ಧುರಂಧರ್ 2 ಸಿನಿಮಾ ಬಿಡುಗಡೆ ಬೆನ್ನಲ್ಲೇ ಕನ್ನಡಿಗರಲ್ಲಿ ಕ್ಷಮೆ ಕೇಳಿದ ನಿರ್ದೇಶಕ ಆದಿತ್ಯ ಧಾರ್

Published : Mar 19, 2026, 01:11 PM IST

ಧುರಂಧರ್ 2 ಸಿನಿಮಾ ಬಿಡುಗಡೆ ಬೆನ್ನಲ್ಲೇ ಕನ್ನಡಿಗರಲ್ಲಿ ಕ್ಷಮೆ ಕೇಳಿದ ನಿರ್ದೇಶಕ ಆದಿತ್ಯ ಧಾರ್, ಸಿನಿಮಾ ಪ್ರದರ್ಶನ ರದ್ದು ಸೇರಿದಂತೆ ಕೆಲ ಪ್ರಮುಖ ವಿಚಾರಗಳ ಕುರಿತು ಆದಿತ್ಯ ಧಾರ್ ಕರ್ನಾಟಕ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ. 

PREV
15
ಕ್ಷಮೆ ಕೇಳಿದ ಧುರಂಧರ್ 2 ಸಿನಿಮಾ ನಿರ್ದೇಶಕ

ಮಾರ್ಚ್ 19ಕ್ಕೆ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಇದು ಪ್ಯಾನ್ ವರ್ಲ್ಡ್ ಸಿನಿಮಾ ಕಾರಣ ಇರಾನ್ ಇಸ್ರೇಲ್ ಯುದ್ಧ ಅಡ್ಡಿಯಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ಆದರೆ ಇಂದು ಭಾರಿ ನಿರೀಕ್ಷೆ ಹುಟ್ಟಿಸಿರುವ ಬಾಲಿವುಡ್ ಸಿನಿಮಾ ಧುರಂಧರ್ 2 ಬಿಡುಗಡೆಯಾಗುತ್ತಿದೆ. ಧುರಂದರ್ ಮೊದಲ ಪಾರ್ಟ್ ದಾಖಲೆಯ ಗಳಿಕೆ ಕಂಡಿತ್ತು. ಇದೀಗ ಬಿಡುಗಡೆ ದಿನವೇ ಧುರಂಧರ್ ಸಿನಿಮಾ ನಿರ್ದೇಶಕ ಆದಿತ್ಯ ಧಾರ್ ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ.

25
ಕನ್ನಡಿಗರಲ್ಲಿ ಆದಿತ್ಯ ಧಾರ್ ಕ್ಷಮೆ ಕೇಳಿದ್ದೇಕೆ?

ಸಿನಿಮಾ ಬಿಡುಗಡೆ ಕುರಿತು ಕೆಲ ಗೊಂದಲ ಏರ್ಪಟ್ಟಿದೆ. ಹಿಂದಿ ಹಾಗೂ ಕೆಲ ಭಾಷೆಗಳ ಸಿನಿಮಾ ನಿಗದಿತ ಸಮಯದಂತೆ ಪ್ರದರ್ಶನ ಕಾಣಲಿದೆ. ಆದರೆ ಕನ್ನಡದಲ್ಲಿ ಸಿನಿಮಾ ಪ್ರದರ್ಶನ ಮಾರ್ಚ್ 19ಕ್ಕೆ ನಡೆಯುತ್ತಿಲ್ಲ. ಕೆಲ ತಾಂತ್ರಿಕ ಕಾರಣಗಳಿಂದ ಕನ್ನಡದಲ್ಲಿ ಮಾರ್ಚ್ 19ಕ್ಕೆ ಧುರಂಧರ್ ಸಿನಿಮಾ ಪ್ರದರ್ಶನ ಕಾಣುತ್ತಿಲ್ಲ ಹೀಗಾಗಿ ನಿರ್ದೇಶಕ ಆದಿತ್ಯ ಧಾರ್ ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ.

