ಸಂಧ್ಯಾ ಥಿಯೇಟರ್ ವಿವಾದ ಹೀರೋ ಅಲ್ಲು ಅರ್ಜುನ್ರನ್ನ ಕಾಡ್ತಿದೆ. ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ರನ್ನ ಅರೆಸ್ಟ್ ಮಾಡಲಾಗಿತ್ತು. ಒಂದು ದಿನ ರಾತ್ರಿ ಜೈಲಿನಲ್ಲಿ ಕಳೆದಿದ್ರು. ಈ ಅರೆಸ್ಟ್ ಹಿಂದೆ ಸಿಎಂ ರೇವಂತ್ ರೆಡ್ಡಿ ಕೈವಾಡ ಇದೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿಬಂದಿದ್ದವು. ತೆಲಂಗಾಣ ಸಿಎಂರನ್ನ ಟ್ರೋಲ್ ಮಾಡುವ ಪೋಸ್ಟ್ಗಳು ಹರಿದಾಡಿದ್ದವು.
ಈ ವಿವಾದದಲ್ಲಿ ತಮ್ಮ ಹೆಸರು ತಳಕು ಹಾಕಿದ್ದಕ್ಕೆ ಸಿಎಂ ರೇವಂತ್ ರೆಡ್ಡಿ ವಿಧಾನಸಭೆಯಲ್ಲಿ ಗರಂ ಆಗಿದ್ರು. ಅಲ್ಲು ಅರ್ಜುನ್ ಜೊತೆಗೆ ಟಾಲಿವುಡ್ ಗಣ್ಯರ ಮೇಲೂ ಟೀಕೆ ಮಾಡಿದ್ರು. ರೇವಂತ್ ರೆಡ್ಡಿ ಮಾತನಾಡಿ, ಸಂಧ್ಯಾ ಥಿಯೇಟರ್ನಲ್ಲಿ ನಡೆದ ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ. ಕೇಸ್ ದಾಖಲಿಸಿದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎ1 ಆಗಿದ್ದ ಅಲ್ಲು ಅರ್ಜುನ್ರನ್ನೂ ಅರೆಸ್ಟ್ ಮಾಡಲಾಗಿದೆ. ಮನೆಗೆ ಬಂದ ಪೊಲೀಸರ ಜೊತೆ ಅಲ್ಲು ಅರ್ಜುನ್ ಅಸಭ್ಯವಾಗಿ ವರ್ತಿಸಿದ್ದಾರೆ.
ಒಂದು ದಿನ ಅಲ್ಲು ಅರ್ಜುನ್ ಜೈಲಿನಲ್ಲಿದ್ದಕ್ಕೆ ತೆಲಂಗಾಣ ಸರ್ಕಾರ, ಸಿಎಂರನ್ನ ಟೀಕಿಸಿದ್ದಾರೆ. ಅಲ್ಲು ಅರ್ಜುನ್ಗೆ ಏನಾಯ್ತು ಅಂತ ಇಡೀ ಇಂಡಸ್ಟ್ರಿಯೇ ಅವರನ್ನ ಭೇಟಿ ಮಾಡೋಕೆ ಹೋಗಿದ್ದಾರೆ. ಅಲ್ಲು ಅರ್ಜುನ್ಗೆ ಕಾಲು ಹೋಯ್ತಾ? ಕಣ್ಣು ಹೋಯ್ತಾ? ಇಲ್ಲ ಕಿಡ್ನಿ ಹಾಳಾಯ್ತಾ?. ಅಲ್ಲು ಅರ್ಜುನ್ರನ್ನ ಭೇಟಿ ಮಾಡಿದ ಇಂಡಸ್ಟ್ರಿ ಗಣ್ಯರು, ಸಾವು ಬದುಕಿನ ನಡುವೆ ಇದ್ದ ಆ ಹುಡುಗನನ್ನ ಭೇಟಿ ಮಾಡಿದ್ರಾ? ಪರಾಮರ್ಶೆ ಮಾಡಿದ್ರಾ? ಇವರನ್ನ ಹೇಗೆ ಅರ್ಥ ಮಾಡ್ಕೊಳ್ಳೋದು ಅಂತ ಗರಂ ಆಗಿ ಪ್ರಶ್ನಿಸಿದ್ದಾರೆ.
