ಟಾಕ್ಸಿಕ್ ಸಿನಿಮಾದಲ್ಲಿ ಹಸಿಬಿಸಿ ದೃಶ್ಯ ಗೀತು ನಿರ್ದೇಶಿಸಿದ್ದಾರೆ; ನಂಬಲಾಗುತ್ತಿಲ್ಲ ಎಂದ RGV

Published : Jan 08, 2026, 04:18 PM IST

ಟಾಕ್ಸಿಕ್ ಸಿನಿಮಾದ ಆ ಸೀನ್ ಗೀತು ನಿರ್ದೇಶಿಸಿದ್ದಾರೆ, ನಂಬಲು ಸಾಧ್ಯವಾಗುತ್ತಿಲ್ಲ ಎಂದು ಆರ್‌ವಿಜಿ ಹೇಳಿದ್ದಾರೆ. ಅಷ್ಟಕ್ಕೂ ರಾಮ್ ಗೋಪಾಲ್ ವರ್ಮಾ ಹೇಳಿದ ಸೀನ್ ಯಾವುದು? ಯಾವು ಪರುಷರ ನಿರ್ದೇಶಕನಿಗೂ ಆ ಸೀನ್ ತೆಗೆಯಲು ಆಗುತ್ತಿರಲಿಲ್ಲ ಅಂದಿದ್ದೇಕೆ?

PREV
16
ಒಂದು ಸೀನ್‌ಗೆ ಅಚ್ಚರಿಯಾದ ಆರ್‌ವಿಜಿ

ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಯಶ್ 40ನೇ ಹುಟ್ಟು ಹಬ್ಬಕ್ಕೆ ಟಾಕ್ಸಿಕ್ ಸಿನಿಮಾ ಟೀಸರ್ ಭಾರಿ ಸಂಚಲನ ಸೃಷ್ಟಿಸಿದೆ. ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಟೀಸರ್ ಬಿಡುಗಡೆ ಮಾಡಿದೆ ಅನ್ನೋ ಅಭಿಪ್ರಾಯಗಳು ಕೇಳಿಬರುತ್ತಿದೆ. ಓಪನಿಂಗ್ ಸೀನ್ ಹಲವರ ಕುತೂಹಲ ಡಬಲ್ ಮಾಡಿದ್ದರೆ, ಖ್ಯಾತ ನಿರ್ದೇಶಕ ಆರ್‌ವಿಜಿ ಅಚ್ಚರಿಗೊಂಡಿದ್ದಾರೆ.

26
ಟಾಕ್ಸಿಕ್ ಸಿನಿಮಾ ಸೀನ್

ಟಾಕ್ಸಿಕ್ ಸಿನಿಮಾದ ಟ್ರೇಲರ್‌ನ ರಾಕಿಂಗ್ ಸ್ಟಾರ್ ಯಶ್ ಎಂಟ್ರಿ ಯಾವುದೇ ಸಿನಿಮಾದಲ್ಲಿ ಇರದ ಸೀನ್ ನೀಡಲಾಗಿದೆ. ಹಾಲಿವುಡ್ ಸಿನಿಮಾದಲ್ಲಿರುವಂತ ಇಂಟಿಮೇಟ್ ದೃಶ್ಯಗಳನ್ನು ಕೊಡಲಾಗಿದೆ. ಕಾರಿನೊಳಗಿನ ಈ ದೃಶ್ಯ ಸಿನಿಮಾ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಇದೇ ವೇಳೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಸೀನ್ ಮಹಿಳಾ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿದ್ದಾರೆ ಅನ್ನೋದು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

36
ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು?

ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಟ್ರೇಲರ್ ನೋಡಿದ ಮೇಲೆ ನನಗೆ ಗೀತು ಮೋಹನ್ ದಾಸ್ ಮಹಿಳಾ ಸಬೀಲಕರಣದ ಧ್ಯೋತಕ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಯಾವ ಪುರುಷ ನಿರ್ದೇಶಕ ಗೀತು ಮೋಹನ್‌ದಾಸ್ ಸರಿಸಾಟಿಯಲ್ಲ. ಟ್ರೇಲರ್ ನೋಡುತ್ತಿದ್ದರೆ, ಈ ದೃಶ್ಯಗಳನ್ನು ಗೀತು ಮೋಹನದಾಸ್ ನಿರ್ದೇಶನ ಮಾಡಿದ್ದಾರೆ ಅನ್ನೋದು ನಂಬಲು ಅಸಾಧ್ಯವಾಗುತ್ತಿದೆ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

46
ಗೀತು ಮೋಹನ್‌ದಾಸ್ ನಿರ್ದೇಶನಕ್ಕೆ ಭಾರಿ ಮೆಚ್ಚುಗೆ

ಟಾಕ್ಸಿಕ್ ಸಿನಿಮಾದ ಟ್ರೇಲರ್ ಈ ಮಟ್ಟಕ್ಕೆ ನೀಡಲಾಗಿದೆ. ಹಲವು ಸೀನ್‌ಗಳು ಭಾರತದ ಸಿನಿಮಾ ಲೋಕಕ್ಕೆ ನಿಲುಕದಂತೆ ಚಿತ್ರಕರಿಸಿ ನೀಡಲಾಗಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಗೀತು ಮೋಹನದಾಸ್ ನಿರ್ದೇಶನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವು ಸಿನಿಮಾಗೆ ಕಾಯುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

56
ದುರಂಧರ್‌ಗೆ ಶುರುವಾಯ್ತು ನಡುಕ

ಟಾಕ್ಸಿಕ್ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆ ಕುರಿತು ವರ್ಷದ ಮೊದಲೇ ಅನೌನ್ಸ್ ಮಾಡಲಾಗಿದೆ. ಇತ್ತೀಚೆಗೆ ಮಾರ್ಚ್ 19ಕ್ಕೂ ರಣಬೀರ್ ಸಿಂಗ್ ಅಭಿನಯದ ದುರಂಧರ್ 2 ಸಿನಿಮಾ ಬಿಡುಗಡೆ ಘೋಷಣೆ ಮಾಡಲಾಗಿದೆ. ಇದೀಗ ಟಾಕ್ಸಿಕ್ ಸಿನಿಮಾ ಟ್ರೇಲರ್ ನೋಡಿದ ಅಭಿಮಾನಿಗಳು, ಧುರಂದರ್ ಸಿನಿಮಾಗೆ ತೀವ್ರ ಹೊಡೆತ ಬೀಳಲಿದೆ ಎಂದಿದ್ದಾರೆ.

ದುರಂಧರ್‌ಗೆ ಶುರುವಾಯ್ತು ನಡುಕ

66
ಧೂಳೆಬ್ಬಿಸಿದ ಟ್ರೇಲರ್

ಟಾಕ್ಸಿಕ್ ಸಿನಿಮಾ ಟ್ರೇಲರ್ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. 2.51 ನಿಮಿಷಗಳ ಈ ಟ್ರೇಲರ್‌ನಲ್ಲಿ ಟಾಕ್ಸಿಕ್ ವಾತಾವರಣ ತೋರಿಸಲಾಗಿದೆ. ನಾಯಕ ಯಶ್ ಎಂಟ್ರಿ, ಡೈಲಾಗ್, ಮಾಸ್ ಪ್ರೇಕ್ಷಕರ ಹಿಡಿದಿಟ್ಟುಕೊಂಡಿದೆ. ಯಶ್ ಸಿನಿಮಾಗಾಗಿ ವರ್ಷಗಳಿಂದ ಕಾಯುತ್ತಿರುವುದು ಸಾರ್ಥಕ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಧೂಳೆಬ್ಬಿಸಿದ ಟ್ರೇಲರ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories