ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಸಿನಿಮಾದಲ್ಲಿ ಹೀರೋಯಿನ್ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇರಲ್ಲ. ಆದ್ರೆ ಈ ಸಿನಿಮಾದಲ್ಲಿ ವೆಂಕಿ, ಮಹೇಶ್‌ರನ್ನ ಡಾಮಿನೇಟ್ ಮಾಡೋ ರೀತಿಯಲ್ಲಿ ಅಂಜಲಿ ಪಾತ್ರ ಇತ್ತು. ಅವರ ಪಾತ್ರದ ಸುತ್ತಲೂ ಕಥೆ ಸಾಗುತ್ತೆ. ಇದರಲ್ಲಿ ಬೇರೆ ಪಾತ್ರಗಳೂ ಇವೆ. ಆದ್ರೆ ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಇದು ನಿರ್ದೇಶಕ ಶ್ರೀಕಾಂತ್ ಅಡ್ಡಾಳರ ಪ್ರತಿಭೆ. ಒಟ್ಟಾರೆಯಾಗಿ ವಿದ್ಯಾ ಬಾಲನ್ ವೆಂಕಟೇಶ್ ಜೊತೆ ನಟಿಸೋ ಅವಕಾಶ ಕಳೆದುಕೊಂಡ್ರು. 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು' ಸಿನಿಮಾದಲ್ಲಿ ವೆಂಕಿ ಜೊತೆ ಅಂಜಲಿ, ಮಹೇಶ್ ಜೊತೆ ಸಮಂತಾ ನಟಿಸಿದ್ರು.