ಶಿಕ್ಷಣಕ್ಕೂ, ಯಶಸ್ಸಿಗೂ ಸಂಬಂಧವೇ ಇಲ್ಲ ಎನ್ನೋ 500 ಕೋಟಿ ಒಡತಿ ದೀಪಿಕಾ ಪಡುಕೋಣೆ ಕಲಿತದ್ದು ಎಷ್ಟು ಗೊತ್ತಾ?

Published : Nov 30, 2025, 06:32 PM IST

ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳ ಅಂಕಗಳ ಮೇಲಿನ ಒತ್ತಡದಿಂದ ಯುವಕರು ಖಿನ್ನತೆಗೆ ಜಾರುತ್ತಿದ್ದಾರೆ. ಆದರೆ, ಕಡಿಮೆ ಓದಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ  ಮ್ಮ ಪರಿಶ್ರಮದಿಂದ ಯಶಸ್ಸಿನ ಶಿಖರವೇರಿದ್ದಾರೆ. ಇದು ಯಶಸ್ಸಿಗೆ ಅಂಕಗಳೇ ಅಂತಿಮವಲ್ಲ, ಬದಲಾಗಿ ಗುರಿ ಮತ್ತು ಛಲ ಮುಖ್ಯ ಎಂಬುದನ್ನು ಸಾರುತ್ತದೆ.

PREV
18
ಪಾಲಕರ, ಶಿಕ್ಷಣ ಸಂಸ್ಥೆಗಳ ಪ್ರತಿಷ್ಠೆಗೆ ಕನಸು ಬಲಿ!

ಪರೀಕ್ಷೆಯಲ್ಲಿ ಒಂದೋ- ಎರಡೋ ಅಂಕ ಕಡಿಮೆ ಬಂದ್ರೆ, ಕೆಲವೇ ಅಂಕಗಗಳಿಂದ Rank ತಪ್ಪಿ ಹೋದರೆ ಸಾವಿನ ಹಾದಿ ತುಳಿಯುವ ಯುವ ಮನಸ್ಸುಗಳು ಅದೆಷ್ಟೋ ಇವೆ. ಇದಕ್ಕೆಲ್ಲಾ ಮುಖ್ಯ ಕಾರಣ, ಅಂಕ ಅಂಕ ಎಂದು ಬಡಿದಾಡುವ, ಮಕ್ಕಳ ಅಂಕಗಳನ್ನೇ ತಮ್ಮ ಪ್ರತಿಷ್ಠೆಯ ಕೇಂದ್ರಬಿಂದು ಮಾಡಿಕೊಂಡಿರುವ ಅಪ್ಪ- ಅಮ್ಮ ಜೊತೆಗೆ ಶಾಲಾ-ಕಾಲೇಜುಗಳು. ಓದು, ರ್ಯಾಂಕು, ಮಾರ್ಕ್ಸು ಎಂದು ತಮ್ಮ ಮಕ್ಕಳ ಗುರಿ, ಅವರ ಕನಸುಗಳನ್ನು ಚಿವುಟಿ ತಮ್ಮ ಪ್ರತಿಷ್ಠೆಯನ್ನೇ ಮೆರೆಯುವ ಅಪ್ಪ-ಅಮ್ಮ, ಶಿಕ್ಷಣ ಸಂಸ್ಥೆಗಳು ಇರುವ ಕಾರಣದಿಂದಲೇ ಇಂದು ಅದೆಷ್ಟೋ ಮಕ್ಕಳು ತಮಗೆ ಇಷ್ಟವಿಲ್ಲದ ಉದ್ಯೋಗಕ್ಕೆ ಸೇರಿರುವುದೂ ಇದೆ, ಅಪ್ಪ-ಅಮ್ಮನ ಕನಸಿನ ಉದ್ಯೋಗ ಸಿಗದೆ, ತಮ್ಮ ಕನಸನ್ನೂ ನನಸು ಮಾಡಿಕೊಳ್ಳಲಾಗದೇ ಖಿನ್ನತೆಗೂ ಜಾರುತ್ತಿದ್ದಾರೆ!

28
ಯಶಸ್ವಿ ವ್ಯಕ್ತಿಗಳ ಹಿಂದಿರೋದು...

ಹಾಗೆ ನೋಡಿದರೆ, ಹಲವಾರು ಯಶಸ್ವಿ ಉದ್ಯಮಿಗಳಾಗಲೀ, ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವವರಾಗಲೀ ಅಥವಾ ಬಹು ದೊಡ್ಡ ಸಾಧನೆ ಮಾಡಿದವರೇ ಆಗಲಿ... ಅವರ ಶಿಕ್ಷಣದ (Education) ಹಿನ್ನೆಲೆ ನೋಡಿದಾಗ ಹಲವರು ಶಾಲಾ-ಕಾಲೇಜಿನಲ್ಲಿ ಕಲಿತದ್ದು ಬಹಳ ಕಮ್ಮಿಯೇ. ಆದರೆ ಜೀವನ ಶಿಕ್ಷಣವೇ ಅವರಿಗೆ ಬಹುದೊಡ್ಡ ಪಾಠವಾಗಿದ್ದು, ಇಂಥ ಉನ್ನತ ಶಿಕ್ಷಣ ಪಡೆದವರು ಇವರ ಕೈ ಕೆಳಗೆ ಕೆಲಸ ಮಾಡುತ್ತಿರುವುದು ಗೊತ್ತಿರುವ ವಿಷಯವೇ. ಜೀವನಕ್ಕೆ ಶಿಕ್ಷಣ ಮುಖ್ಯವಾದರೂ, ಶಾಲಾ-ಕಾಲೇಜುಗಳ ಶಿಕ್ಷಣವೇ ಜೀವನ ಅಲ್ಲ ಎನ್ನುವುದನ್ನು ಇದಾಗಲೇ ಹಲವಾರು ಯಶಸ್ವಿ ಪುರುಷರು, ಯಶಸ್ವಿ ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಶಾಲೆಯ ಮೆಟ್ಟಿಲನ್ನೇ ಹತ್ತದವರೂ ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ಯಾರೂ ಮಾಡದ ಸಾಧನೆ ಮಾಡಿರುವುದೂ ನಮ್ಮ ಕಣ್ಣಮುಂದಿದೆ.

38
ದೀಪಿಕಾ ಪಡುಕೋಣೆ ಕುರಿತು

ಬಾಲಿವುಡ್‌ನ ಸದ್ಯದ ಟಾಪ್ ನಟಿಯರ ಪೈಕಿ ಒಬ್ಬರಾಗಿದ್ದಾರೆ ದೀಪಿಕಾ ಪಡುಕೋಣೆ (Deepika Padukone). ಇವರು ಕೂಡ ಸಂದರ್ಶನವೊಂದಕ್ಕೆ ಅದನ್ನೇ ಹೇಳಿದ್ದಾರೆ. 2025ರ ವರದಿಯ ಪ್ರಕಾರ ದೀಪಿಕಾ 500 ಕೋಟಿ ರೂಪಾಯಿಗಳ ಆಸ್ತಿಯ ಒಡತಿ. ಅವರು ತಮ್ಮ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಬದುಕಿಗೆ ಬೇಕಿರುವುದು ಯಶಸ್ಸು, ನಿಮ್ಮ ಗುರಿಯನ್ನು ಮುಟ್ಟುವ ಛಲವೇ ಹೊರತು ಅಂಕ ಗಳಿಕೆ, Rank ಅಲ್ಲ ಎಂದಿದ್ದಾರೆ.

48
ಎಲ್ಲದಕ್ಕೂ ಸೈ

ರೊಮಾನ್ಸ್​, ಸಿಡುಕಿನ ಪಾತ್ರ, ಸಾಹಸ ದೃಶ್ಯ ಎಲ್ಲದ್ದಕ್ಕೂ ಸೈ ಎನಿಸಿಕೊಂಡಿರುವ ನಟಿ ದೀಪಿಕಾ, ಹಾಲಿವುಡ್​ನಲ್ಲಿಯೂ ಛಾಪು ಮೂಡಿಸುತ್ತಿದ್ದಾರೆ. ಪಠಾಣ್​ ಚಿತ್ರ ಮಕಾಡೆ ಮಲಗಿದ್ದ ಬಾಲಿವುಡ್​ ಅನ್ನು ಪುನಶ್ಚೇತನಗೊಳಿಸಿದ ಬಳಿಕವಂತೂ ಶಾರುಖ್​ ಖಾನ್​ ಜೊತೆ ದೀಪಿಕಾ ಅವರ ಡಿಮಾಂಡ್​ ಕೂಡ ಹೆಚ್ಚಾಗಿದೆ. ನಟ ರಣಬೀರ್​ ಸಿಂಗ್​ ಅವರನ್ನು ಮದುವೆಯಾಗಿ ಸುಖಿ ದಾಂಪತ್ಯ ಜೀವನವನ್ನೂ ನಡೆಸುತ್ತಿದ್ದಾರೆ. ಇದೀಗ ಅಮ್ಮನೂ ಆಗಿದ್ದಾರೆ.

58
ಕನ್ನಡ ಮೂಲ

ದೀಪಿಕಾ ಪಡುಕೋಣೆಯ ಹಿನ್ನೆಲೆ ನೋಡುವುದಾದರೆ, ಜನವರಿ 5, 1986 ರಂದು ಡೆನ್ಮಾರ್ಕ್‌ನ (Denmark) ಕೋಪನ್‌ಹ್ಯಾಗನ್‌ನಲ್ಲಿ ಜನಿಸಿದ ದೀಪಿಕಾ ಕನ್ನಡ ಮೂಲದವರು. ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಮತ್ತು ಉಜ್ಜಾಲಾ ದಂಪತಿಯ ಪುತ್ರಿ ದೀಪಿಕಾ ಪಡುಕೋಣೆ ಓದಿದ್ದೆಲ್ಲವೂ ಬೆಂಗಳೂರಿನಲ್ಲಿ. ಏಕೆಂದರೆ ಈಕೆ ಚಿಕ್ಕವರಿರುವಾಗ ಅವರ ಕುಟುಂಬ ಬೆಂಗಳೂರಿಗೆ ಶಿಫ್ಟ್ (Bangalore) ಆದ್ದರಿಂದ ಇಲ್ಲಿಯೇ ಅವರ ಶಿಕ್ಷಣ ಮುಗಿಯಿತು. ಬೆಂಗಳೂರಿನ ಸೋಫಿಯಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ದೀಪಿಕಾ ಪಡುಕೋಣೆ, ಮೌಂಟ್ ಕಾರ್ಮೆಲ್ ಕಾಲೇಜ್‌ನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು.

