ಇತ್ತೀಚಿಗೆ ಪ್ರಶಸ್ತಿ ಕಾರ್ಯಕ್ರಮದಲ್ಲಿ ಚಿತ್ರಾಂಗದಾ ಸಿಂಗ್ ಅವರು ಕೈಯಿಂದ ಕಸೂತಿ ಮಾಡಿದ ಬಿಳಿ, ಆರ್ಗನ್ಜಾ ಸೀರೆಯಲ್ಲಿ ಸಖತ್ ಸ್ಟನ್ನಿಂಗ್ ಆಗಿ ಕಾಣಿಸಿಕೊಂಡಿರು.
ಚಿತ್ರಾಂಗದಾ ಸಿಂಗ್ ಅವರ ಅದ್ಭುತ ನೋಟವನ್ನು ಸ್ಟೈಲಿಸ್ಟ್ ಅಂಶಿಕಾ ವರ್ಮಾ ಅವರು ತನಿಶಾ ಭಾಟಿಯಾ ಅವರ ಸಹಾಯದಿಂದ ಡಿಸೈನ್ ಮಾಡಿದ್ದಾರೆ.
ಚಿತ್ರಾಂಗದಾ ಸಿಂಗ್ ತನ್ನ ಉಡುಪಿನಿಂದ ಎಲ್ಲರ ಗಮನ ಸೆಳೆದರು ಮತ್ತು ಅವರು ಸೀರೆಯನ್ನು ಕಡಿಮೆ ಆಭರಣಗಳೊಂದಿಗೆ ಉಟ್ಟಿದ್ದರು.
ಸೀರೆಯು ಮುತ್ತಿನ ಮತ್ತು ಗಮನಾರ್ಹವಾದ ಮ್ಯಾಕ್ರೋ ಪರ್ಲ್ ಟಸೆಲ್‌ಗಳಿಂದ ಅಲಂಕರಿಸಲ್ಪಟ್ಟಿದೆ ಮತ್ತು ನಟಿ ಧರಿಸಿದ ಬಿಳಿ ಆರ್ಗನ್ಜಾ ಸೀರೆಯ ಬೆಲೆ 64 ಸಾವಿರ ಎಂದು ಹೇಳಲಾಗಿದೆ.
ಸೀರೆಯ ಜೊತೆ ಮುತ್ತಿನ ಹಾರ ಕಸೂತಿಯೊಂದಿಗೆ ಮಣಿಗಳ ಹಾಲ್ಟರ್ ವಿನ್ಯಾಸ ಹೊಂದಿದೆ. ಜೊತೆಗೆ ಕೈಯಿಂದ ಕಸೂತಿ ಮಾಡಿದ ಕುಪ್ಪಸವನ್ನು ನಟಿ ಪೇರ್ ಮಾಡಿಕೊಂಡಿದ್ದರು.
ಚಿತ್ರಾಂಗದಾ ಸಿಂಗ್ ತನ್ನ ಪ್ರಶಸ್ತಿಯೊಂದಿಗೆ ಹೆಮ್ಮೆಯಿಂದ ಪೋಸ್ ಕೊಟ್ಟರು, ಅವರ ನಗು ಸಂತೋಷವನ್ನು ಸ್ಪಷ್ಟವಾಗಿ ತೋರಿಸುತ್ತದೆ.
Suvarna News