ಪಿವಿ ಸಿಂಧು ಬಯೋಪಿಕ್‌ನಲ್ಲಿ ದೀಪಿಕಾ? ಒಲಿಂಪಿಕ್ಸ್ ಸ್ಟಾರ್‌ ಜೊತೆ ನಟಿ!

First Published | Sep 24, 2021, 6:22 PM IST

ಈ ದಿನಗಳಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ಬ್ಯಾಡ್ಮಿಟನ್‌ ಆಟಗಾರ್ತಿ ಒಲಿಂಪಿಕ್ಸ್ ಮೆಡಲ್‌ ವಿನ್ನರ್‌ ಪಿವಿ ಸಿಂಧು  ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ದಿನಗಳಲ್ಲಿ ಇಬ್ಬರೂ ಜೊತೆಯಾಗಿ ಆಟವಾಡುತ್ತಿರುವ ಕೆಲವು ಫೋಟೋ ಹಾಗೂ ವಿಡಿಯೋಗಳು ಹೊರಬಿದ್ದವೆ. ಅದಕ್ಕೂ ಮೊದಲು ದೀಪಿಕಾ ಹಾಗೂ ರಣವೀರ್‌ ಸಿಂಗ್‌ ದಂಪತಿ ಸಿಂಧು ಅವರ ಜೊತೆ ಡಿನ್ನರ್‌ ಡೇಟ್‌ನಲ್ಲಿ ಕಾಣಿಸಿಕೊಂಡಿದ್ದರು. ಇವರು ಪದೇ ಪದೇ ಹೀಗೆ ಭೇಟಿಯಾಗುತ್ತಿರುವುದು. ನಟಿ ಸಿಂಧು ಅವರ ಬಯೋಪಿಕ್‌ನಲ್ಲಿ ನಟಿಸುತ್ತಾರಾ ಎಂಬ ಅನುಮಾನಕ್ಕೆ ಕಾರಣವಾಗಿದೆ. 
 

ಪಿವಿ ಸಿಂಧು ಜೊತೆ ಡಿನ್ನರ್‌ ಡೇಟ್‌  ನಂತರ, ದೀಪಿಕಾ ಪಡುಕೋಣೆ  ಒಲಿಂಪಿಕ್ಸ್  ಸ್ಟಾರ್‌ ಸಿಂಧು ಜೊತೆ ಬ್ಯಾಡ್ಮಿಂಟನ್ ಸೆಶನ್ ಅನ್ನು ಆನಂದಿಸಿದರು. ದೀಪಿಕಾ ತನ್ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ  ಪಿವಿ ಸಿಂಧು ಮತ್ತು ಆಕೆ ಸಂತೋಷವಾಗಿ ಕಾಲ ಕಳೆದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋಗಳನ್ನು ಹಂಚಿಕೊಂಡು ದೀಪಿಕಾ, ' ಜೀವನದ ಒಂದು ನಾರ್ಮಲ್‌ ಡೇ   @pvsindhu1  ಜೊತೆ ಕ್ಯಾಲೊರಿಗಳನ್ನು ಬರ್ನ್‌ ಮಾಡಿದಾಗ ಎಂದು ಬರೆದು ಕೊಂಡಿದ್ದಾರೆ. ದೀಪಿಕಾ ಸಿಂಧು ಜೊತೆ ಆಟವಾಡುತ್ತಿರುವ ಹಲವು ಫೋಟೋ ಹಾಗೂ ಶಾರ್ಟ್‌ ವಿಡಿಯೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ

Tap to resize

ಈ ಸಮಯದಲ್ಲಿ ದೀಪಿಕಾ ಪಡುಕೋಣೆ ಕಪ್ಪು ಟ್ಯಾಂಕ್ ಟಾಪ್ ಜೊತೆ ಕಪ್ಪು ಟ್ರ್ಯಾಕ್ ಪ್ಯಾಂಟ್‌ ಧರಿಸಿದ್ದಾರೆ. ಪಿವಿ ಸಿಂಧು ಡಾರ್ಕ್ ಪ್ಯಾಂಟ್‌ ಜೊತೆ ಕೆಂಪು ಬಣ್ಣದ ಟ್ಯಾಂಕ್ ಟಾಪ್ ಧರಿಸಿದ್ದರು. ಫೋಟೋದಲ್ಲಿ ಇಬ್ಬರೂ ಬ್ಯಾಡ್ಮಿಂಟನ್‌ ಆಟವನ್ನು ಎಂಜಾಯ್‌ ಮಾಡುತ್ತಿರುವುದು ಕಂಡು ಬರುತ್ತದೆ.   