68
ಮಾಡೆಲಿಂಗ್​, ಸಿನಿಮಾ

ಬಳಿಕ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ ಹಲವು ಜಾಹೀರಾತುಗಳಲ್ಲಿ ಮಿಂಚಿದರು. ಕನ್ನಡದ ‘ಐಶ್ವರ್ಯ’ ಸಿನಿಮಾದ ಮೂಲಕ ಬಣ್ಣದ ಪ್ರಪಂಚಕ್ಕೆ ಇವರು ಪದಾರ್ಪಣೆ ಮಾಡಿದರು. ಆದರೆ ಸಕ್ಸಸ್​ ಕಂಡದ್ದು ಬಾಲಿವುಡ್​ನಲ್ಲಿ. ‘ಓಂ ಶಾಂತಿ ಓಂ’ ಚಿತ್ರದ ಮೂಲಕ ಬಾಲಿವುಡ್‌ಗೆ ದೀಪಿಕಾ ಎಂಟ್ರಿ ಕೊಟ್ಟು ಅಲ್ಲಿಯೇ ನೆಲೆಯೂರಿದರು. ‘ಲವ್ ಆಜ್ ಕಲ್’, ‘ಕಾಕ್‌ಟೇಲ್’, ‘ಚೆನ್ನೈ ಎಕ್ಸ್‌ಪ್ರೆಸ್’, ‘ಪಿಕು’, ‘ಭಾಜಿರಾವ್ ಮಸ್ತಾನಿ’, ‘ಪದ್ಮಾವತ್’ (Padmavath), ‘ಚಪಾಕ್’ ಮುಂತಾದ ಬ್ಲಾಕ್​ಬಸ್ಟರ್​ ಚಿತ್ರ ಕೊಟ್ಟರು. ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ದೀಪಿಕಾ ಪಡುಕೋಣೆ 2018ರಲ್ಲಿ ರಣ್‌ವೀರ್ ಸಿಂಗ್‌ರನ್ನು ಮದುವೆಯಾದರು.

78
ಓದಿದ್ದೆಷ್ಟು?

ಇಷ್ಟೆಲ್ಲಾ ಸಾಧನೆ ಮಾಡಿರುವ ದೀಪಿಕಾ ಓದಿದ್ದು ಮಾತ್ರ 12ನೇ ತರಗತಿಯವರೆಗೆ. ಅಂದರೆ ದ್ವಿತೀಯ ಪಿಯುಸಿವರೆಗೆ (PUC 2nd year) ಮಾತ್ರ. ಹೌದು! ಕೆಲ ತಿಂಗಳುಗಳ ಹಿಂದೆ ಈ ಬಗ್ಗೆ ಖುದ್ದು ದೀಪಿಕಾ ಹೇಳಿಕೊಂಡಿದ್ದು, ಅದರ ವಿಡಿಯೋ ಈಗ ವೈರಲ್​ ಆಗಿದೆ. ಯಶಸ್ಸಿಗೆ ಬೇಕಾಗಿರುವುದು ಕಠಿಣ ಪರಿಶ್ರಮ ಮತ್ತು ಶಿಸ್ತು ಎಂದಿರುವ ದೀಪಿಕಾ, ತಾವು ಹೆಚ್ಚಿನ ಶಿಕ್ಷಣ ಕಲಿಯಲು ಏಕೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

88
ಯಶಸ್ಸು ಅರಸಲು

'ಯಶಸ್ಸನ್ನು ಅರಸಲು ನಾನು ನನ್ನ ಕುಟುಂಬದಿಂದ ದೂರವಿದ್ದೆ. 12ನೇ ಕ್ಲಾಸ್‌ ಪಾಸ್‌ ಆದ ತಕ್ಷಣವೇ ಕನಸಿನ ಬೆನ್ನಟ್ಟಿದೆ. ಹಾಗಾಗಿ ಔಪಚಾರಿಕ ಶಿಕ್ಷಣವನ್ನು ನನ್ನಿಂದ ಪೂರ್ಣಗೊಳಿಸಲು ಆಗಲಿಲ್ಲ. ಪ್ರಾರಂಭದಲ್ಲಿ ನನ್ನ ತಂದೆ-ತಾಯಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಅವರಿಗೆ ನಾನು ಬಹಳ ಕಲಿಯಬೇಕು ಎಂಬ ಕನಸು ಇತ್ತು. ಔಪಚಾರಿಕ ಶಿಕ್ಷಣವನ್ನು ಪೂರೈಸಿದ ನಂತರವೇ ಸಿನಿಮಾ ಇಂಡಸ್ಟ್ರಿಗೆ ಹೋಗಲು ಹೇಳಿದ್ದರು.

Read more Photos on
click me!

Recommended Stories