ಬ್ರೇಕ್ ಅಪ್ ನಂತರ ನೋರಾ ಫತೇಹಿ ಖಿನ್ನತೆಗೆ ಒಳಗಾಗಿದ್ದಾರಾ?

Published : Oct 20, 2022, 01:01 PM IST

ನಟಿ-ನರ್ತಕಿ, ನೋರಾ ಫತೇಹಿ (Nora Fatehi) ಬಾಲಿವುಡ್‌ನಲ್ಲಿ ಯಶಸ್ವಿಯಾಗಿ ತಮ್ಮ  ಸ್ಥಾನವನ್ನು ರೂಪಿಸಿಕೊಂಡಿದ್ದಾರೆ ಮತ್ತು ನಿಧಾನವಾಗಿ  ಅವರು ತನ್ನ ಕೆಲಸದಲ್ಲಿ ಗಮನಾರ್ಹವಾಗಿ ಮುಂದುವರೆದಿದ್ದಾರೆ ಮತ್ತು ಚಲನಚಿತ್ರ ನಿರ್ಮಾಪಕರು ಈಗ ಐಟಂ ನಂಬರ್‌ ಗಾಗಿ ನೋರಾರ ಕಡೆಗೆ ತಿರುಗುತ್ತಾರೆ. ಇತ್ತೀಚಿಗೆ ಅವರು ನಟ ಅಂಗದ್ ಬೇಡಿ  ಜೊತೆಗಿನ  ಬ್ರೇಕಪ್‌ ನಂತರ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.

PREV
17
ಬ್ರೇಕ್ ಅಪ್ ನಂತರ ನೋರಾ ಫತೇಹಿ ಖಿನ್ನತೆಗೆ ಒಳಗಾಗಿದ್ದಾರಾ?

ಪ್ರತಿಯೊಬ್ಬ ವಿದೇಶಿಯರಂತೆ, ನೋರಾ ಪತೇಹಿ ಕೂಡ ತಮ್ಮನ್ನು ಇಂಡಸ್ಟರಿಯಲ್ಲಿ ಗುರುತಿಸಿಕೊಳ್ಳಲು ಸಾಕಷ್ಷು ಶ್ರಮವಹಿಸಿದ್ದಾರೆ.  ಖಿನ್ನತೆಯ ವಿರುದ್ಧ ಹೋರಾಡುವುದು, ತಿರಸ್ಕರಿಸಲ್ಪಡುವುದು ಮತ್ತು ಅವರಉಚ್ಚಾರಣೆಗಾಗಿ ಅಪಹಾಸ್ಯಕ್ಕೊಳಗಾಗುವುದು ಸೇರಿದಂತೆ ಬಹಳಷ್ಟು ಕಷ್ಷಗಳನ್ನು ನೋರಾ ಅನುಭವಿಸಿದ್ದಾರೆ. 
 

27

ಬಾಲಿವುಡ್‌ಲೈಫ್‌ನ ಇತ್ತೀಚಿನ ವರದಿಯ ಪ್ರಕಾರ, ನೋರಾ ನಟ ಅಂಗದ್ ಬೇಡಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಯಾಗಿದೆ.ಆದರೆ ನಟಿ ಬ್ರೇಕಪ್‌ ನಂತರದ  ಖಿನ್ನತೆಯಿಂದ ಚೇತರಿಸಿಕೊಳ್ಳಲು ನೋರಾಗೆ ಬಹಳ ಸಮಯ ಬೇಕಾಗಿತ್ತು ಎಂದು ವರದಿಯಾಗಿದೆ.
 

37

ನೋರಾ ಫತೇಹಿ ಅವರು By Invite Onlyನಲ್ಲಿ ಕಾಣಿಸಿಕೊಂಡಾಗ ದುಃಖವನ್ನು ಹೇಗೆ ನಿಭಾಯಿಸಿದರು ಮತ್ತು ಖಿನ್ನತೆಯೊಂದಿಗೆ ತನ್ನ 2 ತಿಂಗಳ ಹೋರಾಟವನ್ನು ಹಂಚಿಕೊಂಡರು. 

