ಪ್ಯಾನ್-ಇಂಡಿಯಾ ನಟ ಕಿಚ್ಚ ಸುದೀಪ್ ಬಾಲಿವುಡ್ ಸ್ಟಾರ್ ದಂಪತಿಗಳಾದ ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಡಿಸೋಜಾ ಅವರೊಂದಿಗೆ ಉತ್ತಮ ಸ್ನೇಹದಲ್ಲಿದ್ದಾರೆ. ಬಾಲಿವುಡ್ ಸ್ಟಾರ್ ಜೋಡಿ ಕಿಚ್ಚ ಅವರ ಉತ್ತಮ ಗೆಳೆಯರು.
ಹುಟ್ಟುಹಬ್ಬದಂದು ಒಬ್ಬರಿಗೊಬ್ಬರು ವಿಶೇಷ ವಿಶ್ ಮಾಡುವುದು, ಲಂಚ್ ಮಾಡಲು ಒಟ್ಟಿಗೆ ಸಮಯ ಕಳೆಯುವುದು, ಅವರ ವಿಶೇಷ ಬಾಂಧವ್ಯ ಇದೇ ರೀತಿ ಮುಂದುವರಿದುಕೊಂಡು ಬಂದಿದೆ.
ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಯಾವಾಗಲೂ ಸುದೀಪ್ ಒಬ್ಬ ನಟ ಎಂದು ಮೆಚ್ಚಿಕೊಂಡಿದ್ದಾರೆ. ಅವರು ಸುದೀಪ್ ಅವರನ್ನು ನಟ ಎನ್ನುವುದಕ್ಕಿಂದ ಹೆಚ್ಚು ಕುಟುಂಬದಂತೆ ಪರಿಗಣಿಸುತ್ತಾರೆ. ಅವರ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳು ಇದಕ್ಕೆ ಸಾಕ್ಷಿಯಾಗಿದೆ.
ಮೆಮೊರೆಬಲ್ ನೈಟ್‌ನ ಕೆಲವು ಫೋಟೋಗಳನ್ನು ಹಂಚಿಕೊಂಡ ಜೆನಿಲಿಯಾ ಅತ್ಯಂತ ಅದ್ಭುತವಾದ ವ್ಯಕ್ತಿಯೊಂದಿಗೆ ಅದ್ಭುತ ಸಮಯ ಕಳೆದೆವು. ಅದ್ಭುತ ಸಂಜೆಗೆ ಧನ್ಯವಾದಗಳು, ಉತ್ತಮ ಸಂಭಾಷಣೆಗಳು ಮತ್ತು ಸುಂದರ ನೆನಪುಗಳು ರಿತೇಶ್ ಮತ್ತು ನಾನು ನಿಮ್ಮನ್ನು ಸಂಪೂರ್ಣವಾಗಿ ಪ್ರೀತಿಸುತ್ತೇನೆ.
ಪ್ರೀಯಾ ಮತ್ತು ಸಾನ್ವಿಯನ್ನು ಮಿಸ್ ಮಾಡಿಕೊಂಡೆ. ಆದರೆ ಇದು ಅನೇಕ ಸಂಜೆಗಳ ಆರಂಭವಾಗಿದೆ ಎಂದಿದ್ದಾರೆ. ನಮಗಾಗಿ ವಿಶೇಷ ಸಸ್ಯಾಹಾರಿ ಆಹಾರವನ್ನು ಯೋಜಿಸಿದ್ದಿರಿ. ನಿಮ್ಮ ಸ್ಟೈಲ್‌ನಿಂದ ಹೊರಬಂದಿದ್ದಕ್ಕೆ ಧನ್ಯವಾದಗಳು, ಸಂಪೂರ್ಣವಾಗಿ ಇಷ್ಟವಾಯಿತು ಎಂದು ಬರೆದಿದ್ದಾರೆ.
ಕಿಚ್ಚನ ಫೋಟೋಗೆ ರಮ್ಯಾ ಫಿದಾ: ಒಟ್ಟಿಗೆ ನಟಿಸಿ ಎಂದ ಫ್ಯಾನ್ಸ್
ಕಿಚ್ಚ ಸುದೀಪ್ ರಿತೇಶ್ ದೇಶಮುಖ್ ಜೊತೆ ಹಿಂದಿ ಚಿತ್ರ ರನ್ನಿನಲ್ಲಿ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿದ್ದಾರೆ. 2010 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದರು.
ಕಿಚ್ಚ ಸುದೀಪ್ ಅವರನ್ನು ಟ್ವಿಟ್ಟರ್‌ಗೆ ಪರಿಚಯಿಸಿದ್ದು ಮತ್ತು ಅದನ್ನು ಹೇಗೆ ಬಳಸಬೇಕೆಂದು ಕಲಿಸಿದವರು ರಿತೀಶ್. ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಅವರು ಟ್ವಿಟ್ಟರ್ ಬಗ್ಗೆ ಸಂಭಾಷಣೆ ನಡೆಸಿದ್ದರು. ಆಗ ಸುದೀಪ್ ಈ ಸಾಮಾಜಿಕ ಮಾಧ್ಯಮ ವೇದಿಕೆಗೆ ಬರಲು ನಿರ್ಧರಿಸಿದರು. ಇಂದು, ಅವರು 2.5 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.