ಖ್ಯಾತ ಕುಟುಂಬದ ಯುವತಿ ಜತೆ ಇರೋದು ಆರ್ಯನ್ ಖಾನ್? ವಿಡಿಯೋ ವೈರಲ್

Published : Oct 03, 2021, 11:17 PM ISTUpdated : Oct 03, 2021, 11:30 PM IST

ಹೈ ಪ್ರೊಫೈಲ್ ಡ್ರಗ್ಸ್ ಪಾರ್ಟಿ ಮೇಲೆ ಎನ್‌ಸಿಬಿ (NCB) ಅಧಿಕಾರಿಗಳು ಪ್ರವಾಸಿಗರ ಸೋಗಿನಲ್ಲಿ ದಾಳಿ ಮಾಡಿ ಬಾಲಿವುಡ್ (Bollywood) ನಾಯಕ ಶಾರುಖ್ ಖಾನ್ ಪುತ್ರನ ಸೇರಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.  ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ.

PREV
17
ಖ್ಯಾತ ಕುಟುಂಬದ ಯುವತಿ ಜತೆ ಇರೋದು ಆರ್ಯನ್ ಖಾನ್? ವಿಡಿಯೋ ವೈರಲ್

ಶಾರುಖ್ ಪುತ್ರ ಇದ್ದಾರೆ ಎನ್ನಲಾದ  ಅಶ್ಲೀಲ ವಿಡಿಯೋ ಒಂದು ವೈರಲ್ ಆಗುತ್ತಿದೆ. ಒಂದು ಕಡೆ ಕಾನೂನಿನ ಸಂಕಷ್ಟ ಇದ್ದರೆ ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಿಂದ ಕಮೆಂಟ್ ಗಳು ಹರಿದು ಬರುತ್ತಿವೆ.

27

ಹೈ ಪ್ರೊಫೈಲ್ ಡ್ರಗ್ಸ್ ಪ್ರಕರಣ(Drug Case) ಬಾಲಿವುಡ್(Bollywood) ಹಾಗೂ ದೇಶವನ್ನೇ ಬೆಚ್ಚಿಬೀಳಿಸಿದೆ. ಕ್ರ್ಯೂಸ್ ಹಡಗಿನಲ್ಲಿ(Cruise Drug bust) ನಡೆದ ರೇವ್ ಪಾರ್ಟಿಯಲ್ಲಿ ನಡೆದ NCB ಅಧಿಕಾರಿಗಳ ದಾಳಿ ಬಾಲಿವುಡ್ ಡ್ರಗ್ಸ್ ಕರಾಳ ಕತೆಯನ್ನು ಬಿಚ್ಚಿಟ್ಟಿದೆ. 

37

ಬಾಲಿವುಟ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಮೂವರು ಡ್ರಗ್ಸ್ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದಾರೆ. ಆರ್ಯನ್ ಖಾನ್ ಹಾಗಾ ಶಾರುಖ್ ಕುಟುಂಬದ ಸಂಕಷ್ಟ ಹೆಚ್ಚಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

47

ಆರ್ಯನ್ ಖಾನ್(Aryan Khan) ಬಂಧನ ಹಾಗೂ ಮುಂಬೈ ಕೋರ್ಟ್ NCB ಕಸ್ಟಡಿಗೆ ನೀಡಿದ ಬಳಿಕ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಆರ್ಯನ್ ಖಾನ್ ಬಳಿ 13 ಗ್ರಾಂ ಕೊಕೆನ್, 21 ಗ್ರಾಂ ಚರಾಸ್ , 21 ಗ್ರಾಂ MDMA ಮಾತ್ರೆ, ಹಾಗೂ 5 ಗ್ರಾಂ MD ಮಾದಕ ವಸ್ತುಗಳ ಪತ್ತೆಯಾಗಿದೆ ಎಂದು NCB ಅಧಿಕಾರಿಗಳು ಹೇಳಿದ್ದಾರೆ.

57

ನಿಷೇಧಿತ ಮಾದಕ ವಸ್ತುಗಳು ಸ್ವತಃ ಆರ್ಯನ್ ಖಾನ್ ಬಳಿ ಪತ್ತೆಯಾಗಿರುವ ಕಾರಣ ಆರ್ಯನ್ ವಿರುದ್ಧ ನಿಷೇಧಿತ ವಸ್ತುಗಳ ಖರೀದಿ, ಬಳಕೆ ಹಾಗೂ ಸ್ವಾಧಿನ ಪಡಿಸಿಕೊಂಡ ಪ್ರಕರಣಗಳು ದಾಖಲಾಗಿದೆ. ಶಾರುಖ್ ಖಾನ್(Shah rukh khan) ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪುತ್ರನ ಬಿಡುಗಡೆಗೆ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

67

ಶಾರುಖ್ ಪುತ್ರನ ಹೋಲುವ ವ್ಯಕ್ತಿ ಮತ್ತು ಪ್ರಖ್ಯಾತ ನಟನ ಕುಟುಂಬಕ್ಕೆ ಸೇರಿದ್ದ ಯುವತಿಯೊಬ್ಬಳ ಜತೆ ಕಾರ್ ನಲ್ಲಿ ರೋಮ್ಯಾನ್ಸ್ ಮಾಡುತ್ತಿದ್ದ ಎಂಬ ದೃಶ್ಯಗಳು ಇವು ಎನ್ನಲಾಗಿತ್ತು. ಒಂದು ವರೆ ನಿಮಿಷದ ವಿಡಿಯೋ ಇದಾಗಿದೆ.

77

ಜೋಡಿ ಕಾರಿನಲ್ಲೇ ಮುಕ್ತ ಸರಸದಲ್ಲಿ ತೊಡಗಿದ್ದು ಈ ಹಿಂದೆಯೂ ವಿಡಿಯೋ ವೈರಲ್ ಆಗಿತ್ತು. ಈಗ ಡ್ರಗ್ಸ್ ಕೇಸ್ ವಿಚಾರದಲ್ಲಿ ಹೆಸರು ಕೇಳಿಬಂದಿರುವುದರಿಂದ ಮತ್ತೆ ಜೀವ ಪಡೆದುಕೊಂಡಿದೆ. 

click me!

Recommended Stories