ದೀಪಿಕಾ ಪಡುಕೋಣೆ -ಅನುಷ್ಕಾ ಶರ್ಮ: ಬಾಲಿವುಡ್‌ ನಟಿಯರ ದುಬಾರಿ ಮಂಗಳಸೂತ್ರಗಳು!

First Published | May 17, 2021, 6:32 PM IST

ಭಾರತೀಯ ಮಹಿಳೆಯರಿಗೆ ಮಂಗಳಸೂತ್ರ ತುಂಬಾ ಶುಭ ಹಾಗೂ ಮಹತ್ವದ ಆಭರಣ. ಅದು ವಿವಾಹಿತ ಮಹಿಳೆಯ ಹಕ್ಕು ಎಂದು ಪರಿಗಣಿಸಲಾಗುತ್ತದೆ. ಚಿನ್ನ, ವಜ್ರಗಳಿಂದ ಮಾಡಿದ ವಿವಿಧ ರೀತಿಯ ಮಂಗಳಸೂತ್ರ ವಿನ್ಯಾಸಗಳನ್ನು ಕಾಣಬಹುದು. ಇದಕ್ಕೆ ಬಾಲಿವುಡ್‌ ನಟಿಯರು ಹೊರತಾಗಿಲ್ಲ. ನಟಿಯರು ಅತ್ಯಂತ ದುಬಾರಿ ಮಂಗಳಸೂತ್ರವನ್ನು ಹೊಂದಿರುವುದು ಕಾಣಬಹುದು.

ಬಾಲಿವುಡ್‌ನ ಟಾಪ್‌ ನಟಿಯರಾದ ದೀಪಿಕಾ ಪಡುಕೋಣೆ,ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ ದುಬಾರಿ ಮಂಗಳಸೂತ್ರ ಹೊಂದಿದ್ದಾರೆ.ಈ ನಟಿಯರ ಮಂಗಳಸೂತ್ರದ ಬೆಲೆ ಎಷ್ಟು ಹೊತ್ತಾ?
ಬಾಲಿವುಡ್‌ ಬ್ಯೂಟಿ ಕ್ವೀನ್‌ ತಮ್ಮ ಮದುವೆಯಂದು75 ಲಕ್ಷ ರೂದ ಕಾಂಜೀವರಂ ಸೀರೆ ಧರಿಸಿದ್ದರು. ಅವರ ಮಂಗಳಸೂತ್ರದ 45 ಲಕ್ಷ ರೂಗಳದ್ದು ಎಂದು ವರದಿಯಾಗಿದೆ.
Tap to resize

ವರದಿಗಳ ಪ್ರಕಾರ, ಅನುಷ್ಕಾ ಶರ್ಮಾ ಅವರ ಮಂಗಳಸೂತ್ರದ ಮೌಲ್ಯ 52 ಲಕ್ಷ ರೂ.
ದೀಪಿಕಾ ಪಡುಕೋಣೆ ಅವರ ಮಂಗಳಸೂತ್ರದಲ್ಲಿ ದೊಡ್ಡ ವಜ್ರವಿದೆ. ಇದರ ಬೆಲೆ 20 ಲಕ್ಷ ರೂ
ಅಮೆರಿಕದ ಪಾಪ್ ಗಾಯಕ ನಿಕ್ ಜೊನಾಸ್ ಅವರನ್ನು ವರಿಸಿರುವ ಪ್ರಿಯಾಂಕಾ ಚೋಪ್ರಾ ಸಾಂಪ್ರದಾಯಿಕ ಮಂಗಳಸೂತ್ರವನ್ನು ಹೊಂದಿದ್ದು, ಚಿನ್ನ ಮತ್ತು ಕರಿ ಮಣಿಗಳಿಂದ ಅಲಂಕರಿಸಲ್ಪಟ್ಟ ಚಿನ್ನದ ಸರದೊಂದಿಗೆದೊಡ್ಡ ವಜ್ರವನ್ನು ಹೊಂದಿದೆ. ಅದರೆ ಪಿಸಿಯ ಮಂಗಳಸೂತ್ರದ ಬೆಲೆ ಬಹಿರಂಗಪಡಿಸಲಾಗಿಲ್ಲ.
ಸೋನಮ್ ಕಪೂರ್ ಅವರ ಮಂಗಳಸೂತ್ರತುಂಬಾ ಸ್ಪೇಷಲ್‌ ಆಗಿ ಡಿಸೈನ್‌ ಮಾಡಲಾಗಿದೆ. ಇದರಲ್ಲಿ ವಜ್ರದಿಂದ ಮಾಡಿದ ಸೋನಮ್‌ ಅವರ ಮಿಥುನ ರಾಶಿ ಹಾಗೂ ಮತ್ತು ಆನಂದ್ ಅವರ ಸಿಂಹ ರಾಶಿಯ ಚಿಹ್ನೆಕಾಣಬಹುದು.ಇದರ ಬೆಲೆ ತಿಳಿದು ಬಂದಿಲ್ಲ.
ರಾಜ್ ಕುಂದ್ರಾ ಅವರು ಶಿಲ್ಪಾ ಶೆಟ್ಟಿಗೆ 3 ಕೋಟಿ ರೂ ಉಂಗುರ ಹಾಗೂ 30 ಲಕ್ಷ ಮೌಲ್ಯದ ಮಂಗಳಸೂತ್ರವನ್ನು ಉಡುಗೊರೆಯಾಗಿ ನೀಡಿದರು.
ಅಜಯ್ ದೇವ್‌ಗನ್ ಜೊತೆ ಮಹಾರಾಷ್ಟ್ರ ಶೈಲಿಯಲ್ಲಿ ವಿವಾಹವಾದ ಕಾಜೋಲ್ ಮಂಗಳ ಸೂತ್ರದ ಮೌಲ್ಯ 21 ಲಕ್ಷ ರೂ.
ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ ಈಗ ಒಟ್ಟಿಗೆ ಇಲ್ಲ, ಆದರೆ ಅವರು 17 ಲಕ್ಷ ರೂಪಾಯಿ ಬೆಲೆಯ ಮಂಗಳಸೂತ್ರವನ್ನು ಹೊಂದಿದ್ದರು.
ಮಾಧುರಿ ದೀಕ್ಷಿತ್ ಅವರು 1999 ರಲ್ಲಿ ಯುಎಸ್ ಮೂಲದ ಡಾಕ್ಟರ್‌ ಶ್ರೀ ಶ್ರೀರಾಮ್ ನೆನೆ ಅವರನ್ನು ವಿವಾಹವಾದರು. ಅವರ ಮಂಗಳಸೂತ್ರದ ಬೆಲೆ 8.5 ಲಕ್ಷ ರೂಪಾಯಿಗಳು.

Latest Videos

click me!