ಜಯಂತ್ ಸಿ ಪರಾಂಜಿ ಹೇಳುತ್ತ, ಪರುಚೂರಿ ಬ್ರದರ್ಸ್ ಕಥೆ ರೆಡಿ ಮಾಡಿದ್ರು. ಆದ್ರೆ ಅವರು ಹೇಳಿದ ವರ್ಷನ್ ನನಗೆ ಇಷ್ಟ ಆಗ್ಲಿಲ್ಲ. ಚರ್ಚೆ ಜೋರಾಯ್ತು. ಕೊನೆಗೆ ಈ ಕಥೆಯಲ್ಲಿ ಸಿನಿಮಾ ಮಾಡಲ್ಲ ಅಂತ ಮುನಿಸಿಕೊಂಡು ಹೋದೆ. ಚಿರಂಜೀವಿ ಮತ್ತೆ ಕರೆಸಿದ್ರು. ಹೀಗೆ ಮುನಿಸಿಕೊಂಡು ಹೋದ್ರೆ ಹೇಗೆ, ಏನು ಇಷ್ಟ ಆಗ್ಲಿಲ್ಲ ಅಂತ ಹೇಳಿ, ಬದಲಾವಣೆ ಮಾಡೋಣ ಅಂದ್ರು. ಕಥೆ ಹೇಳಿದ ರೀತಿ ತುಂಬಾ ಓಲ್ಡ್ ಸ್ಟೈಲ್ ಅಲ್ಲಿತ್ತು, ಟ್ರೆಂಡ್‌ಗೆ ತಕ್ಕಂತೆ ಇರ್ಲಿಲ್ಲ ಅಂತ ಹೇಳಿದೆ.