ಟೈಮ್‌ಲೆಸ್ ಬ್ಯೂಟಿ ರೇಖಾ ತಮ್ಮನಗು, ವ್ಯಕ್ತಿತ್ವ ಮತ್ತು ನಟನೆಯಿಂದಲಕ್ಷಾಂತರ ಹೃದಯಗಳ ಫೇವರೆಟ್ ಆಗಿದ್ದಾರೆ.
ರೇಖಾ ತಮ್ಮ ವೃತ್ತಿ ಜೀವನದಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕಹಲವು ಮೈಂಡ್‌ಬ್ಲೋಯಿಂಗ್ ಚಿತ್ರಗಳನ್ನು ನೀಡಿದ್ದಾರೆ.
ಅವರು ನಟಿಸಿರುವ ಉಮ್ರಾವ್ ಜಾನ್ ಕ್ಲಾಸಿಕ್ ಹಾಗೂ ಅದ್ಭುತ ಸಿನಿಮಾ.ಇದಕ್ಕಾಗಿ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆದರು.
ರೇಖಾರ ಅಭಿನಯದ ಜೊತೆ ಸಂಗೀತ ಮತ್ತು ನಿರ್ದೇಶನಗಳನ್ನೂ ಸೇರಿಪ್ರತಿ ಪ್ರಶಸ್ತಿಯೂ ಆ ವರ್ಷ ಉಮ್ರಾವ್ ಜಾನ್ ಸಿನಿಮಾ ಗೆದ್ದಿತ್ತು.
ಇದು ಬೆಸ್ಟ್ ನಟಿಯಾಗಿ ಅವರ ಏಕೈಕ ರಾಷ್ಟ್ರೀಯ ಪ್ರಶಸ್ತಿಯಾಗಿದೆ. ಆದರೆ ಅವರು ಅದಕ್ಕೆ ಅರ್ಹರಲ್ಲ ಎಂದೇ ಅಂದುಕೊಂಡಿದ್ದಾರೆ.
ರೇಖಾ ಸಿನಿಮಾ ಮತ್ತು ಆವಾರ್ಡ್ ಬಗ್ಗೆ 1986ರ ಬಿಬಿಸಿ ಏಷ್ಯನ್ ಯುನಿಟ್ ಜೊತೆಮಾತನಾಡಿರುವ ಥ್ರೋಬ್ಯಾಕ್ ಸಂದರ್ಶನವನ್ನು ಯುಟ್ಯೂಬ್‌ನಲ್ಲಿ ವಸೀಮ್ ಮಹಮೂದ್ ಅಪ್‌ಲೋಡ್ ಮಾಡಿದ್ದಾರೆ.
'ನಾನು ಉಮ್ರಾವ್ ಜಾನ್ ಚಿತ್ರಕ್ಕಾಗಿ ಯಾವುದೇ ತರಬೇತಿ ಪಡೆದಿರಲಿಲ್ಲ. ಇದನ್ನುನಂಬುವುದು ಕಷ್ಟ. ಆದರೆ ನಾನು ಉರ್ದು ಭಾಷೆಯ ಒಂದೇ ಒಂದು ಪದವನ್ನೂ ಕಲಿತಿಲ್ಲ. ನಿಜಕ್ಕೂ, ನಾನು ರಾಷ್ಟ್ರೀಯ ಪ್ರಶಸ್ತಿಗೆ ಅರ್ಹವಾಗುವಂತಹ ವಿಶೇಷವಾದದ್ದನ್ನು ಮಾಡಿದ್ದೇನೆ ಎಂದು ನಾನು ಅನಿಸುವುದೇ ಇಲ್ಲ, ಎಂದಿದ್ದಾರೆ ಆ ಸಂದರ್ಶನದಲ್ಲಿ.
ಫಾರೂಕ್ ಶೇಖ್, ನಸೀರುದ್ದೀನ್ ಷಾ, ರಾಜ್ ಬಬ್ಬರ್, ದಿನಾ ಪಾಠಕ್ ಮತ್ತು ಇತರೆ ನಟರು ಉಮ್ರಾವ್ ಜಾನ್ ಸಿನಿಮಾದಲ್ಲಿ ನಟಿಸಿದ್ದಾರೆ.