2023ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋ ಯಾರು ಗೊತ್ತಾ? ಎಷ್ಟು ಕೋಟಿ ಅಂದಾಜಿಸಿ!

Published : Dec 29, 2023, 10:56 PM IST

ಕಳೆದ ಮೂರ್ನಾಲ್ಕು ವರ್ಷಗಳಿಂದ ಬಾಲಿವುಡ್‌ ಸಿನಿಮಾಗಳಿಗಿಂತ ದಕ್ಷಿಣದ ತೆಲುಗು, ತಮಿಳು, ಕನ್ನಡ ಹಾಗೂ ಮಲೆಯಾಳಂ ಪ್ಯಾನ್‌ ಇಂಡಿಯಾ ಚಿತ್ರಗಳೇ ಭಾರಿ ಕಮಾಲ್‌ ಮಾಡಿವೆ. ಹಾಗಾದರೆ 2023ರಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆದ ನಟ ಯಾರೆಂದು ಗೊತ್ತಾ ಅದು ಕೂಡ ದಕ್ಷಿಣ ಭಾರತೀಯ ನಟರೇ ಆಗಿದ್ದಾರೆ.

PREV
19
2023ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋ ಯಾರು ಗೊತ್ತಾ? ಎಷ್ಟು ಕೋಟಿ ಅಂದಾಜಿಸಿ!

ಹೌದು, 2023ರಲ್ಲಿ, ದಕ್ಷಿಣ ಭಾರತದ ಸ್ಟಾರ್‌ ನಟರು ಮತ್ತು ಬಾಲಿವುಡ್‌ನ ದೊಡ್ಡ ಸ್ಟಾರ್ಸ್‌ಗಳೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಸ್ಪರ್ಧಿಸಿದರು.ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ದಕ್ಷಿಣದ ಸ್ಟಾರ್ಸ್‌ಗಳು ಸಂಭಾವನೆ ಪಡೆಯುವುದರಲ್ಲೂ ಬಾಲಿವುಡ್‌ ಮೀರಿಸಿದ್ದಾರೆ. 
 

29

ಅಂದರೆ, ಈ ವರ್ಷ (2023ರಲ್ಲಿ) ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್‌ ನಾಯಕರನ್ನು ಹಿಂದಿಕ್ಕಿ ಅತಿ ಹೆಚ್ಚು ಸಂಭಾವನೆ ಪಡೆದ ದಾಖಲೆಯನ್ನು ಕೂಡ ದಕ್ಷಿಣದ ನಾಯಕರೇ ಪಡೆದುಕೊಂಡಿದ್ದಾರೆ.

39

ಈ ವರ್ಷ ಸ್ಟಾರ್ ಹೀರೋಗಳ ಚಿತ್ರಗಳು ಉತ್ತರ ಮತ್ತು ದಕ್ಷಿಣ ಎರಡರಲ್ಲೂ ಸದ್ದು ಮಾಡಿವೆ. ಕೆಲವು ಚಿತ್ರಗಳು ವರ್ಷದ ಆರಂಭದಲ್ಲಿ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ಪಡೆದಿವೆ.

49

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಶಾರುಖ್ ಖಾನ್ ಸತತ 2000 ಕೋಟಿ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಸಲ್ಮಾನ್ ಕೂಡ 'ಟೈಗರ್ 3' ಮೂಲಕ ಸದ್ದು ಮಾಡಿದರು. ತೆಲುಗಿನಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಆದಿಪುರುಷ್  ವರ್ಷಾರಂಭದಲ್ಲಿ ಬಿಡುಗಡೆ ಆದರೆ, ವರ್ಷಾಂತ್ಯದಲ್ಲಿ ‘ಸಲಾರ್’ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
 

59

ಕಾಲಿವುಡ್ ಸ್ಟಾರ್ ಹೀರೋಗಳಾದ ಥಲಪತಿ ಮತ್ತು ಧನುಷ್ ಕೂಡ ತಮ್ಮ ಸಿನಿಮಾಗಳ ಮೂಲಕ ಮನರಂಜನೆ ನೀಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಕೂಡ ‘ಜೈಲರ್’ ಸಿನಿಮಾದೊಂದಿಗೆ ಬಂದಿದ್ದರು. ಆದರೆ ಎಷ್ಟೋ ತಾರೆಯರು ತಮ್ಮ ಸಿನಿಮಾಗಳ ಮೂಲಕ ಮನರಂಜನೆ ನೀಡಿದ್ದಾರೆ.
 

