ಆಮೇಲೆ ವಿಕ್ರಮ್ ಕಾಲಿಗೆ 23 ಸರ್ಜರಿ ಮಾಡಿದ್ರಂತೆ. ಆತನ ಕಾಲಿನ ಕಣಕಾಲುನಿಂದ ಮೊಣಕಾಲು ವರೆಗೂ ಡ್ಯಾಮೇಜ್ ಆಗಿ.. ಚರ್ಮ ಕೂಡಾ ಬದಲಾಗಿತ್ತಂತೆ. ಆದ್ರೆ ಹಾಗೆಯೇ ಸರ್ಜರಿ ಮಾಡಿಸ್ಕೊಂಡು... ಸಂಕಲ್ಪದಿಂದ ಮುಂದೆ ಹೋದ ವಿಕ್ರಮ್.
ಚೇತರಿಸಿಕೊಂಡು ಮತ್ತೆ ರಂಗಕ್ಕೆ ಇಳಿದ. ಇನ್ನು ಆತ ಇಂಡಸ್ಟ್ರಿಯಲ್ಲಿ ಮಾಡಿದ ಪಾತ್ರಗಳು.. ಪ್ರಯೋಗಗಳು, ಸಿನಿಮಾಗಳ ಬಗ್ಗೆ ಸ್ಪೆಷಲ್ ಆಗಿ ಹೇಳಬೇಕಾಗಿಲ್ಲ. ಅಪರಿಚಿತ, ಐ, ಶಿವಪುತ್ರ, ಮಲ್ಲಣ್ಣ, ಹೀಗೆ ಎಷ್ಟೋ ಸಿನಿಮಾಗಳಲ್ಲಿ ತನ್ನ ಪಾತ್ರಕ್ಕೋಸ್ಕರ ಎಷ್ಟೋ ಕಷ್ಟಪಟ್ಟ ನಟ ವಿಕ್ರಮ್.