Latest Videos

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ 200 ವರ್ಷ ಹಳೆಯ ಭಾರತೀಯ ಸಂಸ್ಕೃತಿ ಸೀರೆಯಲ್ಲಿ ಮಿಂಚಿದ ನಟಿ!

First Published May 24, 2024, 7:50 PM IST

ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅಸ್ಸಾಂ ನಟಿ ಫ್ಯಾಶನ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಬರೋಬ್ಬರಿ 200 ವರ್ಷ ಹಳೇಯ ಮೊತಿಫ್ ಕಲಾಕೃತಿಯ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಅಸ್ಸಾಂ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ನಟಿಗೆ ಎಲ್ಲೆಡೆಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
 

ಕೇನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಹ್ವಾನ ಪಡೆದ ಭಾರತದ ಕೆಲವೇ ಕೆಲ ನಟ ನಟಿಯರು ಈಗಾಲೇ ಹೆಜ್ಜೆ ಹಾಕಿ ಸಂಚಲನ ಸೃಷ್ಟಿಸಿದ್ದಾರೆ. ಐಶ್ವರ್ಯ ರೈ ಬಚ್ಚನ್ ಸೇರಿದಂತೆ ಹಲವರು ಸುದ್ದಿಯಾಗಿದ್ದಾರೆ.
 

ವಿವಿಧ ದೇಶಗಳ ಸೆಲೆಬ್ರೆಟಿಗಳು ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಪೈಕಿ ಅಸ್ಸಾಂನ ಜನಪ್ರಿಯ ನಟಿ ಆ್ಯಮಿ ಬರುಹ ಉಡುಪಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಆ್ಯಮಿ ಬರುಹ ಅಸ್ಸಾಂ ಸಂಸ್ಕೃತಿ ಪ್ರತಿಬಿಂಬಿಸು ಸೀರೆಯಲ್ಲಿ ಕಂಗೊಳಿಸಿದ್ದಾರೆ. ಇದೇ ಸೀರೆಯಲ್ಲಿ ಅಂತಾರಾಷ್ಟ್ರೀಯ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.
 

ಅಸ್ಸಾಂನ 200 ವರ್ಷ ಹಳೆಯ ಸಂಸ್ಕೃತಿ ಪ್ರತಿಬಿಂಬಿಸುವ ಸೀರೆ ಹಾಗೂ ಪೋಷಾಕಿನಲ್ಲಿ ಆ್ಯಮಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೈಗಳಿಗೆ ಅಸ್ಸಾಂನ ಸಾಂಪ್ರದಾಯಿಕ ಗಮಖರು, ಗಮೋಸಾ ಸೀರೆಯಲ್ಲಿ ಎಲ್ಲರ ಗಮನಸೆಳೆದಿದ್ದಾರೆ.
 

ತಲೆಗೆ ರಿಹಾ ಹಾಗೂ ಕೌಪು ಫೂಲ್ ಮುಡಿದು ಅಪ್ಪಟ್ಟ ಅಸ್ಸಾಂನ ಮೂಲ ಸಂಸ್ಕೃತಿಯಲ್ಲಿ ಆ್ಯಮಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಕುರಿತು ನಟಿ ಸಾಮಾಜಿಕ ಮಾಧ್ಯಮದಲ್ಲಿ ಸಂತಸ ಹಂಚಿಕೊಂಡಿದ್ದಾರೆ.
 

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಪ್ಪಟ ಭಾರತೀಯ ಸಂಸ್ಕೃತಿಯ ಹಿರಿಮೆ ಪ್ರದರ್ಶಿಸಿದ ಆ್ಯಮಿಗೆ ಧನ್ಯವಾದ. ಅಸ್ಸಾಂ ಸಂಸ್ಕೃತಿ  ಇದೀಗ ವಿಶ್ವದಲ್ಲೇ ಬೆಳಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
 

ಭಾರತವನ್ನು ಪ್ರತಿನಿಧಿಸುವ ನಟ ನಟಿಯರು ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಅಸ್ಸಾಂ ನಟಿ ಆ್ಯಮಿ ಫಾಲೋ ಮಾಡುವುದು ಒಳಿತು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
 

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಪ್ಪು ಹಾಗೂ ಕೆಂಪು ಬಣ್ಣಧ ಸೀರೆಯಲ್ಲೂ ಆ್ಯಮಿ ಮಿಂಚಿದ್ದಾರೆ. ಈಗಾಗಲೇ ಅಸ್ಸಾಂ ಸಂಸ್ಕೃತಿಯನ್ನು ಪದೇ ಪದೇ ಜನಪ್ರಿಯಗೊಳಿಸುತ್ತಿರುವ ನಟಿಗೆ ಎಲ್ಲರು ಶುಭಹಾರೈಸಿದ್ದಾರೆ.

click me!