ಚೋಲಿ ಕೆ ಪೀಚೆ ಕ್ಯಾ ಹೆ ಶೂಟಿಂಗ್‌ ಹಿಂದಿನ ಪ್ಯಾಡೆಡ್ ಬ್ರಾ ರಹಸ್ಯ ಬಿಚ್ಚಿಟ್ಟ ನಟಿ ನೀನಾ ಗುಪ್ತಾ

Published : Feb 18, 2026, 03:09 PM IST

ಚೋಲಿ ಕೆ ಪೀಚೆ ಕ್ಯಾ ಹೆ ಶೂಟಿಂಗ್‌ ಹಿಂದಿನ ಪ್ಯಾಡೆಡ್ ಬ್ರಾ ರಹಸ್ಯ ಬಿಚ್ಚಿಟ್ಟ ನಟಿ ನೀನಾ ಗುಪ್ತಾ, ಬಾಲಿವುಡ್‌ನ ಜನಪ್ರಿಯ ಸಾಂಗ್ ಹಿಂದೆ ನಡೆದ ಘಟನೆಗೆ ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏನಿದು ಪ್ಯಾಡೆಡ್ ಬ್ರಾ ಘಟನೆ 

PREV
16
ಚೋಲಿ ಕೆ ಪೀಚೆ ಕ್ಯಾಹೆ ತೆರೆ ಹಿಂದೆ ನಡೆದಿದ್ದೇನು?

ಬಾಲಿವುಡ್ ಹಾಡುಗಳಲ್ಲಿ ಚೋಲಿ ಕೀ ಪೀಚೆ ಕ್ಯಾ ಹೈ ಹಾಡು ಅತ್ಯಂತ ಜನಪ್ರಿಯ ಮಾತ್ರವಲ್ಲ, ಬಹುತೇಕರು ಮೆಚ್ಚಿಕೊಂಡು ಗುನುಗಿದ ಹಾಡು. ಖಳನಾಯಕ ಸಿನಿಮಾದ ಈ ಹಾಡಿಗೆ ಮಾಧುರಿ ದೀಕ್ಷಿತ್ ಹಾಗೂ ನೀನಾ ಗುಪ್ತ ಹೆಜ್ಜೆ ಹಾಕಿದ್ದಾರೆ. ಸಪೋರ್ಟಿಂಗ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ನೀನಾ ಗುಪ್ತ ಇದೀಗ ಚೋಲಿ ಕೆ ಪೀಚೆ ಕ್ಯಾ ಹೈ ಬದಲು ತರೆ ಹಿಂದೆ ನಡೆದಿದ್ದೇನು ಅನ್ನೋದನ್ನು ಬಹಿರಂಗಪಡಿಸಿದ್ದಾರೆ.

26
ಶೂಟಿಂಗ್ ಘಟನೆ ತೆರೆದಿಟ್ಟ ನೀನಾ ಗುಪ್ತ

ಬಾಲಿವುಡ್‌ನ ಈ ಹಾಡನ ಶೂಟಿಂಗ್ ಕುರಿತು ನೀನಾ ಗುಪ್ತ ಇತ್ತೀಚೆಗೆ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ್ದಾರೆ. ಚೋಲಿ ಕೀ ಪೀಚೆ ಕ್ಯಾ ಹೇ ಅಂದಿನ ಕಾಲಕ್ಕೆ ಒಂದು ರೀತಿ ಐಟಂ ಸಾಂಗ್. ಆದರೆ ಇದರ ಸಾಹಿತ್ಯ, ಸಂಗೀತ ಎಂತವರನ್ನು ಮೋಡಿ ಮಾಡುತ್ತೆ. ನಾಯಕಿ ಮಾಧುರಿ ದೀಕ್ಷಿತ್ ಜೊತೆ ಸಪೋರ್ಟಿಂಗ್ ಪಾತ್ರ ಮಾಡುತ್ತಿದ್ದ ನೀನಾ ಗುಪ್ತಾಗೆ ನಿರ್ದೇಶಕರು ಕೆಲ ಸೂಚನೆ ನೀಡಿದ್ದರು. ಈ ಪೈಕಿ ಪ್ಯಾಡೆಡ್ ಬ್ರಾ, ಒಳ ಉಡುಪೇ ನೀನಾ ಗುಪ್ತ ಆಕ್ರೋಶಕ್ಕೆ ಕಾರಣವಾಗಿತ್ತು.

