ಹೆಂಡತಿಯ ಸಾವಿಗೆ ಸೇಡು ತೀರಿಸಲು ಸಿಡಿದೆದ್ದ ಪತಿಯ ಸಿನಿಮಾಗಳಿವು… ನೋಡಿ ಎಂಜಾಯ್ ಮಾಡಿ!

Published : Aug 02, 2025, 06:12 PM IST

ಇತ್ತೀಚಿನ ದಿನಗಳಲ್ಲಿ ಟಿವಿ, ನ್ಯೂಸ್ ಪೇಪರ್ ಗಳಲ್ಲಿ ಪತ್ನಿಯಿಂದ ಗಂಡನ ಕೊಲೆ ಎನ್ನುವ ಸುದ್ದಿಯೇ ಹೆಚ್ಚು ಹೆಚ್ಚು ಕೇಳಿ ಬರುತ್ತಿದೆ. ಇವುಗಳಿಂದ ಬೇಜಾರಾಗಿದ್ರೆ ಹೆಂಡತಿ ಸಾವಿಗೆ ಸೇಡು ತೀರಿಸುವ ಗಂಡಂದಿರ ಕಥೆಯನ್ನು ಅಲ್ಲಾ, ಸಿನಿಮಾವನ್ನು ನೀವು ನೋಡಿ ಎಂಜಾಯ್ ಮಾಡಿ. 

PREV
16
ಹೆಂಡತಿಯ ಸಾವಿಗೆ ಸೇಡು

ದಿನ ಬೆಳಗ್ಗೆದ್ದರೆ ಸಾಕು, ಹನಿಮೂನಲ್ಲಿ ನವ ವಧುವಿನಿಂದಲೇ ಪತಿಯ ಕೊಲೆ, ಪ್ರೇಮಿ ಜೊತೆ ಓಡಿ ಹೋಗಲು ಗಂಡನ ಕೊಲೆ, ರೀಲ್ಸ್ ಪ್ರೇಮಿಗಾಗಿ ಪತಿಯ ಹತ್ಯೆ ಎನ್ನುವ ಸುದ್ದಿ ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಇದನ್ನೆಲ್ಲಾ ನೋಡಿ ನೋಡಿ ನಿಮಗೂ ಬೇಜಾರಾಗಿರಬಹುದು. ಇಂತಹ ಸುದ್ದಿಗಳ ಮದ್ಯೆ ಹೆಂಡತಿ ಅಥವಾ ಪ್ರೇಯಸಿಯ ಸಾವಿಗೆ ಸೇಡು ತೀರಿಸಲು ಸಿಡಿದೆದ್ದ ಗಂಡಂದಿರ, ಪ್ರೇಮಿಯ ಸಿನಿಮಾವನ್ನು (revenge film) ನೀವೂ ನೋಡಿ ಎಂಜಾಯ್ ಮಾಡಬಹುದು.

26
ಗಬ್ಬರ್ ಈಸ್ ಬ್ಯಾಕ್

ಭ್ರಷ್ಟಾಚಾರದಿಂದಾಗಿ ಕಟ್ಟಲಾದ ಕಟ್ಟಡವು ಕುಸಿದು ನಾಯಕ ಗರ್ಭಿಣಿ ಪತ್ನಿ ಸಾಯುತ್ತಾಳೆ. ಬಳಿಕ ರಿವೇಂಜ್ ತೆಗೆದುಕೊಳ್ಳಲು ಪತಿ ಯಾವ ರೀತಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾನೆ ಎನ್ನುವ ಕಥೆಯನ್ನು ಈ ಸಿನಿಮಾ  (Gabbar is back)ಹೊಂದಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಕರೀನಾ ಕಪೂರ್ ನಟಿಸಿದ್ದಾರೆ.

36
ಬದ್ಲಾಪುರ್

ಬ್ಯಾಂಕ್ ಕಳ್ಳತನದ ಸಮಯದಲ್ಲಿ ಹೆಂಡತಿ ಮತ್ತು ಮಗನನ್ನು ಕಳೆದುಕೊಳ್ಳುವ ವ್ಯಕ್ತಿ. ಆರಂಭದಲ್ಲಿ ಒಬ್ಬ ಜೆಂಟಲ್ ಮೆನ್ ಆಗಿದ್ದವನು, ನಂತರ ತನ್ನ ಪತ್ನಿ-ಮಗನ ಸಾವಿನ ಸೇಡು ತೀರಿಸಿಕೊಳ್ಳಲು ಯಾವ ರೀತಿ ಬದಲಾಗುತ್ತಾನೆ ಅನ್ನೋದೇ ಬದ್ಲಾಪುರ್ (Badlapur). ಈ ಚಿತ್ರದಲ್ಲಿ ವರುಣ್ ಧವನ್, ಯಾಮಿ ಗೌತಮಿ, ಹುಮಾ ಖುರೇಶಿ, ರಾಧಿಕಾ ಅಮ್ಟೆ, ನವಾಜುದ್ಧೀನ್ ಸಿದ್ದೀಕಿ ನಟಿಸಿದ್ದಾರೆ.

