ಮಗಳು ಸುಶ್ಮಿತಾಳನ್ನೂ ಬಿಡದೇ ಗೇಲಿ ಮಾಡಿದ ಮೆಗಾಸ್ಟಾರ್ ಚಿರಂಜೀವಿ; ಇಲ್ಲಿದೆ ವೈರಲ್ ವಿಡಿಯೋ

ಮೆಗಾಸ್ಟಾರ್ ಚಿರಂಜೀವಿ ಮತ್ತು ಅನಿಲ್ ರವಿಪುಡಿ ಕಾಂಬಿನೇಷನ್‌ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮೆಗಾ 157 ಚಿತ್ರ ಪ್ರಾರಂಭವಾಗಿದೆ. ರಾಮಾನಾಯ್ಡು ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಪೂಜಾ ಕಾರ್ಯಕ್ರಮಗಳೊಂದಿಗೆ ಈ ಚಿತ್ರವನ್ನು ಲಾಂಚ್ ಮಾಡಿದ್ದಾರೆ. ಈ ವೇಳೆ ಮಗಳಿಗೆ ವಿಭಿನ್ನ ಸಲಹೆ ನೀಡಿದ ವಿಡಿಯೋ ವೈರಲ್ ಆಗಿದೆ.

ಮೆಗಾಸ್ಟಾರ್ ಚಿರಂಜೀವಿ ಮತ್ತು ಅನಿಲ್ ರವಿಪುಡಿ ಕಾಂಬಿನೇಷನ್‌ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮೆಗಾ 157 ಚಿತ್ರ ಪ್ರಾರಂಭವಾಗಿದೆ. ರಾಮಾನಾಯ್ಡು ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಪೂಜಾ ಕಾರ್ಯಕ್ರಮಗಳೊಂದಿಗೆ ಈ ಚಿತ್ರವನ್ನು ಲಾಂಚ್ ಮಾಡಿದ್ದಾರೆ. ವಿಕ್ಟರಿ ವೆಂಕಟೇಶ್, ರಾಘವೇಂದ್ರ ರಾವ್, ಅಲ್ಲು ಅರವಿಂದ್, ಸುರೇಶ್ ಬಾಬು ಅತಿಥಿಗಳಾಗಿ ಆಗಮಿಸಿದ್ದರು. ಓಟಿಟಿ ಹವಾ ಹೆಚ್ಚಾದ ಮೇಲೆ ಥಿಯೇಟರ್‌ಗಳಿಗೆ ಜನರನ್ನು ಕರೆತರುವುದು ಕೂಡ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಟಾಸ್ಕ್ ತರಹ ಆಗಿದೆ.

ಒಂದು ಒಳ್ಳೆಯ ಚಿತ್ರವನ್ನು ತೆರೆಗೆ ತಂದು ಕೈ ತೊಳೆದುಕೊಂಡರೆ ಸಾಲದು. ಪ್ರೇಕ್ಷಕರಲ್ಲಿ ಬಜ್ ಹೆಚ್ಚಿಸುವ ಹಾಗೆ, ಥಿಯೇಟರ್ಸ್‌ನಲ್ಲಿ ಈ ಚಿತ್ರವನ್ನು ನೋಡಬೇಕು ಎನ್ನುವ ಆಸಕ್ತಿಯನ್ನು ಹೆಚ್ಚಿಸುವ ಹಾಗೆ ಪ್ರಚಾರ ಕಾರ್ಯಕ್ರಮಗಳನ್ನು ಕೂಡ ಮಾಡಬೇಕು. ಸಿನಿಮಾಗಳನ್ನು ಚೆನ್ನಾಗಿ ಮಾಡುವ ನಿರ್ದೇಶಕರು ಇದ್ದಾರೆ. ಆದರೆ, ಪ್ರಮೋಷನ್ಸ್‌ನ್ನು ಕೂಡ ಮುಂದಾಳತ್ವ ವಹಿಸಿ ನಡೆಸುವ ಡೈರೆಕ್ಟರ್ ಕಡಿಮೆ. ಪ್ರಮೋಷನ್ಸ್‌ನ್ನು ಕೂಡಾ ಚೊಕ್ಕದಾಗಿ ಪ್ಲಾನ್ ಮಾಡುವ ನಿರ್ದೇಶಕರ ವಿಷಯಕ್ಕೆ ಬಂದರೆ ರಾಜಮೌಳಿ, ಅನಿಲ್ ರವಿಪುಡಿ ಹೆಸರು ಮುನ್ನೆಲೆಗೆ ಬರುತ್ತವೆ.


