Published : Mar 09, 2025, 08:38 AM ISTUpdated : Mar 09, 2025, 08:42 AM IST
ಈ ಸಿನಿಮಾ ಬಿಡುಗಡೆಯಾಗಿ 13 ವರ್ಷಗಳಾಗಿವೆ. ಸುಜೋಯ್ ಘೋಷ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್‌ನಿಂದ ತುಂಬಿರುವ ಈ ಸಿನಿಮಾ ಬಿಡುಗಡೆಯಾದಾಗ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿತ್ತು.
ಸುಜೋಯ್ ಘೋಷ್ ನಿರ್ದೇಶನದ 2012ರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತು. ಸಿನಿಮಾದ ಆರಂಭದಿಂದ ಕೊನೆಯವರೆಗೆ ರಹಸ್ಯಗಳೇ ತುಂಬಿದ್ದವು.
28
ಮಿಸ್ಟರಿ ಥ್ರಿಲ್ಲರ್ ಕಹಾನಿ ಸಿನಿಮಾವನ್ನು ಸುಜೋಯ್ ಘೋಷ್ ನಿರ್ದೇಶಿಸಿದ್ದಾರೆ. ಇದರಲ್ಲಿ ವಿದ್ಯಾ ಬಾಲನ್, ನವಾಜುದ್ದೀನ್ ಸಿದ್ದಿಕಿ, ಪರಂಬ್ರತ ಚಟರ್ಜಿ ಇದ್ದಾರೆ.
38
ಕಹಾನಿ ಸಿನಿಮಾ ಕಥೆ ಗರ್ಭಿಣಿ ಹೆಂಗಸಿನ ಸುತ್ತ ಸುತ್ತುತ್ತದೆ. ಆಕೆ ತನ್ನ ಕಾಣೆಯಾದ ಗಂಡನನ್ನು ಹುಡುಕಿಕೊಂಡು ಕೋಲ್ಕತ್ತಾಗೆ ಬರುತ್ತಾಳೆ.
48
ಕಹಾನಿ ಸಿನಿಮಾದ ಕ್ಲೈಮ್ಯಾಕ್ಸ್ ತುಂಬಾನೇ ಅದ್ಭುತವಾಗಿತ್ತು. ಕೊನೆಯಲ್ಲಿ ಟ್ವಿಸ್ಟ್‌ಗಳು ನೋಡುಗರ ತಲೆ ತಿರುಗಿಸುವಂತಿತ್ತು.
58
ವಿದ್ಯಾ ಬಾಲನ್ ಅಭಿನಯದ ಕಹಾನಿ ಸಿನಿಮಾ 8 ಕೋಟಿ ಬಜೆಟ್‌ನಲ್ಲಿ ತಯಾರಾಯಿತು. ಬಾಕ್ಸ್ ಆಫೀಸ್‌ನಲ್ಲಿ 104 ಕೋಟಿ ಗಳಿಸಿತು. ಇದರ ಸೀಕ್ವೆಲ್ ಸಹ ಬಿಡುಗಡೆಯಾಗಿದೆ.
68
ಕಹಾನಿ ಸಿನಿಮಾಕ್ಕೆ ವಿದ್ಯಾ ಬಾಲನ್ ಮೊದಲ ಆಯ್ಕೆಯಾಗಿರಲಿಲ್ಲ. ಮೊದಲು ಜ್ಯೋತಿಕಾ ಅವರಿಗೆ ಆಫರ್ ನೀಡಲಾಗಿತ್ತು. ಆದ್ರೆ ಕಾರಣಾಂತರಗಳಿಂದ ಜ್ಯೋತಿಕಾ ಚಿತ್ರದಿಂದ ಹಿಂದೆ ಸರಿದಿದ್ದರು.
78
ಜ್ಯೋತಿಕಾ ನಂತರ ವಿದ್ಯಾ ಬಾಲನ್‌ಗೆ ಆಫರ್ ನೀಡಲಾಯಿತು. ಆದರೆ ಅವರು ಒಪ್ಪಿಕೊಳ್ಳಲಿಲ್ಲ. ನಂತರ ಕಥೆ ಕೇಳಿ ಒಪ್ಪಿಕೊಂಡರು. ಕಹಾನಿ ಸಿನಿಮಾಕ್ಕೆ ಹಲವು ಪ್ರಶಸ್ತಿಗಳು ಬಂದಿವೆ. ಇದರಲ್ಲಿ 3 ರಾಷ್ಟ್ರೀಯ ಪ್ರಶಸ್ತಿಗಳು ಸೇರಿವೆ.
88
ಚಿತ್ರದ ಸರಳತೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಹಾನಿ ಸಿನಿಮಾ 29 ವಿಭಾಗದಲ್ಲಿ ಪ್ರಶಸ್ತಿಗೆ ನಾಮಿನೇಟ್ ಆಗಿ 27 ಅವಾರ್ಡ್ ತನ್ನದಾಗಿಸಿಕೊಂಡಿತ್ತು.