46
ಎಕ್ ವಿಲನ್

ಇದರಲ್ಲಿ ಒಬ್ಬ ಹುಡುಗಿಗಾಗಿ ವಿಲನ್ ಆಗಿದ್ದವನು ನಿಧಾನವಾಗಿ ಬದಲಾಗಿ ಒಳ್ಳೆಯವನಾಗುತ್ತಾನೆ. ನಂತರ ಇಬ್ಬರ ಮದುವೆ ಕೂಡ ಆಗುತ್ತೆ. ಆಕೆ ಗರ್ಭಿಣಿ ಕೂಡ ಆಗಿರುತ್ತಾಳೆ. ಈ ಸಂದರ್ಭದಲ್ಲೇ ಆಕೆಯನ್ನು ಸೈಕೋಪಾತ್ ಒಬ್ಬ ಕೊಲೆ ಮಾಡುತ್ತಾನೆ. ಗಂಡ ಮತ್ತೆ ವಿಲನ್ ಆಗಿ ಬದಲಾಗಿ ಪತ್ನಿ ಸಾವಿಗೆ ಸೇಡು ತೀರಿಸಿಕೊಳ್ಳುತ್ತಾನೆ. ಈ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ರಿತೇಶ್ ದೇಶ್ ಮುಖ್, ಶ್ರದ್ಧಾ ಕಪೂರ್ ನಟಿಸಿದ್ದಾರೆ.

56
ಗಜಿನಿ

ಈ ಸಿನಿಮಾದಲ್ಲಿ (Gajini) ಹುಡುಗಿ ತಾನು ಪ್ರೀತಿಸುತ್ತಿರುವ ಹುಡುಗ ಕೋಟ್ಯಾಧಿಪತಿ ಅನ್ನೋದೇ ಗೊತ್ತಿರುವುದಿಲ್ಲ. ಯಾವಾಗ ಆತ ಆಕೆಗೆ ತಾನೇ ನಿಜವಾದ ಸಂಜಯ್ ಸಿಂಘಾನಿಯ ಎಂದು ಹೇಳಲು ಬರುತ್ತಾನೆಯೋ, ಆವಾಗ ಆಕೆಯ ಕೊಲೆಯಾಗುತ್ತದೆ. ಸಂಜಯ್ ಮೇಲೆ ಹಲ್ಲೆ ನಡೆದು ಆತ ಅರ್ಧ ನೆನಪಿನ ಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ. ಆದರೂ ಬಳಿಕ ತನ್ನ ಗೆಳತಿಯ ಸಾವಿಗೆ ಸೇಡು ತೀರಿಸಲು ಆ ರೌಡಿಗಳನ್ನು ಹೊಡೆದುರುಳಿಸುತ್ತಾನೆ. ಅಮೀರ್ ಖಾನ್ ಮತ್ತು ಅಸಿನ್ ನಟಿಸಿದ ಚಿತ್ರ ಇದಾಗಿದೆ.

66
ಕಾಬಿಲ್

ಹೃತಿಕ್ ರೋಶನ್ ಮತ್ತು ಯಾಮಿ ಗೌತಮ್ ನಟಿಸಿರುವ ಸಿನಿಮಾ ಇದು. ಇಬ್ಬರು ಕೂಡ ಕುರುಡರಾಗಿದ್ದು, ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ರೌಡಿಗಳ ಗುಂಪೊಂದು ನಾಯಕಿ ಮೇಲೆ ಅತ್ಯಾಚಾರ ಮಾಡುತ್ತಾರೆ. ನಂತರ ಆಕೆ ಸುಸೈಡ್ ಮಾಡಿಕೊಳ್ಳುತ್ತಾಳೆ. ತನ್ನ ಪತ್ನಿಯ ಸಾವಿಗೆ ಕಾರಣರಾದವರ ಮೇಲೆ ನಾಯಕ ಸೇಡು ತೀರಿಸಿಕೊಳ್ಳುವುದೇ ಕಥೆ.

Read more Photos on
click me!

Recommended Stories