ಸಂಕ್ರಾಂತಿಗೆ ಬಿಡುಗಡೆಯಾದ ಸಂಕ್ರಾಂತಿಕಿ ವಸ್ತುನ್ನಾಂ ಚಿತ್ರದ ವಿಷಯದಲ್ಲಿ ಅನಿಲ್ ರಾವಿಪುಡಿ ಮಾಡಿದ ಪ್ರಮೋಷನ್ಸ್ ಅದ್ಭುತ ಎಂದು ಹೇಳಬಹುದು. ಒಂದು ಕಡೆ ಗೇಮ್ ಚೇಂಜರ್, ಡಾಕು ಮಹಾರಾಜ್ ತರಹದ ಮಾಸ್ ಹೀರೋಗಳ ಸಿನಿಮಾಗಳು ರಿಲೀಸ್ ಆಗುತ್ತಿದ್ದರೂ ಸಂಕ್ರಾಂತಿಕಿ ವಸ್ತುನ್ನಾಂ ಚಿತ್ರಕ್ಕೆ ಪರ್ಫೆಕ್ಟ್ ಆಗಿ ಪ್ರಮೋಷನ್ಸ್ ಪ್ಲಾನ್ ಮಾಡಿ ಜನರಲ್ಲಿ ಆಸಕ್ತಿ ಹೆಚ್ಚಿಸಿದರು. ಇದರ ಫಲಿತಾಂಶವಾಗಿ ಗೇಮ್ ಚೇಂಜರ್, ಡಾಕು ಮಹಾರಾಜ್ ಚಿತ್ರಗಳನ್ನು ಮೀರಿಸುವ ಹಾಗೆ ಸಂಕ್ರಾಂತಿಕಿ ವಸ್ತುನ್ನಾಂ ಚಿತ್ರ ಭಾರಿ ಕಲೆಕ್ಷನ್ ಮಾಡಿ ವಿನ್ನರ್ ಆಗಿ ನಿಂತಿದೆ.

ಇದನ್ನೂ ಓದಿ: ಸೂಪರ್ ಸ್ಟಾರ್ ಕೃಷ್ಣ ಪ್ಲಾಫ್ ಸಿನಿಮಾ ಬಗ್ಗೆ ಅಕ್ಕಿನೇನಿ ನಾಗಾರ್ಜುನ್ ವ್ಯಂಗ್ಯ!

ಈಗ ಚಿರಂಜೀವಿ ಮೆಗಾ 157 ಚಿತ್ರದ ವಿಷಯದಲ್ಲಿ ಲಾಂಚ್ ಇವೆಂಟ್‌ನಿಂದಲೇ ಅನಿಲ್ ರವಿಪುಡಿ ತಮ್ಮ ಗೇಮ್ ಶುರು ಮಾಡಿದ್ದಾರೆ. ಒಂದು ಫನ್ನಿ ವಿಡಿಯೋ ರಿಲೀಸ್ ಮಾಡಿ ಚಿರಂಜೀವಿಗೆ ತಮ್ಮ ಟೀಮ್ ಪೂರ್ತಿಯಾಗಿ ಚಿರಂಜೀವಿಗೆ ಪರಿಚಯಿಸಿದ ರೀತಿ ಸೂಪರ್ ಆಗಿದೆ. ಚಿರಂಜೀವಿ ಬಂದಾಗ  ಕೆಲವು ಸೂಪರ್ ಹಿಟ್ ಚಿತ್ರಗಳ ಕಟೌಟ್ಸ್ ಇರುತ್ತವೆ. ಒಂದೊಂದು ಕಟೌಟ್ ಹತ್ತಿರ ಒಂದೊಂದು ಡಿಪಾರ್ಟ್‌ಮೆಂಟ್ ಇರುತ್ತಾರೆ.  ಚಿರಂಜೀವಿ ಎಂಟ್ರಿ ಕೊಟ್ಟ ತಕ್ಷಣ ಡೈರೆಕ್ಷನ್ ಡಿಪಾರ್ಟ್‌ಮೆಂಟ್‌ನಲ್ಲಿ ಇರುವವರೆಲ್ಲಾ ಅಣ್ಣಯ್ಯ ನಿಮ್ಮನ್ನು ಒಳ್ಳೆ ಕಾಮಿಡಿ ಟೈಮಿಂಗ್‌ನಲ್ಲಿ ನೋಡಬೇಕು ಎನ್ನುತ್ತಾರೆ. ಖಂಡಿತಾ ನೋಡ್ತೀರಿ ಅಂತ ಚಿರು ಭರವಸೆ ಕೊಡ್ತಾರೆ.

