ಬ್ಲ್ಯಾಕ್‌ ಗೌನ್‌ನಲ್ಲಿ ಕಂಗೊಳಿಸಿದ ಕೃತಿ ಶೆಟ್ಟಿ: ಟಾಲಿವುಡ್‌ನ ಐರನ್ ಲೆಗ್ ಹೀರೋಯಿನ್ ಎಂದ ಫ್ಯಾನ್ಸ್‌

Published : Jul 14, 2024, 05:27 PM ISTUpdated : Jul 15, 2024, 11:05 AM IST

ಕರ್ನಾಟಕ ಮೂಲದ ಚೆಲುವೆ ಕೃತಿ ಶೆಟ್ಟಿ, ಟಾಲಿವುಡ್, ಕಾಲಿವುಡ್‌ ಸಖತ್ ಫೇಮಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಸಖತ್ ಆಕ್ಟಿವ್. ಇತ್ತೀಚೆಗೆ ಅವರು ಬ್ಲ್ಯಾಕ್‌ ಕಲರ್ ಗೌನ್‌ನಲ್ಲಿ ಸೂಪರ್‌ ಆಗಿ ಕಂಗೊಳಿಸಿದ್ದಾರೆ.

PREV
17
ಬ್ಲ್ಯಾಕ್‌ ಗೌನ್‌ನಲ್ಲಿ ಕಂಗೊಳಿಸಿದ ಕೃತಿ ಶೆಟ್ಟಿ: ಟಾಲಿವುಡ್‌ನ ಐರನ್ ಲೆಗ್ ಹೀರೋಯಿನ್ ಎಂದ ಫ್ಯಾನ್ಸ್‌

ಕೃತಿ ಶೆಟ್ಟಿ ರಾತ್ರೋರಾತ್ರಿ ಸ್ಟಾರ್ ಪಟ್ಟ ಪಡೆದ ನಾಯಕಿಯರಲ್ಲಿ ಒಬ್ಬರು. ತಮ್ಮ ಚೊಚ್ಚಲ ಚಿತ್ರದ ಮೂಲಕ ಯುವ ಪ್ರೇಕ್ಷಕರ ಹೃದಯವನ್ನು ಕೃತಿ ಶೆಟ್ಟಿ ಕದ್ದಿದ್ದಾರೆ. ಅಲ್ಲದೇ ಟಾಲಿವುಡ್‌ನಲ್ಲಿ ಅವರು ಯುವಕರ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿದ್ದಾರೆ.
 

27

ಇದೀಗ ಕೃತಿ ಶೆಟ್ಟಿ ತಮ್ಮ ಸಪೂರ ದೇಹ ಸಿರಿಯಿಂದಲೇ ಹೊಸ ಫೋಟೋಶೂಟ್‌ನಲ್ಲಿ ಮಿಂಚುತ್ತಿದ್ದಾರೆ. ಸುಂದರ ಉಡುಗೆಯನ್ನ ಧರಿಸಿ ಹಾಟ್‌ ಅನಿಸೋ ಪೋಸ್‌ಗಳನ್ನು ವಿವಿಧ ಭಂಗಿಗಳಲ್ಲಿ ಕೊಟ್ಟಿದ್ದಾರೆ.

37

ಬ್ಲ್ಯಾಕ್‌ ಗೌನ್‌ನಲ್ಲಿ ಕೃತಿ ಶೆಟ್ಟಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಸಖತ್ ವೈರಲ್ ಆಗಿವೆ. ಅಲ್ಲದೇ ಏಳು ಲಕ್ಷಕ್ಕೂ ಹೆಚ್ಚು ಜನರು ಫೋಟೋಗಳಿಗೆ ಲೈಕ್ಸ್ ನೀಡಿದ್ದಾರೆ.

47

ಕೃತಿ ಶೆಟ್ಟಿ ಹಂಚಿಕೊಂಡ ಫೋಟೋಗಳನ್ನು ನೋಡಿ ನೆಟ್ಟಿಗರು, ವಾವ್ ಸಖತ್ ಸೆಕ್ಸಿಯಾಗಿ ಇದ್ದೀರಾ, ಹೇರ್‌ಸ್ಟೈಲ್ ಚೆನ್ನಾಗಿದೆ. ಡಾರ್ಕ್ ಚಾಕೋಲೆಟ್ ಹಾಗೂ ಡಾರ್ಕ್ ಫ್ಯಾಂಟಸಿ, ಟಾಲಿವುಡ್‌ನ ಐರನ್ ಲೆಗ್ ಹೀರೋಯಿನ್ ನಿಮಗೆ ನಟನೆ ಗೊತ್ತಿಲ್ಲ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

57

ಮುದ್ದಾದ ನೋಟ ಮತ್ತು ತಮ್ಮ ನಟನೆಯಿಂದ ಕೃತಿ ಶೆಟ್ಟಿ ಯುವ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಈ ನಾಯಕಿ ಇದ್ದಕ್ಕಿದ್ದಂತೆ ಫೇಮಸ್ ಆದರು. ಅದಾದ ನಂತರ ಸಾಲು ಸಾಲು ಸಿನಿಮಾ ಆಫರ್‌ಗಳಿಂದ ಕೃತಿ ಹೆಸರು ಜನಪ್ರಿಯವಾಯಿತು. ನಂತರ ಉಪ್ಪೇನಾ ಚಿತ್ರದ ಮೂಲಕ ಸಖತ್ ಫೇಮಸ್ ಆದರು.

67

ಕೃತಿ ಶೆಟ್ಟಿ ನಟನೆ ಆರಂಭಿಸಿದ್ದು ಹಿಂದಿ ಸಿನಿಮಾ ಮೂಲಕ. ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಸಿನಿಮಾದಲ್ಲಿ ಬಾಲನಟಿಯಾಗಿ ಕೃತಿ ನಟಿಸಿದ್ದರು. ಕೃತಿ ಶೆಟ್ಟಿ ‘ಉಪ್ಪೇನ’ ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.  

77

ಇನ್ನು ಕೃತಿ ಶೆಟ್ಟಿ ನಟಿಸಿದ ಸಾಲು ಸಾಲು ಸಿನಿಮಾಗಳು ಫ್ಲಾಪ್‌ ಆಗಿದ್ದಲ್ಲದೇ ಅವರಿಗೆ ಬರುತ್ತಿದ್ದ ಆಫರ್‌ಗಳು ದಿಢೀರ್ ಕಡಿಮೆಯಾಗಿದೆ. ಇತ್ತೀಚೆಗಷ್ಟೇ ಕೃತಿ ಕಸ್ಟಡಿ ಚಿತ್ರದ ಮೂಲಕ ಕಮ್‌ಬ್ಯಾಕ್‌ ಮಾಡಿದ್ದರು.  

Read more Photos on
click me!

Recommended Stories