ಮುಂಬೈನ ಔಟ್‌ಲೆಟ್ ಒಂದರಿಂದ ದೀಪಿಕಾ ಹೊರ ಬಂದಾಗ, ಅಲ್ಲಿದ್ದ ಜನರು ಅವರನ್ನು ಸುತ್ತುವರೆದರು. ಈ ಸಮಯದಲ್ಲಿ ಕೆಲವು ಫೋಟೋಗ್ರಾಫರ್ಸ್ ಮತ್ತು ಟಿಶ್ಯೂ ಮಾರಾಟ ಮಾಡುವ ಮಹಿಳೆಯರು ಸಹ ಅಲ್ಲಿಗೆ ಸೇರಿಕೊಂಡರು. ಗುಂಪಿನಲ್ಲಿದ್ದ ಮಹಿಳೆಯರು ಟಿಶ್ಯೂ ಖರೀದಿಸಲು ದೀಪಿಕಾರನ್ನು ಕೇಳುತ್ತಿದ್ದರು.
ಈ ಸಮಯದಲ್ಲಿ, ಜನಸಂದಣಿ ಹೆಚ್ಚಾಯಿತು ಮತ್ತು ಗುಂಪಿನಲ್ಲಿದ್ದ ಕೆಲವರು ದೀಪಿಕಾ ಅವರ ಪರ್ಸ್ ಕದ್ದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಜನರ ಗುಂಪಿನಲ್ಲಿ ಪರ್ಸ್ ಸಿಕ್ಕಿ ಕೊಂಡು ವ್ಯಕ್ತಿಯು ಅದನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ.
ಈ ಘಟನೆಯಿಂದ ದೀಪಿಕಾ ಕೂಡ ಗಾಬರಿಯಾಗಿ ಅದನ್ನುವಿರೋಧಿಸಿದರು.
ಅಲ್ಲಿರುವ ಅಂಗರಕ್ಷಕರು ಪರಿಸ್ಥಿತಿಯನ್ನು ನಿಭಾಯಿಸಿ ದೀಪಿಕಾರ ಪರ್ಸ್ ಕಳ್ಳತನವಾಗದಂತೆ ನೋಡಿಕೊಂಡರು. ಇದಾದ ನಂತರ ದೀಪಿಕಾ ಕೂಡಲೇ ತನ್ನ ಕಾರಿನಲ್ಲಿ ಹೊರಟು ಹೊರಟು ಹೋದರು
ದೀಪಿಕಾರ ಈ ವಿಡೀಯೋಗೆ ಜನರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು ನಟಿ ಅಲ್ಕೋಹಾಲ್ ಸೇವಿಸಿದ್ದಾರೆ ಎಂದು ಹೇಳಿದ್ದಾರೆ ಇನ್ನೊಬ್ಬರು ದೀಪಿಕಾರ ಮಾಸ್ಕ್ ಎಲ್ಲಿ ಎಂದು ಕೇಳಿದ್ದಾರೆ.
ಈ ಸಮಯದಲ್ಲಿ ದೀಪಿಕಾ ಕ್ಯಾಶುಯಲ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಓಪನ್ ಹೇರ್ ಕಪ್ಪು ಡೆನಿಮ್ ಮತ್ತು ಬಿಳಿ ಟಾಪ್ ಧರಿಸಿದ್ದರು. ಜೊತೆಗೆ ದೀಪಿಕಾ ತನ್ನ ಭುಜದ ಮೇಲೆ ಸ್ಟೈಲಿಶ್ ಕೆಂಪು ಬಣ್ಣದ ಪರ್ಸ್ ಇಟ್ಟುಕೊಂಡಿದ್ದರು. ಅದನ್ನೇ ಗುಂಪಿನಲ್ಲಿದ್ದ ಯಾರೋ ಎಳೆಯಲು ಪ್ರಯತ್ನಿಸಿದರು.
ಕೆಲಸದ ಬಗ್ಗೆ ಹೇಳುವುದಾದರೆ, ದೀಪಿಕಾ ಪಡುಕೋಣೆ ಶೀಘ್ರದಲ್ಲೇ ಪತಿ ರಣವೀರ್ ಸಿಂಗ್ ಜೊತೆ 83 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
1983 ರ ಕ್ರಿಕೆಟ್ ವಿಶ್ವಕಪ್ ಆಧರಿಸಿ ಈ ಸಿನಿಮಾದಲ್ಲಿ ರಣವೀರ್ ಕಪಿಲ್ ದೇವ್ ಪಾತ್ರ ಹಾಗೂ ದೀಪಿಕಾ ಅವರ ಪತ್ನಿ ರೋಮಿ ದೇವ್ ಪಾತ್ರದಲ್ಲಿದ್ದಾರೆ.