Latest Videos

ಕಾಮಸೂತ್ರ to ಬಿಎ ಪಾಸ್; ಪೋಷಕರು ಹಾಗೂ ಮಕ್ಕಳೊಂದಿಗೆ ನೀವು ನೋಡಲೇ ಬಾರದ 11 ಸಿನಿಮಾಗಳು

First Published May 24, 2024, 7:29 PM IST

ಭಾರತೀಯ ಸಿನಿಮಾಗಳ ವೀಕ್ಷಣೆ ಕುಟುಂಬದೊಂದಿಗೆ ಕಾಲ ಕಳೆಯಲು ಉತ್ತಮ ಕಾರಣವೆಂದೂ ಹೇಳಬಹುದು. ಆದರೆ, ಕೆಲವೊಂದು ಸಿನಿಮಾಗಳನ್ನು ಮಕ್ಕಳು ಹಾಗೂ ಪೋಷಕರು ಒಟ್ಟಿಗೆ ಕುಳಿತುಕೊಂಡು ನೋಡಲಾಗದಂತಹ ಸಿನಿಮಾಗಳಿವೆ. ಅದರಲ್ಲಿ ಅಶ್ಲೀಲ ದೃಶ್ಯಗಳನ್ನು ಒಳಗೊಂಡಿರುವ ಈ 11 ಸಿನಿಮಾಗಳನ್ನು ಮಾತ್ರ ಮಕ್ಕಳು ಅಥವಾ ಪೋಷಕರೊಂದಿಗೆ ಕುಳಿತು ನೋಡಬೇಡಿ..

ಕಾಮ ಸೂತ್ರ ( Kama Sutra ) : ಭಾರತೀಯ ಐತಿಹಾಸಿಕ ಕಾಮಪ್ರಚೋದಕ ಪ್ರಣಯ ಚಲನಚಿತ್ರವು 1996 ರಲ್ಲಿ ಬಿಡುಗಡೆಯಾಯಿತು. ಈ ಚಲನಚಿತ್ರವು ಅದರ ಬಿಡುಗಡೆಯ ಸಮಯದಲ್ಲಿ ವಿವಾದವನ್ನು ಸೃಷ್ಟಿಸಿತು. ಜೊತೆಗೆ ಅದರ ಕಾಮಪ್ರಚೋದಕ ವಿಷಯ ಮತ್ತು ಲೈಂಗಿಕ ವಿಷಯದ ಕಾರಣದಿಂದಾಗಿ ಭಾರತದಲ್ಲಿ ನಿಷೇಧಿಸಲಾಯಿತು.

ಜಿಸ್ಮ್ ಸರಣಿ ( Jism series ) : ಇದು 2003ರಲ್ಲಿ ಬಿಡುಗಡೆಯಾದ ಕಾಮ ಪ್ರಚೋದಕ ಥ್ರಿಲ್ಲರ್ ಚಲನಚಿತ್ರವಾಗಿದೆ. ಇದು ನೀಲಿ ಚಿತ್ರ ತಾರೆಯಾಗಿದ್ದ ಸನ್ನಿ ಲಿಯೋನ್ ಅವರು ಬಾಲಿವುಡ್‌ಗೆ ಪ್ರವೇಶ ಪಡೆಯಲೂ ವೇದಿಕೆ ಕಲ್ಪಿಸಿತುಯ. 

ಉತ್ಸವ್ ( Utsav ): ನಟಿ ರೇಖಾ (Actress Rekha ) ಅವರ 1984ರ ಕಾಮಪ್ರಚೋದಕ ಚಲನಚಿತ್ರವು ಅಂದಿನ ವರ್ಷಗಳಲ್ಲಿ ಹೆಣ್ಣು ಭ್ರೂಣಹತ್ಯೆಯಿಂದಾಗಿ ಭವಿಷ್ಯದಲ್ಲಿ ಭಾರತೀಯ ಜನಸಂಖ್ಯೆಯ ಮೇಲಾಗುವ ಪರಿಣಾಮವನ್ನು ಬಿಂಬಿಸಲಾಗಿದೆ.

ಮಾತೃಭೂಮಿ ( Matrubhoomi ) : ಈ ಚಲನಚಿತ್ರವು ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ ಮತ್ತು ಲಿಂಗ ಅಸಮತೋಲನವನ್ನು ಆಧರಿಸಿದೆ. ಇದು 2003ರಲ್ಲಿ ಬಿಡುಗಡೆಯಾಯಿತು.

ಬಿಎ ಪಾಸ್ ( BA Pass ):  ಈ ಚಲನಚಿತ್ರವು ಮೋಹನ್ ಸಿಕ್ಕಾ ಅವರ 2009 ರ 'ದಿ ರೈಲ್ವೇ ಆಂಟಿ' ಎಂಬ ಸಣ್ಣ ಕಥೆಯನ್ನು ಆಧರಿಸಿದೆ. ಈ ಕತೆಯಾಧಾರಿತ ಚಿತ್ರವು 2013 ರಲ್ಲಿ ಬಿಡುಗಡೆಯಾಯಿತು.
 

