Cannes 2022; ಸ್ಕರ್ಟ್‌ನಲ್ಲಿ ಮಿಂಚಿದ ನಟಿ ದೀಪಿಕಾ, ಫೋಟೋ ವೈರಲ್

Published : May 22, 2022, 11:56 AM IST

ನಟಿ ದೀಪಿಕಾ ಪಡುಕೋಣೆ ಕಾನ್ ಚಲನಚಿತ್ರೋತ್ಸವದಲ್ಲಿ ಮಿಂಚುತ್ತಿದ್ದಾರೆ. ಕಾನ್ 2022 ಫಿಲ್ಮ್ ಫೆಸ್ಟಿವಲ್ ನಲ್ಲಿ ಜ್ಯೂರಿಯೂ ಆಗಿದ್ದಾರೆ. ಅನೇಕ ಕಾರಣಗಳಿಗೆ ದೀಪಿಕಾ ಸದ್ದು ಮಾಡುತ್ತಿದ್ದಾರೆ. ತರಹೇವಾರಿ ಉಡುಗೆಯಲ್ಲಿ ಕಂಗೊಳಿಸುತ್ತಿರುವ ದೀಪಿಕಾ ಇದೀಗ ಚಡ್ಡಿಯಲ್ಲಿ ಮಿಂಚಿದ್ದಾರೆ.  

PREV
16
Cannes 2022; ಸ್ಕರ್ಟ್‌ನಲ್ಲಿ ಮಿಂಚಿದ ನಟಿ ದೀಪಿಕಾ, ಫೋಟೋ ವೈರಲ್
Deepika Padukone, Cannes 2022, chic look

ನಟಿ ದೀಪಿಕಾ ಪಡುಕೋಣೆ ಕಾನ್ ಚಲನಚಿತ್ರೋತ್ಸವದಲ್ಲಿ ಮಿಂಚುತ್ತಿದ್ದಾರೆ. ಕಾನ್ 2022 ಫಿಲ್ಮ್ ಫೆಸ್ಟಿವಲ್ ನಲ್ಲಿ ಜ್ಯೂರಿಯೂ ಆಗಿದ್ದಾರೆ. ಅನೇಕ ಕಾರಣಗಳಿಗೆ ದೀಪಿಕಾ ಸದ್ದು ಮಾಡುತ್ತಿದ್ದಾರೆ. ತರಹೇವಾರಿ ಉಡುಗೆಯಲ್ಲಿ ಕಂಗೊಳಿಸುತ್ತಿರುವ ದೀಪಿಕಾ ಇದೀಗ ಇದೀಗ ಸ್ಕರ್ಟ್ ನಲ್ಲಿ ಮಿಂಚಿದ್ದಾರೆ.

 

26

ದೀಪಿಕಾ ಹೊಸ ಅವತಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೆಡ್ ಕಾರ್ಪೆಟ್ ಹೊರತಾಗಿಯೂ ದೀಪಿಕಾ ಕಾನ್ಸ್ ನಲ್ಲಿ ತರಹೇವಾರಿ ಉಡುಗೆಯಲ್ಲಿ ಮಿಂಚಿದ್ದಾರೆ. ಫ್ರಾನ್ಸ್ ಬೀದಿಯಲ್ಲಿ ಕಾಣಿಸಿಕೊಂಡಿರುವ ದೀಪಿಕಾ ತುಂಡು ಬಟ್ಟೆ ಧರಿಸಿ ಪೋಸ್ ನೀಡಿದ್ದಾರೆ. ಅಲ್ಲದೆ ಹೊಸ ಲುಕ್‌ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

 

36

ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಲೂಯಿ ವಿಟಾನ್ ಅವರ ಕಪ್ಪು ಬಣ್ಣದ ಟಾಪ್ ಮತ್ತು ಸ್ಕರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಂದಹಾಗೆ ದೀಪಿಕಾ ಲೂಯಿ ವಿಟಾನ್‌ನ ರಾಯಭಾರಿಯಾಗಿದ್ದಾರೆ. ಇದೀಗ ಕಾನ್ಸ್ ನಲ್ಲಿಯೂ ಮಿಂಚಿದ್ದಾರೆ.

 

46

ನಟಿ ದೀಪಿಕಾ ಪಡುಕೋಣೆ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್ ನ ಮೊದಲ ದಿನ ಸೀರೆಯಲ್ಲಿ ಮಿಂಚಿದ್ದರು. ಅದ್ದೂರಿಯಾಗಿ ಪ್ರಾರಂಭವಾಗಿರುವ 75ನೇ ಕಾನ್ ಚಲನ ಚಿತ್ರೋತ್ಸವದಲ್ಲಿ ದೀಪಿಕಾ ಪಡುಕೋಣೆ ಉದ್ಘಾಟನಾ ಸಮಾರಂಭದಲ್ಲಿ ದೇಸಿ ಉಡುಗೆ ಧರಿಸಿ ಗಮನ ಸೆಳೆದಿದ್ದರು.

 

56

ಇದೀಗ ಕೆಂಪು ಬಣ್ಣದ ಉಡುಗೆಯಲ್ಲಿ ಮಿಂಚಿರುವ ದೀಪಿಕಾ ನೋಡಿ ಪತಿ ರಣ್ವೀರ್ ಸಿಂಗ್ ಫಿದಾ ಆಗಿದ್ದಾರೆ. ಕೆಂಪು ಬಣ್ಣದ ಕಾಸ್ಟ್ಯೂಮ್ ನಲ್ಲಿ ಕಂಗೊಳಿಸಿರುವ ಒಂದಿಷ್ಟು ಫೋಟೋಗಳನ್ನು ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

 

66

ಇನ್ನು ಸಿನಿಮಾಗಳ ವಿಚಾರಕ್ಕೆ ಬರುವುದಾರೆ ದೀಪಿಕಾ ಸದ್ಯ ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಶಾರುಖ್ ಖಾನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸರ್ಕಸ್ ಮತ್ತು ಪ್ರಭಾಸ್ ನಟನೆಯ ಹೊಸ ಸಿನಿಮಾದಲ್ಲಿ ದೀಪಿಕಾ ಬ್ಯುಸಿಯಾಗಿದ್ದಾರೆ.

 

Read more Photos on
click me!

Recommended Stories