ಬಾಲಿವುಡ್ ಸಿಂಪಲ್ ಸ್ಟಾರ್ ವರುಣ್ ಧವನ್ ಇದೀಗ 'ಜಗ್ಜಗ್ ಜೀಯೋ' ಸಿನಿಮಾ ಮೂಲಕ ಜೀವನದ ಎರಡನೇ ಸಿನಿ ಜರ್ನಿ ಆರಂಭಿಸಲಿದ್ದಾರಂತೆ.
ಅನಿಲ್ ಕಪೂರ್, ನೀತು ಕಪೂರ್ ಮತ್ತು ಕಿಯಾರ ಅಡ್ವಾನಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ವರುಣ್ ಪ್ಯಾಂಡಮಿಕ್ ನಂತರ ಕಮ್ ಬ್ಯಾಕ್ ಮಾಡುವುದಕ್ಕೆ ಇದೊಂದು ಒಳ್ಳೆಯ ಸಿನಿಮಾ ಎಂದು ಹೇಳಿದ್ದಾರೆ.
'ವೃತ್ತಿ ಜೀವನದಲ್ಲಿ ನನಗೆ ತೃಪ್ತಿ ಸಿಕ್ಕಿಲ್ಲ ನನಗೆ ಬೇಕಿರುವ ಪಾತ್ರಗಳು ಸಿಕ್ಕರೆ ಮಾತ್ರೆ ಖುಷಿಯಾಗುತ್ತದೆ. ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರಗಳು ಬೇಕು' ಎಂದು ವರುಣ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಕೊರೋನಾ ಪ್ಯಾಂಡಮಿಕ್ ನನ್ನ ಜೀವನ ಬದಲಾಯಿಸಿದೆ. ಈಗ ಹೊಸ ಸಿನಿ ಜನಿ ಜೀವನ ಆರಂಭಿಸುತ್ತಿರುವ. ಏನನ್ನೂ ಒಳೆ ರೀತಿಯಲ್ಲಿ ನಾನು ನೋಡುತ್ತಿಲ್ಲ' ಎಂದು ವರುಣ್ ಹೇಳಿದ್ದಾರೆ.
'ಸಿನಿ ಜರ್ನಿ ಆರಂಭಿಸಿ 8 ವರ್ಷಗಳು ಆಗಿದೆ ಆದರೆ ಈಗಲ್ಲೂ ನನ್ನ ಕೆಲಸ ಮತ್ತು ಫ್ಯೂಚರ್ ನೆನಪಿಸಿಕೊಂಡರೆ ಭಯ ಆಗುತ್ತದೆ. ಕೆಲಸದಲ್ಲಿ ತಮಾಷೆ ಇದೆ ಆದರೂ ಭಯ' ಎಂದಿದ್ದಾರೆ ವರುಣ್.
'ಸಮಾಜ ನಟರನ್ನು ನೋಡುವ ದೃಷ್ಟಿ ಬೇರೆ. ಸಿನಿಮಾ ಓಡಿಲ್ಲ ಕಲೆಕ್ಷನ್ ಆಗಿಲ್ಲ ಅಂದರೆ ಸೋತ ಹಾಗೆ. ಇದರಿಂದ ನನ್ನ ಬೇರೆ ಪ್ರಾಜೆಕ್ಟ್‌ಗಳಿಗೆ ಸಮಸ್ಯೆ ಆಗಿದೆ' ಎಂದು ವರುಣ್ ಹೇಳಿದ್ದಾರೆ.
'ಜನರು ಏನೇ ಹೇಳಲ್ಲಿ ನಾನು ಒಳ್ಳೆ ಸಿನಿಮಾಗಳನ್ನು ಮಾಡುವೆ ಒಳ್ಳೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವೆ ನನ್ನಿಂದ ಯಾರಿಗೂ ನಷ್ಟ ಆಗಬಾರದು. ಹೊಸ ವಿಚಾರಗಳನ್ನು ಕಲಿಯುವ ಮನಸ್ಸು ಮಾಡಿದ್ದೀನಿ' ಎಂದು ಮಾತನಾಡಿದ್ದಾರೆ.