ಒಲಂಪಿಕ್ಸ್‌ನಲ್ಲಿ ಕಂಚು ಗೆದ್ದ ಸಿಂಧು ಸ್ಟೈಲಿಷ್ ಫೋಟೋಗಳು

ದೀಪಿಕಾ ಪೋಸ್ಟ್‌ ಮಾಡಿರುವ ಫೋಟೋವೊಂದರಲ್ಲಿ, ಸಿಂಧು ಅವರು ದೀಪಿಕಾಗೆ ತನ್ನ ಫೋನಿನಲ್ಲಿ ಏನನ್ನೋ ತೋರಿಸಿದರು ಮತ್ತು ಅವರು ಇಬ್ಬರು ಒಟ್ಟಿಗೆ ನಗುತ್ತಿದ್ದರು. ಈ ಜೋಡಿಯ ಫೋಟೋಗಳನ್ನು ಫ್ಯಾನ್ಸ್‌ ತುಂಬಾ ಮೆಚ್ಚಿಕೊಂಡಿದ್ದಾರೆ. 

ಇಬ್ಬರ ಜೊತೆಯಾಗಿ ಬ್ಯಾಡ್ಮಿಟನ್‌ ಆಟವನ್ನು ಎಂಜಾಯ್‌ ಮಾಡುತ್ತಿರುವ ವಿಡೀಯೋ ಮತ್ತು  ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಇದನ್ನು ನೋಡಿದ ಫ್ಯಾನ್ಸ್ ಸಹ ತುಂಬಾ ಖುಷಿಯಾಗಿದ್ದಾರೆ ಮತ್ತು  ಸಿಂಧು ಜೀವನಚರಿತ್ರೆಯಲ್ಲಿ ದೀಪಿಕಾ ನಟಿಸುತ್ತಾರೆಯೇ ಎಂದು ಹಲವರು ಆಶ್ಚರ್ಯಪಡುತ್ತಿದ್ದಾರೆ.

ದೀಪಿಕಾ  ಮತ್ತು ಪಿವಿ ಸಿಂಧು ಇತ್ತೀಚೆಗೆ ಡಿನ್ನರ್‌ಗೆ  ಭೇಟಿಯಾಗಿದ್ದರು. ಇವರಿಬ್ಬರ ಜೊತೆ ರಣವೀರ್‌ ಸಿಂಗ್‌ ಸಹ ಕಂಡುಬಂದಿದ್ದರು. ದೀಪಿಕಾ ಸಿಂಧು ಜೊತೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಕೂತುಹಲ ಮೂಡಿಸಿದೆ ಮತ್ತು ನಟಿ ಸಿಂಧು ಅವರ ಬಯೋಪಿಕ್‌ನಲ್ಲಿ ನಟಿಸಲಿದ್ದಾರೆ ಎಂಬ ಊಹೆಗೆ ಕಾರಣವಾಗಿದೆ. 

ಇತ್ತೀಚೆಗೆ ಸಿಂಧು ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದಕ್ಕೂ ಮೊದಲು ಸಿಂಧು 2016ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ಸತತವಾಗಿ ಎರಡು ವೈಯಕ್ತಿಕ ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ದೀಪಿಕಾ ಪಡುಕೋಣೆ ಬಾಲಿವುಡ್ ಸೇರುವ ಮೊದಲು ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು. ಅವರು ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಪ್ರಕಾಶ್ ಪಡುಕೋಣೆ ಅವರ ಮಗಳು.

Latest Videos

click me!