ಈ ಬಾಲಿವುಡ್ ಸ್ಟಾರ್ ಕಿಡ್ಸ್ ಬೇಜಾರಂತೆ, ಯಾಕೋ?

First Published Jul 7, 2023, 5:28 PM IST

ಸಿನಿಮಾ ತಾರೆಯರ ಮಕ್ಕಳು ಸಾಮಾನ್ಯವಾಗಿ ಸಿನಿಮಾ ನಟನಟಿಯರಾಗಲು ಬಯಸುತ್ತಾರೆ. ಅಷ್ಟೇ ಅಲ್ಲ ಹಲವು ಸ್ಟಾರ್‌ಕಿಡ್ಸ್‌ಗಳು ಈಗಾಗಲೇ ಸ್ಟಾರ್‌ಗಳಾಗಿ ಸಹ ಹೊರಹೊಮ್ಮಿದ್ದಾರೆ. ಆದರೆ ಕೆಲವು ಬಾಲಿವುಡ್‌ ಸ್ಟಾರ್ಸ್‌ ಮಕ್ಕಳು ನಟನೆಯನ್ನು ತಿರಿಸ್ಕರಿಸಿ ಬೇರೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

ಶಾರುಖ್ ಖಾನ್ ಮಗ ಆರ್ಯನ್ ಖಾನ್‌ಗೆ ನಟನೆ ಇಷ್ಟವಿಲ್ಲ. ಆರ್ಯನ್ ಖಾನ್ ತನ್ನ ತಂದೆ ಶಾರುಖ್‌ ಮತ್ತು ಸಹೋದರಿ ಸುಹಾನಾ ಅವರಂತೆ ನಟನಾಗಲು ಬಯಸುವುದಿಲ್ಲ. ಅವರಿಗೆ ನಟನೆಯಲ್ಲಿ ಆಸಕ್ತಿಯಿಲ್ಲ, ಅವರು ಬರಹಗಾರ ನಿರ್ದೇಶಕ ಮತ್ತು ನಿರ್ಮಾಪಕರಾಗಲು ಬಯಸುತ್ತಾರೆ. 

ಅರ್ಜುನ್ ಕಪೂರ್ ಸಹೋದರಿ ಅಂಶುಲಾ ಕಪೂರ್ ನಟಿಯಾಗಲು ಎಂದಿಗೂ ಯೋಚಿಸಲಿಲ್ಲ ಮತ್ತು ತಾನೂ ನಟಿಯಾಗ ಬಹುದೆಂದು ಎಂದಿಗೂ ಪ್ರಯತ್ನಿಸಲಿಲ್ಲ ಮತ್ತು ಉನ್ನತ ಶಿಕ್ಷಣ ಪಡೆದಿರುವ ಅಂಶುಲಾ ಗೂಗಲ್‌ಗಾಗಿ ತಮ್ಮ ಜಾಹೀರಾತು ಫಾರ್ಮ್‌ನಲ್ಲಿ ಕೆಲಸ ಮಾಡುತ್ತಾರೆ. 

Latest Videos


ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾಗೆ ಬಾಲಿವುಡ್ ಜೀವನದಲ್ಲಿ ಆಸಕ್ತಿಯೇ ಇಲ್ಲ. ಕ್ಯಾಮೆರಾ ಭಯವೂ ಇದೆ. ನವ್ಯಾ ನವೇಲಿ ನಂದಾ ಬ್ಯುಸಿನೆಸ್‌ ಮಹಿಳೆ.
   

ಜಾಕಿ ಶ್ರಾಫ್ ಮಗಳು ಮತ್ತು ಟೈಗರ್ ಶ್ರಾಫ್ ಸಹೋದರಿ ಕೃಷ್ಣ ಎಂದಿಗೂ ನಟನಾ ವೃತ್ತಿಯನ್ನು ಆರಿಸಿಕೊಳ್ಳಲಿಲ್ಲ, ಅವರು ತನ್ನ ಸಹೋದರ ಮತ್ತು ತಂದೆಯಂತೆ ನಟನಾಗಲು ಬಯಸದೆ ನಿರ್ದೇಶಕನಾಗಲು ಬಯಸಿದ್ದಾರೆ.

ಆಮೀರ್‌ ಖಾನ್‌  ಅವರ ಮಗಳು ಇರಾ ಖಾನ್ ಕ್ಯಾಮೆರಾ ಭಯವನ್ನು ಹೊಂದಿದ್ದಾರೆ ಮತ್ತು ಅದಕ್ಕಾಗಿಯೇ ಅವರು ನಟಿಯಾಗಲು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಕಾರಣದಿಂದ ಇರಾ ನಿರ್ದೇಶಕರಾಗಲು ಆಯ್ಕೆ ಮಾಡಿಕೊಂಡಿದ್ದಾರೆ. 

ರಿಯಾ ಕಪೂರ್ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮತ್ತು ಚಲನಚಿತ್ರ ನಿರ್ಮಾಪಕಿ. ಅವರು  ತನ್ನ ತಂದೆ ಅನಿಲ್ ಕಪೂರ್ ಅಥವಾ ಸಹೋದರಿ ಸೋನಮ್ ಕಪೂರ್ ಅವರ ದಾರಿಯಲ್ಲಿ ನಡೆಯುತ್ತಿಲ್ಲ. ಇವರಿಗೂ ಕ್ಯಾಮರಾ ಭಯವಂತೆ. 

ಮಹೇಶ್ ಭಟ್ ಅವರ ಮಗಳು ಮತ್ತು ಆಲಿಯಾ ಭಟ್ ಅವರ ಸಹೋದರಿ ಶಾಹೀನ್ ಭಟ್ ಕ್ಯಾಮೆರಾ ಎದುರಿಸುವ ಭಯವನ್ನು ಹೊಂದಿದ್ದಾರೆ ಮತ್ತು ಅವರು ಲೈಮ್ ಲೈಟಿನಿಂದ ದೂರವಿರುತ್ತಾರೆ. 

ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಪುತ್ರಿ ಆಲಿಯಾ ಕಶ್ಯಪ್ ಅವರಿಗೆ ನಟನಾ ವೃತ್ತಿಯಲ್ಲಿ ಆಸಕ್ತಿ ಇಲ್ಲ. 22 ವರ್ಷ ವಯಸ್ಸಿನ ಆಲಿಯಾ ತನ್ನದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ.

ರಿಷಿ ಕಪೂರ್ ಮತ್ತು ನೀತು ಕಪೂರ್ ಅವರ ಪುತ್ರಿ ರಿಧಿಮಾ ಕಪೂರ್ ಸಹಾನಿ ಯಾವಾಗಲೂ ಪಾಪರಾಜಿಗಳಿಂದ ದೂರವಿರಲು ಬಯಸುತ್ತಾರೆ. ಅವರು ಆಭರಣ ವಿನ್ಯಾಸಕಿ ಮತ್ತು ಅವರು ಎಂದಿಗೂ ನಟಿಯಾಗಲು ಬಯಸಲಿಲ್ಲ.
 

click me!