ಹೀಗೆ ಮುಂದೆ ಹೋದಾಗ ಸಂಗೀತ ನಿರ್ದೇಶಕ ಭೀಮ್ಸ್, ಎಡಿಟರ್, ಸಿನಿಮಾಟೋಗ್ರಾಫರ್ ಹೀಗೆ ಒಬ್ಬೊಬ್ಬರೂ ತಮ್ಮನ್ನು ತಾವು ಚಿರಂಜೀವಿಗೆ ಪರಿಚಯ ಮಾಡಿಕೊಳ್ಳುತ್ತಾರೆ. ಶಂಕರ್ ದಾದಾ ಎಮ್‌ಬಿಬಿಎಸ್ ಕಟೌಟ್ ಹತ್ತಿರ ನಿರ್ಮಾಪಕರು ಸಾಹು ಗಾರಪಾಟಿ, ಸುಸ್ಮಿತಾ ಕೊನಿಡೇಲಾ ಇಬ್ಬರೂ ಇರ್ತಾರೆ. ಇನ್ ಫ್ರಂಟ್ ದೇರ್ ಈಸ್ ಬ್ಲಾಕ್ ಬಸ್ಟರ್ ಫೆಸ್ಟಿವಲ್ ಅಂತ ಸುಸ್ಮಿತ ಡೈಲಾಗ್ ಹೇಳ್ತಾರೆ.

ನನ್ನ ಹೆಸರು ಸುಸ್ಮಿತಾ ಕೊನಿಡೇಲಾ.. ಈ ಚಿತ್ರಕ್ಕೆ ನಿರ್ಮಾಪಕಿ ಅಂತ ಚಿರಂಜೀವಿಗೆ ಪರಿಚಯ ಮಾಡಿಕೊಳ್ತಾರೆ. ಮನೆ ಹೆಸರು ಏನಂದೆ ಅಂತ ಚಿರಂಜೀವಿ ವಾಪಸ್ ಕೇಳಿದಾಗ ಕೊನಿಡೇಲಾ ಅಂತ ಅವರು ಉತ್ತರ ಕೊಡ್ತಾರೆ. ಚಿರು ತಕ್ಷಣ ಆ ಹೆಸರನ್ನು ಉಳಿಸಬೇಕು ಅಂತ ಆಲ್ ದಿ ಬೆಸ್ಟ್ ಹೇಳಿದರು.

ಕೊನೆಯಲ್ಲಿ ಗ್ಯಾಂಗ್ ಲೀಡರ್ ಕಟೌಟ್ ಹತ್ತಿರ ಡೈರೆಕ್ಟರ್ ಅನಿಲ್ ರಾವಿಪುಡಿ ಇರ್ತಾರೆ. ಈ ಗ್ಯಾಂಗ್‌ಗೆ  ಲೀಡರ್ ನೀವೇ ಅಲ್ವಾ ಅಂತ ಚಿರಂಜೀವಿ ತಮಾಷೆಯಾಗಿ ಹೇಳಿದರು. ಬರುವ ಸಂಕ್ರಾಂತಿಗೆ ಏನು ಪ್ಲಾನ್ ಮಾಡ್ತಿದ್ದೀರಿ ಅಂತ ಚಿರಂಜೀವಿ ಕೇಳಿದಾಗ.. ನಾವು 'ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯೋಣ ಸರ್' ಅಂತ ಅನಿಲ್ ಹೇಳಿದರು. ಈ ಫನ್ನಿ ವಿಡಿಯೋ ವೈರಲ್ ಆಗ್ತಿದೆ.

ವಿಡಿಯೋ ಇಲ್ಲಿ ನೋಡಿ

Latest Videos

click me!