35
ಕನ್ನಡದಲ್ಲಿ ಮಾರ್ಚ್ 20ಕ್ಕೆ ಧುರಂಧರ್ ಸಿನಿಮಾ ಪ್ರದರ್ಶನ

ಧರಂಧರ್ 2 ಸಿನಿಮಾ ಕನ್ನಡಲ್ಲಿ ಮಾರ್ಚ್ 20ರಿಂದ ಪ್ರದರ್ಶನ ಆರಂಭಗೊಳ್ಳುತ್ತಿದೆ. ಕನ್ನಡ ಹಾಗೂ ಮಲೆಯಾಳಂನಲ್ಲಿ ಮಾರ್ಚ್ 20 ರಿಂದ ಝಧುರಂಧರ್ 2 ಸಿನಿಮಾ ಪ್ರದರ್ಶನವಾಗಲಿದೆ. ಹೀಗಾಗಿ ಇಂದಿನ ಸಿನಿಮಾ ಟಿಕೆಟ್ ಖರೀದಿಸಿದ್ದ ಸಿನಿ ಅಭಿಮಾನಿಗಳಿಗೆ ರೀಫಂಡ್ ಅಥವಾ ಹಿಂದಿ ವರ್ಶನ್ ಸಿನಿಮಾ ನೋಡುವ ಅವಕಾಶವಿದೆ ಎಂದಿದ್ದಾರೆ.

45
ಹಲೆವೆಡೆ ದುರಂಧರ್ 2 ಸಿನಿಮಾ ರದ್ದು, ವಿಳಂಭ

ಹಲುವ ಸಿನಿಮಾ ಥಿಯೇಟರ್‌ಗಳಲ್ಲಿ ಧುರಂಧರ್ 2 ಸಿನಿಮಾ ರದ್ದಾಗಿದೆ. ಕೆಲೆವೆಡೆ ವಿಳಂಬವಾಗಿದೆ. ಹೀಗಾಗಿ ಆದಿತ್ಯ ಧಾರ್ ಸೋಶಿಯಲ್ ಮೀಡಿಯಾ ಮೂಲಕ ಕ್ಷಮೆ ಕೇಳಿ ಸ್ಪಷ್ಟನೆ ನೀಡಿದ್ದಾರೆ. ಹಿಂದಿ ವರ್ಶನ್ ಧುರಂಧರ್ 2 ಸಿನಿಮಾ ಸಂಜೆ 5 ಗಂಟೆಯಿಂದ ಪ್ರದರ್ಶನ ಗೊಳ್ಳಲಿದೆ. ಇನ್ನು ತೆಲುಗು ಹಾಗೂ ತಮಿಳು ಭಾಷೆಯಲ್ಲಿನ ಧುರಂಧರ್ 2 ಸಿನಿಮಾ ರಾತ್ರಿ 9 ಗಂಟೆಯಿಂದ ಪ್ರದರ್ಶನಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

55
5 ಗಂಟೆ ಬದಲು 5.30ಕ್ಕೆ ಶೋ

ಐಮ್ಯಾಕ್ಸ್,, ಮಿರಾಜ್, ಮೂವಿಟೈಮ್, ವೈವ್, ಸಿನಿಪೋಲಿಸ್, ಮೂವಿ ಮ್ಯಾಕ್ಸ್, ಐನಾಕ್ಸ್ ಸೇರಿದಂತೆ ಹಲವೆಡೆ ಧುರಂಧರ್ 2 ಸಿನಿಮಾ ಪ್ರದರ್ಶನ 5 ಗಂಟೆ ಬದಲು 5.30ಕ್ಕೆ ಪ್ರದರ್ಶನಗೊಳ್ಳಲಿದೆ. ಹಲವು ಸೈಟ್‌ಗಳು ಆಫ್‌ಲೈನ್ ಆಗಿದೆ. ಇದರಿಂದ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದರು. ಇದೀಗ ಆದಿತ್ಯ ಧಾರ್ ಸ್ಪಷ್ಟನೆ ನೀಡಿದ್ದಾರೆ.

5 ಗಂಟೆ ಬದಲು 5.30ಕ್ಕೆ ಶೋ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories