Published : Jun 23, 2025, 11:05 AM ISTUpdated : Jun 23, 2025, 11:07 AM IST
ಹಾಲಿವುಡ್ ನಿರ್ಮಾಪಕನ ಸಾಥ್‌ನಿಂದ ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ಕ್ಕೆ ಹೆಚ್ಚಿನ ಬಲ ಬಂದಿದ್ದು ಈ ಸಿನಿಮಾ ಕಲ್ಪನೆಯನ್ನೂ ಮೀರಿ ಅದ್ದೂರಿತನದಿಂದ ತೆರೆಗೆ ಬರುವ ಸಾಧ್ಯತೆ ಇದೆ.
ಆಸ್ಕರ್ ವಿಜೇತ ಹಾಲಿವುಡ್ ನಿರ್ಮಾಪಕ ಚಾರ್ಲ್ಸ್ ರೋವನ್ ಯಶ್ ನಿರ್ಮಾಣ ಹಾಗೂ ನಟನೆಯಲ್ಲಿ ಮೂಡಿ ಬರುತ್ತಿರುವ ‘ರಾಮಾಯಣ’ ಸಿನಿಮಾ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.
25
ತನ್ನ ಅಟ್ಲಾಸ್ ಎಂಟರ್‌ಟೇನ್‌ಮೆಂಟ್ ಬ್ಯಾನರ್‌ನಡಿ ಈ ಹಿಂದೆ ‘ಬ್ಯಾಟ್ಸ್‌ಮ್ಯಾನ್ ವರ್ಸಸ್ ಸೂಪರ್‌ಮ್ಯಾನ್ : ಡೌನ್ ಆಫ್ ಜಸ್ಟೀಸ್’, ‘ಸುಸೈಡ್ ಸ್ಕ್ವಾಡ್’, ‘ದಿ ಡಾರ್ಕ್ ನೈಟ್ ಟ್ರಯಾಲಜಿ’ಯಂಥಾ ಸಿನಿಮಾಗಳನ್ನು ರೋವನ್ ನಿರ್ಮಿಸಿದ್ದರು.
35
ಇದೀಗ ಈ ದೈತ್ಯ ಹಾಲಿವುಡ್ ನಿರ್ಮಾಪಕನ ಸಾಥ್‌ನಿಂದ ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ಕ್ಕೆ ಹೆಚ್ಚಿನ ಬಲ ಬಂದಿದ್ದು ಈ ಸಿನಿಮಾ ಕಲ್ಪನೆಯನ್ನೂ ಮೀರಿ ಅದ್ದೂರಿತನದಿಂದ ತೆರೆಗೆ ಬರುವ ಸಾಧ್ಯತೆ ಇದೆ.
ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ ರಾಮ, ಸೀತೆಯಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಯಶ್ ರಾವಣನಾಗಿ ಅಬ್ಬರಿಸಲಿದ್ದಾರೆ. ನಮಿತ್ ಮಲ್ಹೋತ್ರಾ, ಯಶ್ ಜೊತೆಗೆ ರೋವನ್ ನಿರ್ಮಾಣ ಮಾಡುತ್ತಿದ್ದಾರೆ.
55
ಹಲವು ಹಾಲಿವುಡ್ ತಂತ್ರಜ್ಞರು, ಕಲಾವಿದರು ಈ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದು ಎರಡು ಭಾಗಗಳಲ್ಲಿ ಸಿನಿಮಾ ಮೂಡಿಬರಲಿದೆ. 2026ರ ದೀಪಾವಳಿ ಹಬ್ಬಕ್ಕೆ ಮೊದಲ ಭಾಗ ತೆರೆಗೆ ಅಪ್ಪಳಿಸಲಿದೆ.