Critics Choice Awards 2022: ಸಮಂತಾರಿಂದ ಕೊಂಕಣಾ ಸೇನ್ ವರೆಗೆ ರೆಡ್ ಕಾರ್ಪೆಟ್ ಮೇಲೆ ಸ್ಟಾರ್ಸ್!
First Published | Mar 11, 2022, 5:38 PM ISTಮಾರ್ಚ್ 10 ರಂದು, 'ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ 2022' ನಲ್ಲಿ (Critics Choice Awards 2022) ತಾರೆಯರ ದಂಡೇ ಇತ್ತು. ಶಾರ್ಟ್ ಫಿಲ್ಮ್ಸ್ ಮತ್ತು ವೆಬ್ ಸರಣಿಗಳಿಗಾಗಿ ನೀಡಲಾಗುವ ಈ ಪ್ರಶಸ್ತಿಯಲ್ಲಿ ಕೊಂಕಣ ಸೇನ್ (Konkona Sen Sharma), ಸಮಂತಾ ರುತ್ ಪ್ರಭು (Samantha Ruth Prabhu) ಸೇರಿದಂತೆ ಅನೇಕ ನಟ-ನಟಿಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಎಲ್ಲರೂ ರೆಡ್ ಕಾರ್ಪೆಟ್ ಮೇಲೆ ತಮ್ಮ ಲುಕ್ ಅನ್ನು ಪ್ರದರ್ಶಿಸಿದರು. ಮೋಷನ್ ಕಂಟೆಂಟ್ ಗ್ರೂಪ್, ಗ್ರೂಪ್‌ಎಂ ಕಂಟೆಂಟ್‌ಸ್ ಇನ್ವೇಸಟ್, ಪ್ರೋಡೇಕ್ಷನ್ ಆಂಡ್ ಡಿಸ್ಟ್ರಿಬ್ಯೂಷನ್ ಬ್ಯುಸಿನೆಸ್ ಸಹಯೋಗದೊಂದಿಗೆ ಮತ್ತು ಫಿಲ್ಮ್ ಕ್ರಿಟಿಕ್ಸ್ ಗಿಲ್ಡ್ ಮತ್ತು ವಿಸ್ಟಾಸ್ ಮೀಡಿಯಾ ಕ್ಯಾಪಿಟಲ್ ಸಹಯೋಗದೊಂದಿಗೆ 'ಕ್ರಿಟಿಕ್ಸ್' ಚಾಯ್ಸ್ ಅವಾರ್ಡ್ಸ್'ನ ನಾಲ್ಕನೇ ಸೀಸನ್ ಆಯೋಜಿಸಲಾಗಿದೆ.