ಪದ್ಮನಾಭಂ ಅವರು ಸಹ ಯಾವುದೇ ಸಿನಿಮಾದ ಹಿನ್ನೆಲೆ ಚಿತ್ರರಂಗಕ್ಕೆ ಬಂದವರು. ತಾವು ಭದ್ರವಾಗಿ ನೆಲಯೂರಿದ ಬಳಿಕ ಹೊಸಬರಿಗೆ ಅವಕಾಶ ಕೊಡಲು ಪದ್ಮನಾಭಂ ಆರಂಭಿಸಿದರು. ಸಿನಿಮಾ ನಿರ್ಮಾಣಕ್ಕಿಳಿದ ಪದ್ಮನಾಭಂ ಅವರು, ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ ಚಿತ್ರವನ್ನು ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಿಸಿದರು. ಈ ಚಿತ್ರದಲ್ಲಿ ಕಲಾವಿದರು, ಗಾಯಕರು ಸೇರಿದಂತೆ ಹಲವರಿಗೆ ಅವಕಾಶ ನೀಡಿದ್ದರು.