69

ಕನ್ನಡದ ಸ್ಟಾರ್‌ ನಾಯಕರು ಹಾಗೂ ಪ್ಯಾನ್‌ ಇಂಡಿಯಾ ಹೀರೋಗಳಾದ ರಾಕಿಂಗ್‌ ಸ್ಟಾರ್‌ ಯಶ್‌, ಕಿಚ್ಚ ಸುದೀಪ್, ರಿಷಭ್ ಶೆಟ್ಟಿ, ರಕ್ಷಿತ್‌ ಶೆಟ್ಟಿ ಇವರ ದೊಡ್ಡ ಚಿತ್ರಗಳು ಬಿಡಗಡೆ ಆಗಿಲ್ಲ. ಇನ್ನು ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜ ಚಿತ್ರ ಸ್ವಲ್ಪ ಮಟ್ಟಿಗೆ ಪ್ಯಾನ್‌ ಇಂಡಿಯಾದಲ್ಲಿ ಕಮಾಲ್‌ ಮಾಡಿದೆ.
 

79

ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಕ್ರೇಜ್ ಜೊತೆಗೆ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ದಕ್ಷಿಣದ ನಾಯಕರು ಪಡೆದುಕೊಂಡಿದ್ದಾರೆ. ಇನ್ನು ಸಂಭಾವನೆಯಲ್ಲಿ ನಟರು 100 ಕೋಟಿ ರೂ.ಗೂ ಹೆಚ್ಚು ಹಣ ಪಡೆಯುತ್ತಿದ್ದಾರೆ. ಸದ್ಯ ಪ್ರಭಾಸ್, ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ 100 ಕೋಟಿ ರೂ. ಗಳಿಕೆ ಮಾಡುತ್ತಿರುವ ನಾಯಕರಾಗಿದ್ದಾರೆ.
 

89

ಆದರೆ, ಈ ವರ್ಷ ಸೂಪರ್ ಸ್ಟಾರ್ ರಜನಿಕಾಂತ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕ ಎಂಬ ದಾಖಲೆ ನಿರ್ಮಿಸಿದ್ದಾರೆ. ಬ್ಲಾಕ್ ಬಸ್ಟರ್ ಚಿತ್ರ ಜೈಲರ್ ಚಿತ್ರಕ್ಕೆ 210 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ಭಾರತದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಹೀರೋ ಸೂಪರ್ ಸ್ಟಾರ್ ರಜನಿಕಾಂತ್‌ ಆಗಿದ್ದಾರೆ.

99

2023ರಲ್ಲಿ ರಜನಿಕಾಂತ್ ಸಂಭಾವನೆಯಲ್ಲಿ ದಾಖಲೆ ನಿರ್ಮಿಸಿದ್ದಾರೆ. ಆ ನಂತರ ಪ್ರಭಾಸ್ 'ಸಲಾರ್' ಚಿತ್ರಕ್ಕಾಗಿ ಭಾರೀ ಹಣ ವಸೂಲಿ ಮಾಡಿದ್ದಾರಂತೆ. ಅಲ್ಲದೆ, ಶಾರುಖ್ ಖಾನ್ ಮತ್ತು ಸಲ್ಮಾನ್ ಕೂಡ ತಮ್ಮ ಇತ್ತೀಚಿನ ಚಿತ್ರಗಳಿಗೆ ಹೆಚ್ಚಿನ ಸಂಭಾವನೆಯನ್ನು ಪಡೆದಿದ್ದಾರೆ ಎಂದು ಕೇಳಿಬರುತ್ತಿದೆ.

Read more Photos on
click me!

Recommended Stories