ವಿಡಿಯೋ ಕಾರಣ ನೀಡಿ ಮನೆಯಿಂದ ಹೊರಹಾಕಿದ್ರು,ನೋವು ತೋಡಿಕೊಂಡು ಕಣ್ಣೀರಿಟ್ಟ ನಟಿ ಜ್ಯೋತಿ!

Published : May 24, 2024, 03:25 PM IST

ನಟಿ ಜ್ಯೋತಿ ಕಹಿ ಘಟನೆ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ರೋಮ್ಯಾಂಟಿಕ್ ವಿಡಿಯೋ ಸೀನ್‌ಗಳಿಂದ ನನ್ನನ್ನು ಮನೆಯಿಂದಲೂ ಹೊರಹಾಕಿದ್ದರು, ಯಾರೂ ಕೂಡ ಬಾಡಿಗೆ ಮನೆಯನ್ನೂ ನೀಡಲಿಲ್ಲ ಎಂದಿದ್ದಾರೆ.   

PREV
18
ವಿಡಿಯೋ ಕಾರಣ ನೀಡಿ ಮನೆಯಿಂದ ಹೊರಹಾಕಿದ್ರು,ನೋವು ತೋಡಿಕೊಂಡು ಕಣ್ಣೀರಿಟ್ಟ ನಟಿ ಜ್ಯೋತಿ!

ರೋಮ್ಯಾಂಟಿಕ್ ಕಾಮಿಡಿ ಮೂಲಕ ಜನಮನಗೆದ್ದಿರುವ ತೆಲುಗು ನಟಿ ಜ್ಯೋತಿ ತಮ್ಮ ಜೀವನದ ಕಹಿ ಘಟನೆಗಳನ್ನು ಬಿಚ್ಚಿಟ್ಟಿದ್ದರು. ಅದರಲ್ಲೂ ಪ್ರಮುಖವಾಗಿ ಕೆಲ ವಿಡಿಯೋಗಳು, ದೃಶ್ಯಗಳು ಜೀವನಕ್ಕೆ ನೀಡಿದ ಆಘಾತದ ಕುರಿತು ವಿವರಿಸಿದ್ದಾರೆ.
 

28

ಕಾಮಿಡಿ ಸೀನ್, ರೋಮ್ಯಾಂಟಿಕ್ ಸೇರಿದಂತೆ ಕೆಲ ಬೋಲ್ಡ್ ಪಾತ್ರಗಳಲ್ಲಿ ನಟಿ ಜ್ಯೋತಿ ಕಾಣಿಸಿಕೊಂಡಿದ್ದ ನಟಿಯನ್ನು ಸಮಾಜ ನೋಡಿದ ದೃಷ್ಟಿ ಕೋನದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮನೆಯಿಂದ ಹೊರಬಿದ್ದ ಘಟನೆಯನ್ನು ವಿವರಿಸಿದ್ದಾರೆ.
 

38

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಜ್ಯೋತಿ ಈ ಕುರಿತು ಹೇಳಿದ್ದಾರೆ. ಚಿತ್ರದ ಬೇಡಿಕೆಯಂತೆ ಕೆಲ ದೃಶ್ಯಗಳಲ್ಲಿ ನಟಿಸಿದ್ದೇನೆ. ಆದರೆ ಈ ದೃಶ್ಯಗಳಿಂದ ನನ್ನನ್ನು ಮನೆಯಿಂದಲೇ ಹೊರಹಾಕಿದ್ದರು ಎಂದಿದ್ದಾರೆ.
 

48

ಬೋಲ್ಡ್ ದೃಶ್ಯಗಳು, ಕಾಮಿಡಿ ರೋಮ್ಯಾಂಟಿಕ್ ದೃಶ್ಯಗಳಿಂದ ಬಾಡಿಗೆ ಮಾಲೀಕರು ನನಗೆ ಮನೆಯಲ್ಲಿ ಇರಲು ಅವಕಾಶ ನೀಡಲಿಲ್ಲ. ನನ್ನ 2 ವರ್ಷದ ಮಗನನ್ನು ಎತ್ತಿಕೊಂಡು ರಸ್ತೆಗೆ ಬರಬೇಕಾಯಿತು ಎಂದು ನೋವು ತೋಡಿಕೊಂಡಿದ್ದಾರೆ.
 

58

ಯಾರೂ ನನಗೆ ಮನೆ ಬಾಡಿಗೆ ನೀಡಲಿಲ್ಲ. ಅಂದು ಸ್ವಂತ ಮನೆ ಖರೀದಿಸಬೇಕು ಎಂದು ನಿರ್ಧರಿಸಿದೆ. ಆದರೆ ಅದು ಸುಲಭದ ಪಯಣವಾಗಿರಲಿಲ್ಲ ಎಂದು ನಟಿ ಜ್ಯೋತಿ ಹೇಳಿದ್ದಾರೆ.

68

ನನ್ನ ಚಿತ್ರದ ಕೆಲ ದೃಶ್ಯಗಳಿಂದ ನಮ್ಮನ್ನು ಸಿನಿಮಾ ಇಂಡಸ್ಟ್ರಿಯಲ್ಲೂ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ನಮಗೆ ಗೌರವ ನೀಡುತ್ತಿರಲಿಲ್ಲ. ಇವೆಲ್ಲಾ ತುಂಬಾ ನೋವು ತರುತ್ತಿತ್ತು ಎಂದಿದ್ದಾರೆ.
 

78

ಅಮೆರಿಕದಲ್ಲಿ ಒಂದು ಕಾರ್ಯಕ್ರಮಕ್ಕೆ ತೆರಳಬೇಕಿತ್ತು. ಆದರೆ ಇಂಡಸ್ಟ್ರಿಯ ಖ್ಯಾತರೊಬ್ಬರು ಈ ಹುಡುಗಿ ನನ್ನ ತಂಡದಲ್ಲಿರಬಾರದು ಎಂದಿದ್ದರು. ನನ್ನ ಮುಂದೆ ಈ ರೀತಿ ಹೇಳಿ ನನಗೆ ಅವಮಾನಿಸಿದ್ದರು ಎಂದಿದ್ದಾರೆ.
 

88

ಗೆಳೆಯರು ಕೂಡ ನನ್ನ ಜೊತೆಗೆ ಮಾತನಾಡುವುದನ್ನೇ ನಿಲ್ಲಿಸಿದರು. ಡಿವೋರ್ಸ್‌ನಿಂದ ಜೀವನ ನಿರ್ವಹಣೆ ಕೂಡ ಕಷ್ಟವಾಗಿತ್ತು. ಆದರೆ ಇದರಿಂದ ಹೊರಬಂದಿರುವುದೇ ನನ್ನ ಗೆಲುವು ಎಂದು ನಟಿ ಜ್ಯೋತಿ ಹೇಳಿದ್ದಾರೆ.

 

Read more Photos on
click me!

Recommended Stories