ದೀಪಿಕಾ ಪಡುಕೋಣೆಗೆ ಹಾಲಿವುಡ್‌ ವಾಕ್‌ ಆಫ್‌ ಫೇಮ್ ಗೌರವ: ಇತಿಹಾಸ ಬರೆದ ಭಾರತೀಯ ನಟಿ

Published : Jul 04, 2025, 01:35 PM IST

2026ರ ಹಾಲಿವುಡ್ ವಾಕ್ ಆಫ್ ಫೇಮ್‌ ಪಟ್ಟಿಯಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಸ್ಥಾನಗಳಿಸಿದ್ದು, ಈ ಮೂಲಕ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

PREV
16

ಜನಪ್ರಿಯ ಬಾಲಿವುಡ್‌ ನಟಿ ಇದೀಗ ಹಾಲಿವುಡ್‌ ವಾಕ್‌ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಗೌರವ ಪಡೆದ ಮೊದಲ ಭಾರತೀಯ ನಟಿ ಅನ್ನೋ ಗರಿ ದೀಪಿಕಾ ಮುಡಿಗೇರಿದೆ.

26

ಲಾಸ್‌ ಏಂಜಲೀಸ್‌ನಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಗುತ್ತದೆ. 2026ನೇ ಸಾಲಿನ ಮೋಷನ್‌ ಪಿಕ್ಚರ್‌ ವಿಭಾಗದಲ್ಲಿ ದೀಪಿಕಾ ಅವರನ್ನು ಆಯ್ಕೆ ಮಾಡಲಾಗಿದೆ.

36

ಹಾಲಿವುಡ್‌ ಚೇಂಬರ್‌ ಆಫ್‌ ಕಾಮರ್ಸ್‌ಗೆ ಬರುವ 300ಕ್ಕೂ ಅಧಿಕ ಸ್ಟಾರ್‌ ಕಲಾವಿದರ ನಾಮ ನಿರ್ದೇಶನದಲ್ಲಿ 30 ಮಂದಿಯನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.

46

ಇವರಲ್ಲಿ ಮೊದಲಿಗರಾಗಿ ದೀಪಿಕಾ ಪಡುಕೋಣೆ ಹೊರಹೊಮ್ಮಿದ್ದಾರೆ. 1960ರಲ್ಲಿ ಸಾಬು ದಸ್ತಗಿರ್‌ ಎಂಬ ನಟನಿಗೆ ಈ ಗೌರವ ಸಂದಿತ್ತಾದರೂ ಅವರು ಆ ವೇಳೆಗೆ ಅಮೆರಿಕಾದ ಪೌರತ್ವ ಪಡೆದಿದ್ದರು.

56

ದೀಪಿಕಾ ಪಡುಕೋಣೆ ಹೆಸರನ್ನು ನಕ್ಷತ್ರದಲ್ಲಿ ಮಾಡಿ ಅದನ್ನು ರಸ್ತೆಗೆ ಅಳವಡಿಸಲಾಗುತ್ತದೆ. ಇದಕ್ಕಾಗಿ ಹಾಲಿವುಡ್ ಚೇಂಬರ್ ಆಫ್ ಕಾಮರ್ಸ್​ಗೆ ದೊಡ್ಡ ಮೊತ್ತದ ಹಣವನ್ನು ಸಹ ನೀಡಬೇಕಿದೆ.

66

ಸದ್ಯ ಅಟ್ಲಿ ನಿರ್ದೇಶನದ ಹೆಸರಿಡದ ಫ್ಯಾಂಟಸಿ ಸಿನಿಮಾ ಮೂಲಕ ಮತ್ತೆ ಚಿತ್ರೀಕರಣಕ್ಕೆ ದೀಪಿಕಾ ಬಂದಿದ್ದಾರೆ. ಈ ಸಿನಿಮಾದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆಗೆ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.

Read more Photos on
click me!

Recommended Stories