47

'ಎಲ್ಲಾ ಮಹಿಳೆಯರು ತಮ್ಮ ಜೀವನದಲ್ಲಿ ಒಮ್ಮೆಯಾದರೂ (ಬ್ರೇಕಪ್) ಅನುಭವಿಸುತ್ತಾರೆ. ಇದು ನನಗೆ ಸ್ವಲ್ಪ ಸವಾಲಾಗಿತ್ತು ಏಕೆಂದರೆ ಇದು ಅನಿರೀಕ್ಷಿತ ಮುಖಾಮುಖಿ ನನ್ನನ್ನು ಛಿದ್ರಗೊಳಿಸಿತು. ಎರಡು ತಿಂಗಳು ಖಿನ್ನತೆಯೊಂದಿಗೆ ಹೋರಾಡಿದೆ. ಆದರೆ ನಾನು ಒಪ್ಪಿಕೊಳ್ಳಬೇಕು, ಆ ಘಟನೆಯು ನನ್ನನ್ನು ನಿಜವಾಗಿಯೂ ಬದಲಾಯಿಸಿತು' ಎಂದು ನೋರಾ ಹೇಳಿದ್ದಾರೆ.

57

ಭಾರತ್ ಚಲನಚಿತ್ರದ ಆಡಿಷನ್‌ ಸಮಯದಲ್ಲಿ ಬೆಂಚ್ ಮೇಲೆ ಕುಳಿತಾಗ ತಾನು ಸೆಲ್ಫ್‌ ಕಾನ್ಷಿಯಸ್‌ ಅನುಭವಿಸಿ ಕಣ್ಣೀರು ಸುರಿಸಿದ್ದೇನೆ ಎಂದು ಫತೇಹಿ ಬಹಿರಂಗಪಡಿಸಿದ್ದಾರೆ.

67

200-300 ಜನರಿದ್ದ ಕೋಣೆಯಲ್ಲಿ ನನ್ನ ಆಡಿಷನ್ ಸಮಯದಲ್ಲಿ, ನೋರಾ ಎದ್ದೇಳು! ಹಸಿವು ಎಲ್ಲಿ ಹೋಯಿತು ನಿನ್ನಂತಹ ನೂರಾರು ಸಾವಿರ ಜನ ಪ್ರತಿಭಾವಂತರು, ಆಕರ್ಷಕರು,  ಸಾಧಿಸಲು ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ, ನೀನು ಮರಳಿ ಬರಬೇಕು' ಎಂದು ನಮನಗೆ ನಾನೇ ಹೇಳಿಕೊಂಡೆ  ನಾನು ತಕ್ಷಣ ನನ್ನ ಆತ್ಮವಿಶ್ವಾಸವನ್ನು ಮರಳಿ ಪಡೆದುಕೊಂಡೆ  ಎಂದು ಫತೇಹಿ ಹೇಳಿದ್ದಾರೆ. 

77

ಈ ಮಧ್ಯೆ, ಸಿದ್ಧಾರ್ಥ್ ಮಲ್ಹೋತ್ರಾ-ನಟಿಸಿದ ಥ್ಯಾಂಕ್ ಗಾಡ್ ಚಿತ್ರದಿಂದ ತನ್ನ ಇತ್ತೀಚಿನ ಸೋಲೋ ಮಣಿಕೆ ಜನಪ್ರಿಯತೆಯನ್ನು ನೋರಾ ಆನಂದಿಸುತ್ತಿದ್ದಾರೆ. ಅವರು ಮಾಧುರಿ ದೀಕ್ಷಿತ್ ನೆನೆ ಮತ್ತು ಕರಣ್ ಅವರೊಂದಿಗೆ ಪ್ರಸಿದ್ಧ ನೃತ್ಯ ಸ್ಪರ್ಧೆಯಾದ ಜಲಕ್ ದಿಖ್ಲಾ ಜಾ 10 ನಲ್ಲಿ ತೀರ್ಪುಗಾರರಾಗಿ  ಕಾಣಬಹುದು.

Read more Photos on
click me!

Recommended Stories