Published : Jul 28, 2023, 05:48 PM ISTUpdated : Jul 28, 2023, 06:08 PM IST
ಸೌತ್ ಬ್ಯೂಟಿ ತಮನ್ನಾರ ಹೊಸ ಫೋಟೋ ಇಂಟರ್‌ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಕೇವಲ ನಟಿಯ ಫ್ಯಾನ್ಸ್ ಮಾತ್ರವಲ್ಲದೆ ಅವರ ಬಾಯ್‌ಫ್ರೆಂಡ್ ವಿಜಯ್ ವರ್ಮಾ ಸಹ ತಮ್ಮ ಲೇಡಿ ಲವ್ ತಮನ್ನಾರ ಲುಕ್‌ಗೆ ಫುಲ್ ಫಿದಾ ಆಗಿದ್ದಾರೆ ಮತ್ತು ವಿಜಯ್ ವರ್ಮಾ ತಮನ್ನಾರ ಫೋಟೋಗೆ ಮಾಡಿರುವ ಕಾಮೆಂಟ್ ಎಲ್ಲರ ಗಮನ ಸೆಳೆದು ನ್ಯೂಸ್ ಆಗಿದೆ.
ನಟಿ ತಮನ್ನಾ ಭಾಟಿಯಾ ಮುಂಬೈನಲ್ಲಿ ನಡೆದ ಸೂಪರ್ ಹಿಟ್ ಕಾವಾಲಾ ಹಿಂದಿ ಆವೃತ್ತಿ ತು ಆ ದಿಲ್ಬರಾ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.
211
ಅದರ ನಂತರ ನಟಿ ತಮನ್ನಾ ಭಾಟಿಯಾ ಅವರು Instagram ಪ್ರೊಫೈಲಲ್ಲಿ ತಮ್ಮ ಕೆಲವು ಆಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
311
ಹಂಚಿಕೊಂಡಿರುವ ಫೋಟೋಗಳಲ್ಲಿ ಅವರು ಬಿಳಿ ಟಾಪ್ ಮತ್ತು ಗ್ರೇ ಬ್ಯಾಗಿ ಪ್ಯಾಂಟ್‌ನಲ್ಲಿ ಸಖತ್ ಗಾರ್ಜಿಯಸ್ ಆಗಿ ಕಾಣಿಸಿಕೊಂಡಿದ್ದಾರೆ.
411
'ಕಾವಾಲಾ ಸಾಕಷ್ಟು ಸಿಗುತ್ತಿಲ್ಲವೇ? ಇಲ್ಲಿದೆ ತು ಆ ದಿಲ್ಬರಾ ' ಎಂಬ ಶೀರ್ಷಿಕೆಯನ್ನು ತಮನ್ನಾ ಫೋಟೋಗೆ ಬರೆದಿದ್ದಾರೆ ಮತ್ತು ಅದರೊಂದಿಗೆ ಕೆಲವು ಫೈರ್ ಎಮೋಜಿಗಳನ್ನು ಹಾಕಿದ್ದಾರೆ.
511
ತಮನ್ನಾರ ಈ ಫೋಟೋಗಳ ಮೊದಲ ಕಾಮೆಂಟ್ ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಅದು ನಟಿಯ ಬಾಯ್‌ಫ್ರೆಂಡ್ ವಿಜಯ್ ವರ್ಮಾ ಅವರದ್ದು.
611
'ಮಾನ್ಸೂನ್‌ನಲ್ಲಿ ಶಾಖದ ಅಲೆ? ಎಂದು ತಮ್ಮ ಗೆಳತಿಯ ಫೋಟೋಗೆ ಕಾಮೆಂಟ್ ಮಾಡಿ ಅದರೊಂದಿಗೆ ಎಮೋಜಿಯನ್ನು ವಿಜಯ್ ವರ್ಮಾ ಹಂಚಿಕೊಂಡಿದ್ದಾರೆ.
711
ತು ಆ ದಿಲ್ಬರಾ ಬಿಡುಗಡೆ ಸಮಾರಂಭದಲ್ಲಿ ಕಾವಾಲಾ ಹಿಂದಿ ಆವೃತ್ತಿಗೆ ತಮನ್ನಾ ಅಭಿಮಾನಿಗಳೊಂದಿಗೆ ನೃತ್ಯ ಮಾಡಿದರು. ಕಿಲ್ಲರ್ ಮೂವ್ಸ್ ಮೂಲಕ ಎಲ್ಲರನ್ನೂ ರಂಜಿಸಿದ್ದರು.
811
ತಮನ್ನಾ ಮತ್ತು ವಿಜಯ್ ವರ್ಮಾ ಸಂಬಂಧ ಚರ್ಚೆಯ ವಿಷಯವಾಗಿದೆ ಮತ್ತು ತಮ್ಮ ಮೊದಲ ಆನ್-ಸ್ಕ್ರೀನ್ ಲಸ್ಟ್ ಸ್ಟೋರೀಸ್ 2 ರ ಪ್ರಚಾರದ ಸಮಯದಲ್ಲಿ ಅವರು ಸಾರ್ವಜನಿಕವಾಗಿ ತಮ್ಮ ಪ್ರೀತಿ ಬಗ್ಗೆ ಮಾತನಾಡಿದ್ದಾರೆ
911
'ನಾನು ತುಂಬಾ ಕಾಳಜಿ ವಹಿಸುವ ವ್ಯಕ್ತಿ. ಅವನು ನನ್ನ ಸಂತೋಷ' ಎಂದು ವಿಜಯ್ ವರ್ಮಾ ಬಗ್ಗೆ ತಮನ್ನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ
1011
'ನಾನು ಸಂತೋಷವಾಗಿದ್ದೇನೆ ಮತ್ತು ಅವಳನ್ನು ಪ್ರೀತಿಸುತ್ತಿದ್ದೇನೆ' ಎಂದು ವಿಜಯ್ ವರ್ಮಾ ಕೂಡ ಸಂಭಾಷಣೆಯೊಂದರಲ್ಲಿ ಹೇಳಿದರು.
1111
ವಿಲನ್ ಖ್ಯಾತಿ ಗಳಿಸಿದ ವಿಜಯ್ ವರ್ಮಾ,' ನಾನು ನನ್ನ ವಿಲನ್ ಯುಗವನ್ನು ಕೊನೆಗೊಳಿಸಿದ್ದೇನೆ ಮತ್ತು ಜೀವನದ ಪ್ರಣಯ ಯುಗ ಹಂತಕ್ಕೆ ಬಂದಿದ್ದೇನೆ ಎಂದು ಕರೆಯುತ್ತೇನೆ' ಎಂದು ಹೇಳಿಕೊಂಡಿದ್ದಾರೆ.