ಶೋಭನ್ ಬಾಬು ಅವರಿಗೆ ಒಂದು ಫಾರ್ಮ್ ಹೌಸ್ ಇತ್ತು. ಅದು ಅವರ ಖಾಸಗಿ ಜಾಗ. ಆ ಫಾರ್ಮ್ ಹೌಸ್ ಒಳಗೆ ಯಾರನ್ನೂ ಬಿಡುತ್ತಿರಲಿಲ್ಲ. ನನ್ನ ಮಗಳ ಮದುವೆಗೆ ಮದುವೆ ಮಂಟಪ ಸಿಗುತ್ತಿಲ್ಲ, ನಿಮ್ಮ ಫಾರ್ಮ್ ಹೌಸ್ ಕೊಟ್ಟರೆ ಅಲ್ಲಿ ಮದುವೆ ಮಾಡುತ್ತೇನೆ ಅಂತ ಶೋಭನ್ ಬಾಬು ಅವರನ್ನು ಕೇಳಿದೆ. ಅದಕ್ಕೆ ಅವರು, ಅಲ್ಲಿಗೆ ನಾನು ಯಾರನ್ನೂ ಬಿಡುವುದಿಲ್ಲ, ಸಿನಿಮಾ ಶೂಟಿಂಗ್‌ಗೂ ಕೊಡುವುದಿಲ್ಲ ಅಂದರು. ಮುಹೂರ್ತ ಬದಲಾಯಿಸಿ ಬೇರೆ ಮದುವೆ ಮಂಟಪ ನೋಡಬೇಕು ಅಂತ ಅಂದುಕೊಂಡೆ. ಆಗ ಅವರು, ನಮ್ಮ ಮಗಳ ಮದುವೆ ಅಲ್ವಾ, ಕೊಡದೆ ಹೇಗೆ? ಇಲ್ಲೇ ಮಾಡೋಣ ಅಂದರು.