36
ಏನದು ಪ್ಯಾಡೆಡ್ ಬ್ರಾ ಘಟನೆ

ಈ ಹಾಡು ಅಷ್ಟೇ ರಸವತ್ತಾಗಿ ಚಿತ್ರೀಕರಿಸಲು ನಿರ್ದೇಶಕ ಸುಭಾಷ್ ಘಾಯ್ ನಿರ್ಧರಿಸಿದ್ದರು. ಮಾಧುರಿ ದೀಕ್ಷಿತ್‌ಗೆ ಸರಿಸಮಾನಗಿ ನೀನಾ ಗುಪ್ತ ಫಿಸಿಕ್ ಕಾಣಬೇಕು. ಅಷ್ಟೇ ಆಕರ್ಷಣೆ ಇರಬೇಕು ಅನ್ನೋದು ನಿರ್ದೇಶಕ ಅಜೆಂಡಾ ಆಗಿತ್ತು. ಇದಕ್ಕಾಗಿ ನೀನಾ ಗುಪ್ತಾಗೆ ಕಡ್ಡಾಯವಾಗಿ ಪ್ಯಾಡೆಡ್ ಬ್ರಾ ಧರಿಸಬೇಕು ಎಂದಿದ್ದರು. ದೃಶ್ಯಗಳಲ್ಲಿ ಆಕರ್ಷಣೆ ಹೆಚ್ಚಿಸಲು ಸೈಝ್ ಮುಖ್ಯ. ಹೀಗಾಗಿ ಪ್ಯಾಡೆಡ್ ಬ್ರಾ ಧರಿಸಬೇಕು ಎಂದು ಸೂಚಿಸಿದ್ದರು.

46
ನಿರ್ದೇಶಕನ ವಿರುದ್ಧ ಗರಂ ಆಗಿದ್ದ ನೀನಾ ಗುಪ್ತಾ

ನಟಿ ಒಳ ಉಡುಪಿನ ಕುರಿತು ನಿರ್ದೇಶಕ ಹೇಗೆ ಸೂಚನೆ ನೀಡುತ್ತಾರೆ. ಎಲ್ಲಾ ಡಿಸೈನರ್ಸ್, ಡ್ರೆಸ್ ವಿಭಾಗ ಸಿಬ್ಬಂದಿಗಳ ಮುಂದೆ ಸೈಝ್, ಬ್ರಾ ಎಂದು ಹೇಳಿದ್ದರು. ಇದು ಆಕ್ರೋಶ ತರಿಸಿತ್ತು. ಈ ಮೂಲಕ ಮತ್ತೊಬ್ಬರ ಜೊತೆ ತುಲನೆ ಮಾಡಿ ಕಡಿಮೆ ಸೈಝ್ ಅನ್ನೋದನ್ನು ಸಾರ್ವಜನಿಕವಾಗಿ ಹೇಳುವುದು ಸೂಕ್ತವಲ್ಲ ಎಂದು ನೀನಾ ಗುಪ್ತ ಅಸಮಾಧಾನಗೊಂಡಿದ್ದರು. ಪಾಡ್‌ಕಾಸ್ಟ್‌ನಲ್ಲಿ ಈ ಘಟನೆ ಬಿಚ್ಚಿಟ್ಟಿದ್ದಾರೆ.

56
ಈಗಲೂ ನೀನಾ ಗುಪ್ತಾಗೆ ಇದೆಯಾ ಅಸಮಾಧಾನ

ಶೂಟಿಂಗ್ ಉದ್ದಕ್ಕೂ ನನಗೆ ಆಕ್ರೋಶ, ಅಸಮಾಧಾನವಿತ್ತು. ಆದರೆ ಶೂಟಿಂಗ್ ಬಳಿಕ ಸಾಂಗ್ ನೋಡಿದಾಗ ಖುಷಿಯಾಗಿತ್ತು. ಅದ್ಭುತವಾಗಿ ಮೂಡಿ ಬಂದಿತ್ತು. ಅಂದು ಈ ಸೂಚನೆ ಕೇಳಿಸಿಕೊಂಡಾಗ ಆಕ್ರೋಶವಿತ್ತು. ಆದರೆ ಇಂದು ನಿರ್ದೇಶಕನ ಕಲ್ಪನೆ, ದೃಶ್ಯಗಳ ಸಂಯೋಜನೆ ಇವೆಲ್ಲದರ ಅರಿವು ಇರುವ ಕಾರಣ ಇಂದು ಸರಿ ಎನಿಸುತ್ತೆ ಎಂದು ನೀನಾ ಗುಪ್ತ ಹೇಳಿದ್ದಾರೆ.

66
ಧೂಳೆಬ್ಬಿಸಿದ ಹಾಡು

ಬಾಲಿವುಡ್‌ನಲ್ಲಿ ಧೂಳೆಬ್ಬಿಸಿದ ಸಿನಿಮಾ ಖಳನಾಯಕ್. ಈ ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದೆ. ಈ ಪೈಕಿ ಚೋಲಿ ಕೀ ಪೀಚೆ ಕ್ಯಾಹೇ ಹಾಡು ಮಾತ್ರ ಅದೆಷ್ಟು ಜನರೇಶನ್ ಕಳೆದರೂ ಈಗಲೂ ಎವರ್‌ಗ್ರೀನ್ ಆಗಿ ನಿಂತಿದೆ. ನಾಯಕ ಸಂಜಯ್ ದತ್ ಸೇರದಂತೆ ತಾರಾಬಳಗ ಈ ಸಿನಿಮಾಗೆ ಮತ್ತಷ್ಟು ಮೆರುಗು ನೀಡಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories