67ನೇ ವಯಸ್ಸಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟ ಡಿಂಪಲ್ ಕಪಾಡಿಯಾ… ನಟಿಯ ಕಿಲ್ಲರ್ ಲುಕ್ ನೋಡಿ ಫ್ಯಾನ್ಸ್ ಶಾಕ್!

First Published | Oct 30, 2024, 2:38 PM IST

ಡಿಂಪಲ್ ಕಪಾಡಿಯರ ಹೊಸದೊಂದು ಫೋಟೊ ಶೂಟ್ ವೈರಲ್ ಆಗುತ್ತಿದೆ. 67 ವರ್ಷ ವಯಸ್ಸಾಗಿದ್ರೂ ನಟಿ ಇಷ್ಟೊಂದು ಸ್ಟೈಲಿಶ್ , ಗ್ಲಾಮರಸ್ ಆಗಿ ಕಾಣಿಸ್ತಿರೋದು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಡಿಂಪಲ್ ಕಪಾಡಿಯಾ(Dimple Kapadia) ಅಂದ್ರೆ ಗೊತ್ತಿಲ್ಲದೋರು ಇದ್ದಾರ? ಖಂಡಿತಾ ಇಲ್ಲ. ಡಿಂಪಲ್ 90ರ ದಶಕದ ಪ್ರಸಿದ್ಧ ನಟಿ, ಆಕೆಯ ಸೌಂದರ್ಯಕ್ಕೆ ಜನ ಫಿದಾ ಹುಚ್ಚರಾಗಿದ್ರು. ಈ ನಟಿ ತಮ್ಮ ಸ್ಟೈಲಿಶ್ ಲುಕ್ ನಿಂದ ಅವತ್ತಿನಂತೆ ಇವತ್ತೂ ಕೂಡ ತನ್ನ ಲುಕ್ ನಿಂದ ಎಲ್ಲರ ಹೃದಯವನ್ನ ಗೆಲ್ಲುತ್ತಿದ್ದಾರೆ. 
 

ಇದೀಗ ಡಿಂಪಲ್ ಕಪಾಡಿಯರ ಹೊಸದೊಂದು ಫೋಟೊ ಶೂಟ್ ವೈರಲ್ ಆಗುತ್ತಿದೆ. 67 ವರ್ಷ ವಯಸ್ಸಾಗಿದ್ರೂ ನಟಿ ಇಷ್ಟೊಂದು ಸ್ಟೈಲಿಶ್ , ಗ್ಲಾಮರಸ್ ಆಗಿ ಕಾಣಿಸ್ತಿರೋದು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. 
 

Tap to resize

ನಟಿ ವೋಗ್ ಮ್ಯಾಗಝಿನ್ ಗಾಗಿ ಕವರ್ ಫೋಟೋಶೂಟ್ (photoshoot) ಮಾಡಿದರು. ಅದರಲ್ಲಿ ತುಂಬಾನೆ ಸ್ಟೈಲಿಶ್ ಅನ್ನೋದಕ್ಕಿಂತ ಗ್ಲಾಮರಸ್ ಆಗಿ ಕಾಣಿಸ್ತಿದ್ದಾರೆ.  ತಮ್ಮ ಲುಕ್ ಮೂಲಕ ನಟಿ ವಯಸ್ಸಿಗೂ ಫ್ಯಾಷನ್ ಗೂ ಸಂಬಂಧವಿಲ್ಲ, ಯಾವ ವಯಸ್ಸಲ್ಲೂ ಗ್ಲಾಮರಸ್ ಆಗಿ ಕಾಣಬಹುದು ಅನ್ನೋದನ್ನ ನಿರೂಪಿಸಿದ್ದಾರೆ. 
 

