ಬಾಲಿವುಡ್ ನಟಿ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ರಣವೀರ್ ದಂಪತಿ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಸಿನಿಮಾಗಳಲ್ಲಿ ಬ್ಯುಸಿಯಾಗಿರು ಜೊತೆಗೆ ರಣವೀರ್ ದಂಪತಿ ಆಗಾಗ ವಿದೇಶಿ ಪ್ರವಾಸಕ್ಕೂ ತೆರಳುತ್ತಾರೆ. ಸೆಲೆಬ್ರಿಟಿಗಳಿಗೆ ಬೀಚ್ ಎಂದರೆ ತುಂಬಾ ಇಷ್ಟ ಎಂದರೆ ತಪ್ಪಾಗಲ್ಲ. ಬಹುತೇಕ ಸೆಲೆಬ್ರಿಟಿಗಳು ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುವ ಸ್ಥಳ ಬೀಚ್. ದೀಪಿಕಾ ಮತ್ತು ರಣವೀರ್ ಕೂಡ ಬೀಚ್ ಪ್ರವಾಸಕ್ಕೆ ತೆರಳಿದ್ದರು.
ಅಂದಹಾಗೆ ಗಲ್ಲಿ ಬಾಯ್ ಸ್ಟಾರ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ಬರ್ತಡೇ ಸೆಲೆಬ್ರೇಷನ್ ಗೆ ಪತ್ನಿ ದೀಪಿಕಾ ಜೊತೆ ವಿದೇಶಕ್ಕೆ ಹಾರಿದ್ದರು. ಅಂದಹಾಗೆ ಬಾಲಿವುಡ್ ನ ಸ್ಟಾರ್ ಜೋಡಿ ಈಗಾಗಲೇ ವಿದೇಶಕ್ಕೆ ಹೋಗಿ ವಾಪಾಸ್ ಆಗಿದೆ. ಆದರೀಗ ಫೋಟೋಗಳು ವೈರಲ್ ಆಗಿವೆ.
ದೀಪಿಕಾ ಪಡುಕೋಣೆ ಪತಿಯ ಜೊತೆ ರೊಮ್ಯಾಂಟಿಕ್ ಬರ್ತಡೇ ಆಚರಣೆ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪತಿ ರಣವೀರ್ ಜೊತೆ ತರಹೇವಾರಿ ಪೋಸ್ ನೀಡಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋ ಹಂಚಿಕೊಂಡು ಪತಿಗೆ ವಿಶ್ ಮಾಡಿದ್ದಾರೆ.
ದೀಪಿಕಾ ಫೋಟೋ ಶೇರ್ ಮಾಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬಂದಿದೆ. ಇಬ್ಬರೂ ವಿದೇಶದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಮುಂಬೈಗೆ ವಾಪಾಸ್ ಆಗಿದ್ದಾರೆ. ಏರ್ಪೋರ್ಟ್ ನಲ್ಲಿ ಇಬ್ಬರೂ ಕೈಕೈ ಹಿಡಿದುಕೊಂಡು ಬರುತ್ತಿದ್ದ ವಿಡಿಯೋ ಸಹ ವೈರಲ್ ಆಗಿತ್ತು.
ಇನ್ನು ಈ ಸ್ಟಾರ್ ದಂಪತಿ ಇತ್ತೀಗೆ ದುಬಾರಿ ಮನೆ ಖರೀದಿ ವಿಚಾರವಾಗಿ ಸುದ್ದಿಯಾಗಿದ್ದರು. ರಣವೀರ್ ಮತ್ತು ದೀಪಿಕಾ ದಂಪತಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಮನೆಯ ಪಕ್ಕದಲ್ಲಿ ಐಷಾರಾಮಿ ಮನೆ ಖರೀದಿ ಮಾಡಿದ್ದಾರೆ.
ದೀಪ್ ವೀರ್ ಹೊಸ ಮನೆಯ ಬೆಲೆ ಬರೋಬ್ಬರಿ 119 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಹೊಸ ಮನೆ ಸಮುದ್ರದ ವೀವ್ಯೂ ಇದೆಯಂತೆ. 16, 17, 18 ಮತ್ತು 19ನೇ ಮಹಡಿ ಇವರದ್ದಾಗಿದೆ. 19ನೇ ಮಹಡಿಯಲ್ಲಿ ಪಾರ್ಕಿಂಗ್ ಜಾಗ ಕೂಡ ಇದೆಯಂತೆ. ಹೊಸ ಅಪಾರ್ಟ್ಮೆಂಟ್ 11,266 ಚದರ ಅಡಿ ಕಾರ್ಪೆಟ್ ಪ್ರದೇಶ ಮತ್ತು 1,300 ಚದರ ಅಡಿ ವಿಶೇಷ ಟೆರೇಸ್ ಹೊಂದಿದೆ.