ನ್ಯಾಶನಲ್ ಕ್ರಶ್ To ಲವ್, ಬಚ್ಚಿಟ್ಟ ಹೃದಯದ ಸೀಕ್ರೆಟ್ ಮಾತು ತಿಳಿಸಿದ ರಶ್ಮಿಕಾ ಮಂದಣ್ಣ

Published : Feb 08, 2025, 10:03 PM ISTUpdated : Feb 08, 2025, 10:32 PM IST

ರಶ್ಮಿಕಾ ಮಂದಣ್ಣ ಕಾಲೇಜು ದಿನ, ಬಳಿಕ ಸ್ಯಾಂಡಲ್‌ವುಡ್, ಇದೀಗ ಬಾಲಿವುಡ್ ವರೆಗಿನ ಹೃದಯದ ಮಾತುಗಳನ್ನು ಹೇಳಿದ್ದಾರೆ. ಕ್ರಶ್, ಲವ್ ಕುರಿತು ಹಲವು ಸೀಕ್ರೆಟ್ ಮಾತುಗಳನ್ನು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಹೃದಯ ಮಾತೇನು?   

PREV
16
ನ್ಯಾಶನಲ್ ಕ್ರಶ್ To ಲವ್, ಬಚ್ಚಿಟ್ಟ ಹೃದಯದ ಸೀಕ್ರೆಟ್ ಮಾತು ತಿಳಿಸಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಛಾವಾ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಆ್ಯನಿಮಲ್, ಪುಷ್ಪಾ 2 ಸೇರಿದಂತೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿ ಮಾತ್ರವಲ್ಲ, ಜನರ ಅಚ್ಚು ಮೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾರೆ. ಇದೀಗ ಫೆಬ್ರವರಿ 14ರಂದು ಛಾವಾ ಚಿತ್ರ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ರಶ್ಮಿಕಾ ಮಂದಣ್ಣ ಹಲವು ಸೀಕ್ರೆಟ್ ಬಹಿರಂಗಪಡಿಸಿದ್ದಾರೆ. ಈ ಪೈಕಿ ತಮ್ಮ ಹೃದಯ ಮಾತು ಹೇಳಿದ್ದಾರೆ.
 

26

ಛಾವಾ ಸಿನಿಮಾ ಪ್ರಚಾರದ ಹಿನ್ನಲೆಯಲ್ಲಿ ಇಟಿ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ನ್ಯಾಶನಲ್ ಕ್ರಶ್‌ನಿಂದ ಹಿಡಿದು ಇದುವರಿಗಿನ ಲವ್ ಕುರಿತು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಕ್ರಶ್ ಕುರಿತು ಪ್ರಶ್ನೆಗೆ ಉತ್ತರಿಸುತ್ತಾ ರಶ್ಮಿಕಾ ಮಂದಣ್ಣ ಹಲವು ರೋಚಕ ಮಾಹಿತಿ ಹಂಚಿಕೊಂಡಿದ್ದಾರೆ. ಇದೀಗ ರಶ್ಮಿಕಾ ಈ ಮಾತುಗಳು ಭಾರಿ ಸದ್ದು ಮಾಡುತ್ತಿದೆ.

36

ನ್ಯಾಶನಲ್ ಕ್ರಶ್ ಅನ್ನೋ ಕಿರೀಟ ಕಿರಿಕ್ ಪಾರ್ಟಿ ಚಿತ್ರದ ವೇಳೆ ಸಿಕ್ಕಿತ್ತು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಆದರೆ ಅದಕ್ಕಿಂತ ಮುಂಚೆ ನಾನು ಕಾಲೇಜು ಕ್ರಶ್ ಆಗಿದ್ದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಇಡೀ ಕಾಲೇಜಿನ ಕ್ರಶ್ ಆಗಿದ್ದೆ, ಬಳಿಕ ಕರ್ನಾಟಕ ಕ್ರಶ್ ಆದೆ. ಇದರ ಬೆನ್ನಲ್ಲೇ ನ್ಯಾಶಲ್ ಕ್ರಶ್ ಅನ್ನೋ ಪ್ರೀತಿ ಸಿಕ್ಕಿತ್ತು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಆದರೆ ರಶ್ಮಿಕಾ ಮಾತು ಇಲ್ಲಿಗೆ ಮುಗಿದಿಲ್ಲ.

46

ಕ್ರಶ್ ಆಗಿದ್ದ ನಾನು ಇದೀಗ ಎಲ್ಲೆಡೆಗಳಿಂದ ಪ್ರೀತಿ ಸಿಗುತ್ತಿದೆ. ಜನರು ಇದೀಗ ಎಲ್ಲೇ ಹೋದರು ಪ್ರೀತಿ ವ್ಯಕ್ತಪಡಿಸುತ್ತಾರೆ. ಇದೀಗ ನೇಶನ್ ಲವ್ ಎಂದು ಹೇಳುತ್ತಿದ್ದಾರೆ. ನೀವು ಎಲ್ಲರ ಮನಸ್ಸಿನಲ್ಲಿದ್ದೀರಿ, ಎಲ್ಲರ ಹೃದಯಕ್ಕೆ ಲಗ್ಗೆ ಇಟ್ಟಿದ್ದೀರಿ ಎಂದು ಹೇಳುತ್ತಾರೆ. ನ್ಯಾಶನಲ್ ಕ್ರಶ್‌ನಿಂದ ಇದೀಗ ಜನರ ಹೃದಯದಲ್ಲಿ ಭದ್ರವಾಗಿ ಬೇರೂರಲು ಸಾಧ್ಯವಾಗಿದೆ. ಇದಕ್ಕಿಂತ ಸಂತಸ ಇನ್ನೇನಿದೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
 

56

ಜನರ ಹೃದಯ ಹಾಗೂ ಮನಸ್ಸಿನಲ್ಲಿ ಗಟ್ಟಿಯಾಗಿದ್ದೇನೆ ಅನ್ನೋ ಮಾತುಗಳು ಕೇಳಿಸಿದಾಗ ಸಂತೋಷವಾಗುತ್ತದೆ. ಎಲ್ಲರ ಹೃದಯದಲ್ಲಿ ನಾನಿದ್ದೇನೆ ಅನ್ನೋದೇ ದೊಡ್ಡ ಕಿರೀಟ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಈ ಹೃದಯದ ಮಾತು ಮತ್ತಷ್ಟು ಜವಾಬ್ದಾರಿ ನೀಡಿದೆ ಎಂದಿದ್ದಾರೆ. 

66

ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಾಲ್ ಅಭಿನಯದ ಛಾವಾ ಚಿತ್ರ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜ ಹಾಗೂ ಯುಸುಬಾಯಿ ಭೋನ್ಸಾಲೆ ಜೀವನಾಧಾರಿತ ಚಿತ್ರದ ಟ್ರೇಲರ್ ಭಾರಿ ಹಿಟ್ ಆಗಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಪುಷ್ಪಾ 2 ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ರಶ್ಮಿಕಾ ಮಂದಣ್ಣ ಮತ್ತೊಂದು ಸೂಪರ್ ಹಿಟ್ ಚಿತ್ರ ನೀಡಲು ಸಜ್ಜಾಗಿದ್ದಾರೆ.

Read more Photos on
click me!

Recommended Stories