ಡರ್ಟಿ ಪಿಕ್ಚರ್ ( The Dirty Picture )  : ಈ ಚಲನಚಿತ್ರವು ದಕ್ಷಿಣ ಭಾರತದ ನೃತ್ಯತಾರೆ (ಐಟಂ ಸಾಂಗ್ ಡ್ಯಾನ್ಸರ್) ಸಿಲ್ಕ್ ಸ್ಮಿತಾ ಅವರ ಜೀವನ ಚರಿತ್ರೆಯ ಸಿನಿಮಾವಾಗಿದೆ. ಇದರಲ್ಲಿ ವಿದ್ಯಾಬಾಲನ್ ನಟಿಸಿದ್ದಾರೆ. ಕಾಮಪ್ರಚೋದಕ ಪಾತ್ರಗಳಿಗೆ ಹಸರಾಗಿದ್ದ ಸಿಲ್ಕ್‌ ಸ್ಮಿತಾ ಜೀವನದಲ್ಲಿ ಎದುರಿಸಿದ್ದ ಎಲ್ಲ ಕಷ್ಟಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ಈ ಸಿನಿಮಾ 2011ರಲ್ಲಿ ಬಿಡುಗೆ ಆಗಿದೆ.
 

ಹಂಟರ್ ( Hunter ): ಇದು 2015 ರಲ್ಲಿ ಬಿಡುಗಡೆಯಾದ ವಯಸ್ಕರ ಹಾಸ್ಯ ಚಿತ್ರವಾಗಿದೆ. ಈ ಚಲನಚಿತ್ರವನ್ನು ಶ್ರೀನಿವಾಸ್ ಅವಸರಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ 2017 'ಬಾಬು ಬಾಗಾ ಬ್ಯುಸಿ' ಎಂದು ತೆಲುಗಿನಲ್ಲಿ ರೀಮೇಕ್ ಮಾಡಲಾಯಿತು.
 

ಪರ್ಚ್ಡ್ ( Parched ): ಈ ಚಿತ್ರವು ಗುಜರಾತ್‌ನ ನಾಲ್ವರು ಮಹಿಳೆಯರು ಪುರುಷರು, ಲೈಂಗಿಕತೆ ಮತ್ತು ಜೀವನದ ಕುರಿತದ್ದಾಗಿದೆ. ಜೊತೆಗೆ, ತಮ್ಮೊಂದಿಗಿರುವ ರಕ್ಷಸೀ ಪ್ರೌರುತ್ತಿಯ ಪುರುಷರನ್ನು ಹೇಗೆ ಎದುರಿಸುತ್ತಾರೆ ಎಂಬುದರ ಕುರಿತದ್ದಾಗಿದೆ.
 

ಬ್ಯಾಂಡಿಟ್ ಕ್ವೀನ್ ( Bandit Queen ): 1994ರಲ್ಲಿ ಫೂಲನ್ ದೇವಿಯ ಜೀವನವನ್ನು ಆಧರಿಸಿದ ಜೀವನಚರಿತ್ರೆಯ ಚಲನಚಿತ್ರವಾಗಿದೆ. ಆಕೆ ಜೀವನದಲ್ಲಿ ಎದುರಿಸಿದ ಕಷ್ಟಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.

ಫೈರ್ ( Fire ): ಇದು ಸಲಿಂಗಕಾಮಿ ಸಂಬಂಧಗಳನ್ನು ಸ್ಪಷ್ಟವಾಗಿ ತೋರಿಸುವ ಬಾಲಿವುಡ್ ಮೊದಲ ಮುಖ್ಯವಾಹಿನಿಯ  ಚಲನಚಿತ್ರಗಳಲ್ಲಿ ಒಂದಾಗಿದೆ. ಸಲಿಂಗಕಾಮಿ ಸಂಬಂಧವನ್ನು ಪ್ರದರ್ಶಿಸಿದ ಮೊದಲನೆಯ ಚಿತ್ರವಾಗಿದೆ.

ಸಿನ್ಸ್ ( Sins ) : ಈ ಚಿತ್ರವು ಚಿಕ್ಕ ಹುಡುಗಿಯ ವೃದ್ಧ ಪಾದ್ರಿಯೊಂದಿಗೆ ಅಸಾಂಪ್ರದಾಯಿಕ ಪ್ರೇಮ ಮತ್ತು ಭಾವೋದ್ರಿಕ್ತ ಸಂಬಂಧವನ್ನು ಹೊಂದುವದರ ಕುರಿತದ್ದಾಗಿದೆ. ಈ ಚಿತ್ರವು 2005 ರಲ್ಲಿ ಬಿಡುಗಡೆಯಾಯಿತು.

click me!