ದೀಪಿಕಾ ಪಡುಕೋಣೆಗೆ ಪಾಪರಾಜಿಗಳ ಕಾಟ; ಗರ್ಭಿಣಿಗೆ ಹೀಗೇಕೆ ತೊಂದರೆ ಕೊಡ್ತೀರಿ ಎಂದ ಫ್ಯಾನ್ಸ್

First Published | Jun 1, 2024, 8:16 PM IST

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಗರ್ಭಿಣಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೂ, ಹೋಟೆಲ್‌ಗೆಂದು ತನ್ನ ತಾಯಿತ ಜೊತೆಗೆ ಊಟಕ್ಕಾಗಿ ರೆಸ್ಟೋರೆಂಟ್‌ಗೆ ಬಂದಾಗ ಬೇಬಿ ಬಂಪ್ ಮುಚ್ಚಿಕೊಳ್ಳಲು ಮುಂದಾಗಿದ್ದಾರೆ. ಆಗ, ದಾರಿಯನ್ನು ಬಿಡದೇ ಫೋಟೋ ಹಾಗೂ ವಿಡಿಯೋ ತೆಗೆಯುತ್ತಿದ್ದ ಪಾಪರಾಜಿಗಳ ನಡೆಗೆ ದೀಪಿಕಾಳ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಗರ್ಭಿಣಿ ದೀಪಿಕಾ ಪಡುಕೋಣೆ ತನ್ನ ತಾಯಿಯೊಂದಿಗೆ ಊಟಕ್ಕೆ ಹೋಗಿದ್ದರು. ಈ ಸಂದರ್ಭದ ಚಿತ್ರಗಳು ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ದೀಪಿಕಾಳ ಬೇಬಿ ಬಂಪ್ ಅನ್ನು ಕಾಣಬಹುದು. ಇನ್ನು ಸಾಮಾನ್ಯ ಮಹಿಳೆಯರಂತೆ ಬೇಬಿ ಬಂಪ್ ಮರೆ ಮಾಚುತ್ತಿದ್ದ ನಟಿ ದೀಪಿಕಾಗೆ ಪಾಪರಾಜಿಗಳು ಕಾಟ ಕೊಟ್ಟಿದ್ದಾರೆ.

ದೀಪಿಕಾ ಪಡುಕೋಣೆ ಅವರು ತಮ್ಮ ತಾಯಿ ಉಜಾಲಾ ಪಡುಕೋಣೆ ಮತ್ತು ಸ್ನೇಹಿತರೊಂದಿಗೆ ಊಟಕ್ಕಾಗಿ ರೆಸ್ಟೋರೆಂಟ್‌ಗೆ ಹೋಗಿದ್ದರು. ಈ ವೇಳೆ ದೀಪಿಕಾಗೆ ಬೆಂಗಾವಲಿಗೆ ಒಬ್ಬ ಸಹಾಯಕ ಕೂಡ ಇದ್ದನು.

Tap to resize

ತಾಯಿ ಉಜಾಲಾ ಪಡುಕೋಣೆ ಜೊತೆ ಊಟಕ್ಕೆ ಹೋಗುತ್ತಿದ್ದಾಗ ದೀಪಿಕಾ ಕಪ್ಪು ಬಾಡಿಕಾನ್ ಡ್ರೆಸ್ ಮತ್ತು ಅದರ ಮೇಲೆ ಡೆನಿಮ್ ಜಾಕೆಟ್ ಧರಿಸಿದ್ದರು. ಈ ವೇಳೆ ಕೈ ಅಡ್ಡವಿಟ್ಟುಕೊಂಡು ಬೇಬಿ ಬಂಪ್ ಮುಚ್ಚಿಕೊಳ್ಳುತ್ತಿದ್ದರು.