ಡಿಸೆಂಬರ್ 4ರಂದು ರಾತ್ರಿ ಪುಷ್ಪ 2 ಪ್ರೀಮಿಯರ್ ಶೋ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ನಾಯಕಿ ರಶ್ಮಿಕಾ ಜೊತೆ ಸಂಧ್ಯಾ ಥಿಯೇಟರ್ಗೆ ಹೋಗಿದ್ರು. ಅಲ್ಲು ಅರ್ಜುನ್ ಬಂದಿದ್ದರಿಂದ ಅಭಿಮಾನಿಗಳು ಥಿಯೇಟರ್ಗೆ ಮುಗಿಬಿದ್ದಿದ್ರು. ಈ ವೇಳೆ ತುಳಿತ ಉಂಟಾಗಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದರು. ಆಕೆಯ ಮಗ ಗಾಯಗೊಂಡಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿದ್ರು. ಅಲ್ಲು ಅರ್ಜುನ್ ಹೆಸರನ್ನ ಎ1 ಆಗಿ ಸೇರಿಸಿದ್ರು. ಡಿಸೆಂಬರ್ 12ರಂದು ಅಲ್ಲು ಅರ್ಜುನ್ರನ್ನ ಅರೆಸ್ಟ್ ಮಾಡಲಾಯಿತು. ಕೋರ್ಟ್ 14 ದಿನಗಳ ರಿಮ್ಯಾಂಡ್ ವಿಧಿಸಿತ್ತು. ಅಲ್ಲು ಅರ್ಜುನ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ರು. ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ರು. ವೈಎಸ್ಆರ್ಸಿಪಿ ಸಂಸದ, ವಕೀಲ ನಿರಂಜನ್ ರೆಡ್ಡಿ ಅವರನ್ನ ಕಣಕ್ಕಿಳಿಸಿದ್ರು.
ವಾದವನ್ನ ಒಪ್ಪಿದ ಕೋರ್ಟ್ ಅಲ್ಲು ಅರ್ಜುನ್ಗೆ 4 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಆದ್ರೆ ಒಂದು ದಿನ ರಾತ್ರಿ ಅಲ್ಲು ಅರ್ಜುನ್ ಚಂಚಲ್ಗೂಡ ಜೈಲಿನಲ್ಲಿ ಕಳೆಯಬೇಕಾಯಿತು. ಹೈಕೋರ್ಟ್ನಲ್ಲಿ ವಾದ ನಡೆಯುತ್ತಿದ್ದಂತೆಯೇ ಕೆಳ ನ್ಯಾಯಾಲಯದ ತೀರ್ಪಿನಂತೆ ಅಲ್ಲು ಅರ್ಜುನ್ರನ್ನ ಚಂಚಲ್ಗೂಡ ಜೈಲಿಗೆ ಕಳುಹಿಸಲಾಯಿತು. ಕೋರ್ಟ್ ಜಾಮೀನು ಮಂಜೂರು ಮಾಡಿದ್ರೂ, ಆದೇಶದ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪಬೇಕಿತ್ತು. ಆ ಪ್ರತಿ ಸಕಾಲಕ್ಕೆ ತಲುಪಿಲ್ಲ ಅಂತ ಹೇಳಿ ಅಲ್ಲು ಅರ್ಜುನ್ರನ್ನ ಜೈಲಿನಲ್ಲಿ ಇರಿಸಲಾಗಿತ್ತು.
ಅಲ್ಲು ಅರ್ಜುನ್ ಅರೆಸ್ಟ್ ಉದ್ದೇಶಪೂರ್ವಕವಾಗಿ ನಡೆದಿದೆ. ಪುಷ್ಪ 2 ಸಕ್ಸಸ್ ಮೀಟ್ನಲ್ಲಿ ಅಲ್ಲು ಅರ್ಜುನ್ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೆಸರನ್ನ ಮರೆತಿದ್ರು. ಸಿಎಂಗೆ ಇಗೋ ಹರ್ಟ್ ಆಗಿದ್ದರಿಂದ ಅಲ್ಲು ಅರ್ಜುನ್ ಮೇಲೆ ಸೇಡು ತೀರಿಸಿಕೊಂಡಿದ್ದಾರೆ ಅಂತ ಟಿಆರ್ಎಸ್, ಬಿಜೆಪಿ ನಾಯಕರು ಟೀಕಿಸಿದ್ರು. ವಿರೋಧ ಪಕ್ಷಗಳು, ಚಿತ್ರರಂಗದ ಗಣ್ಯರು ಅಲ್ಲು ಅರ್ಜುನ್ ಅರೆಸ್ಟ್ನ್ನ ಖಂಡಿಸಿದ್ರು. ಬಿಡುಗಡೆಯಾದ ನಂತರ ಟಾಲಿವುಡ್ ಗಣ್ಯರು ಅಲ್ಲು ಅರ್ಜುನ್ರನ್ನ ಭೇಟಿ ಮಾಡಿ ಸಾಂತ್ವನ ಹೇಳಿದ್ರು. ಅಲ್ಲು ಅರ್ಜುನ್ಗೆ ಇಂಡಸ್ಟ್ರಿ ಗಣ್ಯರು ಬೆಂಬಲ ಸೂಚಿಸಿದ್ದನ್ನ ಸಿಎಂ ರೇವಂತ್ ರೆಡ್ಡಿ ವಿಧಾನಸಭೆಯಲ್ಲಿ ಖಂಡಿಸಿದ್ದಾರೆ.