ಸ್ಟಾರ್ ಆಗಿರೋರಲ್ಲಿ ಅನೇಕರು ಆಕಸ್ಮಿಕವಾಗಿ ಸಿನಿಮಾಗೆ ಬಂದವರು. ಡಾಕ್ಟರ್, ಕಲೆಕ್ಟರ್ ಆಗ್ಬೇಕು ಅಂತ ಕನಸು ಕಂಡವ್ರು ಸಿನಿಮಾಗೆ ಬಂದಿದ್ದಾರೆ. ರಾಶಿ ಖನ್ನಾ ಕೂಡ ಅಂಥವರೇ. ಚೆನ್ನಾಗಿ ಓದಿ ಐಎಎಸ್ ಆಫೀಸರ್ ಆಗ್ಬೇಕು ಅಂತ ಕನಸು ಕಂಡಿದ್ರು. ಆದ್ರೆ ಆಕೆಯ ಜರ್ನಿ ಸಿನಿಮಾ ಕಡೆ ತಿರುಗಿತು.
27
1990 ನವೆಂಬರ್ 30 ರಂದು ದೆಹಲಿಯಲ್ಲಿ ಹುಟ್ಟಿದ ರಾಶಿ ಖನ್ನಾ ಓದಿನಲ್ಲಿ ಟಾಪರ್. ದೆಹಲಿ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್‌ನಲ್ಲಿ ಪದವಿ ಪಡೆದರು. ಐಎಎಸ್ ಆಫೀಸರ್ ಆಗಬೇಕು ಅನ್ನೋ ಆಸೆ ಇತ್ತು. ಪದವಿ ಓದುವಾಗ ಜಾಹೀರಾತಿಗೆ ಕಾಪಿರೈಟರ್ ಆಗಿ ಕೆಲಸ ಮಾಡಿದ್ರು.
37
ಮಾಡೆಲಿಂಗ್ ಅವಕಾಶ ಬಂದಾಗ ಬಿಡಲಿಲ್ಲ ರಾಶಿ. ಮಾಡೆಲಿಂಗ್ ಮೂಲಕ ಆಕೆಯ ಕೆರಿಯರ್ ತಿರುವು ಪಡೆಯಿತು. ಪದವಿ ಓದುವಾಗಲೇ ಮಾಡೆಲಿಂಗ್ ಶುರು ಮಾಡಿದ ರಾಶಿ, ಸಿನಿಮಾ ಕಡೆಗೆ ಮುಖ ಮಾಡಿದ್ರು. ಊಹಲು ಗುಸಗುಸಲಾಡೇ (2014) ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು.
ತೆಲುಗಿನಲ್ಲಿ ಸಾಲು ಸಾಲು ಸಿನಿಮಾ ಮಾಡಿದ ರಾಶಿ ಖನ್ನಾ, ಸುಪ್ರೀಂ, ತೊಲಿ ಪ್ರೇಮ, ವೆಂಕಿ ಮಾಮ, ಥ್ಯಾಂಕ್ಯೂ, ರಾಜಾ ದಿ ಗ್ರೇಟ್, ಹೈಪರ್, ಸರ್ದಾರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ.
57
ಪ್ರತಿ ಸಿನಿಮಾಗೆ ರೂ. 1 ಕೋಟಿ ಸಂಭಾವನೆ ಪಡೆಯುತ್ತಾರಂತೆ ರಾಶಿ. ಆಕೆಯ ಒಟ್ಟು ಆಸ್ತಿ ಸುಮಾರು 66 ಕೋಟಿ ಇರಬಹುದು ಅಂತ ಅಂದಾಜು. ಮಾಡೆಲಿಂಗ್ ಮೂಲಕ ಶುರುವಾದ ಜರ್ನಿ ಈಗ ಕೋಟಿ ಸಂಭಾವನೆ ಪಡೆಯುವ ನಟಿಯಾಗಿದ್ದಾರೆ.
67
ಕೆರಿಯರ್ ಆರಂಭದಲ್ಲಿ ದಪ್ಪ ಇದ್ದ ರಾಶಿ ಖನ್ನಾ ಈಗ ಸ್ಲಿಮ್ ಆಗಿದ್ದಾರೆ. ಫಿಟ್‌ನೆಸ್ ಮೇಲೆ ಗಮನ ಹರಿಸಿ, ಜಿಮ್‌ನಲ್ಲಿ ವರ್ಕೌಟ್ ಮಾಡ್ತಾರೆ. ಆದ್ರೆ ತೆಲುಗು ಮತ್ತು ಬಾಲಿವುಡ್‌ನಲ್ಲಿ ಹೆಚ್ಚು ಅವಕಾಶಗಳು ಸಿಗ್ತಿಲ್ಲ.
77
ರಾಶಿ ಖನ್ನಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆ ಇದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಜಾಸ್ತಿ ಇದ್ದಾರೆ. ಫೋಟೋ, ಸ್ಟೋರಿ ಹಾಕಿ ಲಕ್ಷ ಲಕ್ಷ ಸಂಪಾದಿಸ್ತಿದ್ದಾರೆ.