ದೀಪಿಕಾ ತನ್ನ ಸಹಾಯಕನ ಹಿಂದೆ ನಡೆದುಕೊಂಡು ತನ್ನ ಬೇಬಿ ಬಂಪ್ ಅನ್ನು ಕವರ್ ಮಾಡುತ್ತಿದ್ದಳು. ಆದಾಗ್ಯೂ ಗರ್ಭಿಣಿ ಹೊಟ್ಟೆಯು ಸಾಮಾನ್ಯವಾಗಿ ಕಾಣುತ್ತಿತ್ತು. ಮತ್ತೊಂದೆಡೆ, ದೀಪಿಕಾ ಮುಖದಲ್ಲಿ ಗರ್ಭಧಾರಣೆಯ ಹೊಳಪು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ರೆಸ್ಟೋರೆಂಟ್ ಹೊರಗೆ ನಟಿಯನ್ನು ನೋಡಿದ ಪಾಪರಾಜಿಗಳು ಅವಳನ್ನು ಸುತ್ತುವರೆದರು. ಈ ಸಮಯದಲ್ಲಿ ಅವರು ಸ್ವಲ್ಪ ಅಹಿತಕರವಾಗಿಯೂ ಕಂಡುಬಂದರು. ಇದಕ್ಕೆ ದೀಪಿಕಾಳ ಅಭಿಮಾನಿಗಳು ಪಾಪರಾಜಿಗಳ ವಿರುದ್ಧ ಕಿಡಿಕಾರಿದ್ದಾರೆ.

ಗರ್ಭಿಣಿ ದೀಪಿಕಾ ಪಡುಕೋಣೆಗೆ ಪಾಪರಾಜಿಗಳಿಂದಾದ ತೊಂದರೆಯ ಬಗ್ಗೆ ವಿಡಿಯೋ ನೋಡಿದ ನೆಟ್ಟಿಗರು, ಪಾಪರಾಜಿಗಳ ನಡವಳಿಕೆಯನ್ನು ಟೀಕಿಸುತ್ತಿದ್ದಾರೆ. ಒಬ್ಬ ನೆಟ್ಟಿಗ 'ದೀಪಿಕಾಗೆ ಸ್ವಲ್ಪ ಗೌಪ್ಯತೆಯನ್ನು ನೀಡಿ ಸಹೋದರ, ಅವರಿಗೆ ಹಿಂಸೆಯಾಗುತ್ತಿದೆ ಎಂದು ಹೇಳಿದ್ದಾರೆ.

ಮತ್ತೊಬ್ಬ ನೆಟ್ಟಿಗ 'ಆಕೆ ಗರ್ಭಿಣಿ ಎಂದು ತಿಳಿದಿದ್ದರೂ, ಪಾಪರಾಜಿಗಳು ಅವಳನ್ನು ಹೋಗಲು ಬಿಡುತ್ತಿಲ್ಲ, ಇದು ತಪ್ಪಲ್ಲವೇ' ಎಂದು ಕೇಳಿದ್ದಾರೆ. ಮತ್ತೊಬ್ಬ ನೆಟ್ಟಿಗ ಬಳಕೆದಾರ, 'ದಯವಿಟ್ಟು ದೀಪಿಕಾಗೆ ತೊಂದರೆ ಕೊಡಬೇಡಿ, ಗರ್ಭಿಣಿ ಎನ್ನುವುದನ್ನಾದರೂ ಮನಸ್ಸಿನಲ್ಲಿ ಇಟ್ಟುಕೊಳ್ಳಿ' ಎಂದು ಕಾಮೆಂಟ್‌ನಲ್ಲಿ ಬರೆದಿದ್ದಾರೆ.

ದೀಪಿಕಾ ಅವರ ಪತಿ ಮತ್ತು ನಟ ರಣವೀರ್ ಸಿಂಗ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಗಳಲ್ಲಿ ಭಾಗವಹಿಸಲು ಫ್ರಾನ್ಸ್‌ಗೆ ಹೋಗಿದ್ದಾರೆ. ಹೀಗಾಗಿ, ದೀಪಿಕಾ ಅಮ್ಮನ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅವರಿಗೆ ಹೆರಿಗೆಯಾಗುವ ಸಾಧ್ಯತೆಯಿದೆ.

ದೀಪಿಕಾ ಪಡುಕೋಣೆ ಸಿನಿಮಾದ ಬಗ್ಗೆ ಹೇಳುವುದಾದರೆ ಪ್ರಭಾಸ್ ಅಭಿನಯದ 'ಕಲ್ಕಿ 2898 AD' ಚಿತ್ರದಲ್ಲಿ ನಟಿಸಿದ್ದು, ಇದು ಈ ತಿಂಗಳ 27 ರಂದು ಬಿಡುಗಡೆಯಾಗಲಿದೆ. ಮುಂದೆ ಅವರು ಅಜಯ್ ದೇವಗನ್ ಅಭಿನಯದ 'ಸಿಂಗಮ್ ಎಗೇನ್' ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!