ಮುಂಬೈನಿಂದ ಗೋವಾಗೆ ಪ್ರಯಾಣಿಸುತ್ತಿದ್ದ ಐಷರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ(Drugs Party) ಮೇಲೆ ಎನ್‌ಸಿಬಿ(NCB) ದಾಳಿ ನಡೆಸಿತ್ತು. ಈ ರೈಡ್‌ನಲ್ಲಿ ಅರೆಸ್ಟ್ ಆದ ಆರ್ಯನ್ ಖಾನ್ ಜೈಲಿನಲ್ಲಿದ್ದಾರೆ. ಬಿಡುಗಡೆಯಾದ ಮೇಲೆ ಬಡವರ ಹಾಗೂ ಕೆಳವರ್ಗದ ಜನರ ಏಳಿಗೆಗಾಗಿ ಕೆಲಸ ಮಾಡುತ್ತೇನೆ ಎಂದು ಆರ್ಯನ್ ಖಾನ್(Aryan Khan) ಹೇಳಿದ್ದಾರೆ.
ಬಾಲಿವುಡ್ ಸ್ಟಾರ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅ.02ರಂದು ಎನ್‌ಸಿಬಿಯಿಂದ ಅರೆಸ್ಟ್ ಆಗಿದ್ದಾರೆ. ಎನ್‌ಸಿಬಿ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ(Sameer Wankhede) ಅವರ ಜೊತೆ ಆರ್ಯನ್ ಖಾನ್ ಕೌನ್ಸೆಲಿಂಗ್ ಸಮಯದಲ್ಲಿ ಮಾತನಾಡಿದ್ದಾರೆ.
ಬಡಜನರ ಆರ್ಥಿಕ ಬೆಳವಣಿಗೆಗೆ ನೆರವು: ನೀವು ನನ್ನ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತೇನೆ ಎಂದು ಆರ್ಯನ್ ಸಮೀರ್ ಅವರಿಗೆ ಹೇಳಿದ್ದಾರೆ. ಸಮಾಲೋಚನೆ ಸಂದರ್ಭ ಭವಿಷ್ಯದಲ್ಲಿ ತನ್ನ ಹೆಸರನ್ನು ಹಾಳು ಮಾಡುವಂತಹ ಕೆಲಸವನ್ನು ತಾನು ಎಂದಿಗೂ ಮಾಡುವುದಿಲ್ಲ ಎಂದು ಖಾನ್ ಹೇಳಿದ್ದಾರೆ.
ಒಂದು ಮೂಲದ ಪ್ರಕಾರ ಖಾನ್ ವಾಂಖೇಡೆ ಮತ್ತು ಸಾಮಾಜಿಕ ಕಾರ್ಯಕರ್ತರಲ್ಲಿ ತನ್ನ ಬಿಡುಗಡೆ ನಂತರ, ಬಡವರ ಮತ್ತು ದೀನದಲಿತರ ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಅಧಿಕಾರಿಗಳು ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ, ಇಸ್ಮೀತ್ ಸಿಂಗ್, ಮೊಹಕ್ ಜಸ್ವಾಲ್, ಗೋಮಿತ್ ಚೋಪ್ರಾ, ನೂಪುರ್ ಸತಿಜಾ ಮತ್ತು ವಿಕ್ರಾಂತ್ ಚೋಕರ್ ಅವರನ್ನು ರೇವ್ ಪಾರ್ಟಿಯಿಂದ ಬಂಧಿಸಿದ್ದಾರೆ. ದಾಳಿಯ ಸಮಯದಲ್ಲಿ ಅಧಿಕಾರಿಗಳು ಚರಸ್, ಮೆಫೆಡ್ರೋನ್ (MD), MDMA ಮತ್ತು ಕೊಕೇನ್ ಅನ್ನು ವಶಪಡಿಸಿಕೊಂಡರು.
ಖಾನ್ ಮುಂಬೈ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ಸಲ್ಲಿಸಿದರೂ ಅದನ್ನು ನಿರಾಕರಿಸಲಾಗಿದೆ. ಇತರ ಆರೋಪಿಗಳೊಂದಿಗೆ ಆತನನ್ನು ಅಕ್ಟೋಬರ್ 7 ರವರೆಗೆ ಕಸ್ಟಡಿಗೆ ಕಳುಹಿಸಲಾಯಿತು. ಅಕ್ಟೋಬರ್ 7 ರಂದು ನ್ಯಾಯಾಲಯವು ಖಾನ್ ಮತ್ತು ಇತರ 7 ಮಂದಿಯನ್ನು 14 ದಿನಗಳ ಕಸ್ಟಡಿಗೆ ಕಳುಹಿಸಿತು.
ನಂತರ ಅವರನ್ನು ಆರ್ಥರ್ ರಸ್ತೆ ಜೈಲಿಗೆ ಕರೆದೊಯ್ಯಲಾಯಿತು. ಖಾನ್ ಅವರ ಮನವಿಯ ಕೊನೆಯ ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತು ಮತ್ತು ವಿಚಾರಣೆಯನ್ನು ಅಕ್ಟೋಬರ್ 20 ಕ್ಕೆ ಮುಂದೂಡಿತು.