ತಮ್ಮ ಅದ್ಭುತ ಲುಕ್ ಗಾಗಿ, ಡಿಂಪಲ್ ಸಬ್ಯಸಾಚಿ ಮುಖರ್ಜಿ ಅವರ ಉಡುಪನ್ನು ಆರಿಸಿಕೊಂಡಿದ್ದಾರೆ. ಬಿಳಿ ಓವರ್ ಕೋಟ್ ನೊಂದಿಗೆ ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಈ ಬಣ್ಣದ ಕಾಂಬಿನೇಶನ್ ಪರ್ಫೆಕ್ಟ್ ಆಗಿದ್ದು,ನಟಿ ತುಂಬಾನೆ ಚೆನ್ನಾಗಿ ಕಾಣಿಸ್ತಿದ್ದಾರೆ. ಈ ಲುಕ್ನಲ್ಲಿ, ಅವರನ್ನು ಸೆಲೆಬ್ರಿಟಿ ಸ್ಟೈಲಿಸ್ಟ್ ಪ್ರಿಯಾಂಕಾ ವಿನ್ಯಾಸಗೊಳಿಸಿದ್ದಾರೆ.
 

ಅದರಲ್ಲೂ ಡಿಂಪಲ್ ಕಪಾಡಿಯಾ ತಮ್ಮ ಓವರ್ ಕೋಟನ್ನು ಆಫ್ ಶೋಲ್ಡರ್ ಮಾಡಿ, ಬಿಂದಾಸ್ ಆಗಿ ನೆಲದ ಮೇಲೆ ಕುಳಿತು ಪೋಸ್ ನೀಡಿದ್ದು, ಇದು ತುಂಬಾನೆ ಬೋಲ್ಡ್ ಆಗಿ ಕಾಣಿಸುತ್ತಿದೆ. ಇದನ್ನ ನೊಡಿ ಜನ ಈ ವಯಸ್ಸಲ್ಲೂ ಇಷ್ಟೊಂದು ಗ್ಲಾಮರಸ್ ಆಗಿ ಕಾಣಿಸೋದಕ್ಕೆ ನಿಮಗೆ ಮಾತ್ರ ಸಾಧ್ಯ ಅಂದಿದ್ದಾರೆ. 
 

ಡಿಂಪಲ್ ಕಪಾಡಿಯ ಅಕ್ಷಯ್ ಕುಮಾರ್ ಅವರ ಅತ್ತೆಯಾಗಿದ್ದು, ಟ್ವಿಂಕಲ್ ಖನ್ನಾ ಅವರ ತಾಯಿ. ತಮ್ಮ 14ನೇ ವಯಸ್ಸಿಗೆ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಡಿಂಪಲ್ ಕಪಾಡಿಯ ಮೊದಲ ಚಿತ್ರ ಬಾಬಿ. ಈ ಸಿನಿಮಾದಲ್ಲಿ ರಿಷಿ ಕಪೂರ್ ಗೆ ಜೋಡಿಯಾಗಿದ್ದರು. ಈ ಸಿನಿಮಾಗಾಗಿ ಡಿಂಪಲ್ ಫಿಲಂ ಫೇರ್ ಪ್ರಶಸ್ತಿ ಕೂಡ ಪಡೆದಿದ್ದಾರೆ. 
 

ಅಲ್ಲಿಂದ ಇಲ್ಲಿವರೆಗೆ ನಟಿ ನೂರಾರು ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲಿ ನಟಿಸಿದ್ದು. ಇಂದಿಗೂ ಕೂಡ ಬಹು ಬೇಡಿಕೆಯ ಪೋಷಕ ನಟಿ ಇವರು. ಇತ್ತೀಚೆಗೆ ನಟಿ ತೆರೆ ಬಾತೋ ಮೆ ಎಯ್ಸಾ ಉಲ್ಜಾ ದಿಯಾ ಹಾಗೂ ಮರ್ಡರ್ ಮುಬಾರಕ್ ಸಿನಿಮಾಗಳಲ್ಲಿ ನಟಿಸಿದ್ದರು. 

Latest Videos

click me!