದ ಹಲವಾರು ಪ್ರಸಿದ್ಧ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

ಇವರ ವೈ ದಿಸ್ ಕೊಲವೆರಿ ಡಿ  ಹಾಡು ಜಾಗತಿಕವಾಗಿ ಜನಪ್ರಿಯವಾಯಿತು. ಧನುಷ್‌ ಅವರು ತಮಿಳು ಹಾಡುಗಳನ್ನು ರಚಿಸುತ್ತಾರೆ ಮತ್ತು ಹಾಡುತ್ತಾರೆ.

ಧನುಷ್ ಒಬ್ಬ ಶಿವಭಕ್ತರಾಗಿದ್ದು ಅವರ ಇಬ್ಬರು ಪುತ್ರರಿಗೆ ಯಾತ್ರಾ (ತೀರ್ಥಯಾತ್ರೆ) ಮತ್ತು ಲಿಂಗ (ಶಿವಲಿಂಗಕ್ಕೆ ಸಮಾನಾರ್ಥಕ) ಎಂದು ಹೆಸರಿಟ್ಟಿದ್ದಾರೆ. ಆದರೆ ಧನುಷ್‌ಗೆ ವಿಗ್ರಹಾರಾಧನೆಯಲ್ಲಿ ನಂಬಿಕೆ ಇಲ್ಲ.

ಸೌತ್‌ ಇಂಡಿಯಾದ ಸೂಪರ್‌ಸ್ಟಾರ್‌ ಧನುಷ್ ಅವರು  ಕಾಕ ಮುತ್ತೈ ಮತ್ತು ವಿಸಾರಣೈ ಚಿತ್ರಗಳಿಗೆ ನಿರ್ಮಾಪಕರಾಗಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು.
 

Latest Videos

click me!