ಸೋಹಮ್ ಶಾ ಈ ಹಿಂದೆ 'ತುಂಬಾಡ್' ಸಿನಿಮಾ ರೆಕಾರ್ಡ್ ಅನ್ನು ಕೂಡಾ ಇದು ಬ್ರೇಕ್ ಮಾಡುವ ಹಾಗೆ ಕಾಣ್ತಿದೆ. ಕಂಟೆಂಟ್ ಇರುವ ಸಿನಿಮಾಗಳಿಂದ ಆಡಿಯನ್ಸ್‌ನಲ್ಲಿ ಒಳ್ಳೆ ಹೆಸರು ಸಂಪಾದಿಸಿಕೊಂಡಿದ್ದಾರೆ. ಈಗ ಒಳ್ಳೆ ಕಂಟೆಂಟ್ ಜೊತೆಗೆ ಕಮರ್ಷಿಯಲ್ ಆಗಿಯೂ ಸೋಹಮ್ ಸ್ಟ್ರಾಂಗ್ ಆಗ್ತಿದ್ದಾರೆ. 'ಕ್ರೇಜಿ' ಸಿನಿಮಾವನ್ನು ತುಂಬಾ ಕಡಿಮೆ ಬಜೆಟ್‌ನಲ್ಲಿ ತೆಗೆದಿದ್ದಾರೆ. ಪ್ರೊಡಕ್ಷನ್‌ಗೆ 4.4 ಕೋಟಿ, ಪಬ್ಲಿಸಿಟಿ, ಡಿಸ್ಟ್ರಿಬ್ಯೂಷನ್‌ಗೆ ಇನ್ನೊಂದು 4 ಕೋಟಿ.. ಟೋಟಲ್ ಸೇರಿ 8.4 ಕೋಟಿ ಮಾತ್ರ ಖರ್ಚು ಮಾಡಿದ್ದಾರೆ. ಆದರೆ ಬುದ್ಧಿವಂತಿಕೆಯಿಂದ ಈ ಸಿನಿಮಾ ರಿಲೀಸ್‌ಗೆ ಮುಂಚೆ ಪ್ರೀರಿಲೀಸ್ ಬಿಸಿನೆಸ್‌ನಲ್ಲಿ ಡಿಜಿಟಲ್, ಸ್ಯಾಟಲೈಟ್, ಮ್ಯೂಸಿಕ್ ರೈಟ್ಸ್ ಮಾರಿ 15 ಕೋಟಿ ಸಂಪಾದಿಸಿದ್ದಾರೆ ಟೀಮ್.