ಸಲ್ಮಾನ್ ಖಾನ್ ಮಾಜಿ ಪ್ರೇಮಿಗಳ ಪಟ್ಟಿಯಲ್ಲಿ ಸಂಗೀತಾ ಬಿಜಲಾನಿ, ಸೋಮಿ ಅಲಿ, ಐಶ್ವರ್ಯ ರೈ, ಕತ್ರಿನಾ ಕೈಫ್, ಯೂಲಿಯಾ ವಂತೂರ್ ಹೆಸರುಗಳು ಸೇರಿವೆ. ಆದರೆ ಅವುಗಳಲ್ಲಿ ಯಾವುದೂ ಸಲ್ಮಾನ್‌ನ ಮೊದಲ ಪ್ರೀತಿ ಅಲ್ಲ. ಅವರ ಮೊದಲ ಗೆಳತಿಯ ಹೆಸರು ಶಾಹೀನ್ ಜಾಫ್ರಿ. ಇವರು ಹಿರಿಯ ನಟ ಅಶೋಕ್ ಕುಮಾರ್ ಅವರ ಮೊಮ್ಮಗಳು ಎನ್ನಲಾಗುತ್ತದೆ. ಅಲ್ಲದೇ ಶಾಹೀನ್ ಕಿಯಾರಾ ಅಡ್ವಾಣಿ ಅವರ ತಾಯಿಯ ಮಲತಂಗಿ ಎನ್ನಲಾಗಿದೆ. ಸಲ್ಮಾನ್ ಖಾನ್ ಮತ್ತು ಶಾಹೀನ್ ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರಿತಿಯಲ್ಲಿದ್ದರು ಭಿನ್ನಾಬಿಪ್ರಯಾಗಳು ಬಳಿಕ ಸುಮಾರು ಮೂರು ವರ್ಷಗಳ ನಂತರ ಇಬ್ಬರೂ ಬೇರ್ಪಟ್ಟರು.