ಸುಶಾಂತ್ ವಿರುದ್ಧ #MeToo ಆರೋಪಿಸಿಲ್ಲ, ವಿಚಾರಣೆ ನಂತರ ಮುಂಬೈಗೆ ಗುಡ್‌ ಬೈ ಹೇಳಿದ ನಟಿ ಸಂಜನಾ!

Suvarna News   | Asianet News
Published : Jul 02, 2020, 04:52 PM IST

ತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ Dil Bechara ಚಿತ್ರವಿನ್ನೂ ತೆರೆ ಕಂಡಿಲ್ಲ. ಈ ಚಿತ್ರದಲ್ಲಿ ಸುಶಾಂತ್ ಜೊತೆ ತೆರೆ ಹಂಚಿಕೊಂಡ ನಟಿ ಸಂಜನಾ ಈ ಹಿಂದೆ ಸುಶಾಂತ್ ವಿರುದ್ಧವೇ #MeToo ಆರೋಪ ಮಾಡಿದ್ದರು, ಎನ್ನಲಾಗಿದೆ. ಹಲವು ಕೋನಗಳಲ್ಲಿ ಸುಶಾಂತ್ ಸಾವಿನ ತನಿಖೆ ನಡೆಯುತ್ತಿದ್ದು, ಸಂಜನಾ ಅವರನ್ನೂ ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಬೆನ್ನಲ್ಲೇ ಈ ನಟಿ ಮುಂಬೈಗೆ ಗುಡ್ ಬೈ ಹೇಳಿದ್ದು ಮಾತ್ರವಲ್ಲದೇ, ಇನ್ನು ಮತ್ತೆ ಮುಂಬೈಗೆ ಬರುತ್ತೀನೋ ಇಲ್ಲವೋ ಎಂದು ಟ್ವೀಟ್ ಮಾಡಿರುವ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೀಗ ಸದ್ದು ಮಾಡುತ್ತಿದೆ. 

PREV
112
ಸುಶಾಂತ್ ವಿರುದ್ಧ #MeToo ಆರೋಪಿಸಿಲ್ಲ, ವಿಚಾರಣೆ ನಂತರ ಮುಂಬೈಗೆ ಗುಡ್‌ ಬೈ ಹೇಳಿದ ನಟಿ ಸಂಜನಾ!

ಸುಶಾಂತ್ ಜೊತೆ ನಟಿಸಿರುವ ದಿಲ್ ಬೇಚಾರ ಸಿನಿಮಾ ಇನ್ನೂ ತೆರೆ ಕಾಣುವ ಮುನ್ನವೇ ಮುಂಬೈಗೆ ಗುಡ್‌ ಬೈ ಹೇಳಿದ್ದಾರೆ ನಟಿ ಸಂಜನಾ ಸಂಘಿ.

212

ಈ ನಟಿಯ ನಡೆ ಅಚ್ಚರಿ ಮೂಡಿಸಿದ್ದು, ಪೊಲೀಸ್‌ ವಿಚಾರಣೆಯಲ್ಲಿ ಏನಾಯ್ತು? ದಿಢೀರ್ ಹುಟ್ಟೂರಿಗೆ ಹೊರಡುವ ನಿರ್ಧಾರ ತೆಗೆದುಕೊಂಡಿರುವುದೇಕೆ ಎಂಬ ಬಗ್ಗೆ ಹಲವು ಪ್ರಶ್ನೆಗಳನ್ನು ಮೂಡಿಸಿದೆ.

312

2011ರಲ್ಲಿ 'ರಾಕ್‌ಸ್ಟಾರ್‌' ಚಿತ್ರದ ಮೂಲಕ ಬಿ-ಟೌನ್‌ಗೆ ಎಂಟ್ರಿ ಕೊಟ್ಟ ನಟಿ ಸಂಜನಾ ಸಂಘಿ.

412

ಬಾಲಿವುಡ್‌ ಬಹುನಿರೀಕ್ಷಿತ ಸಿನಿಮಾ 'ದಿಲ್ ಬೇಚಾರ' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

512

ಮೀಟೂ ಆರೋಪ ಮಾಡಿದ್ದರು ಎನ್ನುವ ಕಾರಣಕ್ಕೆ ಪೊಲೀಸರು ಈ ನಟಿಯನ್ನು ಸುಶಾಂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆಗೊಳಪಡಿಸಿದ್ದಾರೆ. 

612

2017ರಲ್ಲಿ 'ದಿಲ್ ಬೇಚಾರ' ಚಿತ್ರೀಕರಣ ಆರಂಭವಾಗಿದ್ದು, 2018ರಲ್ಲಿ ಚಿತ್ರತಂಡ ವಿದೇಶಕ್ಕೆ ಹಾರಿತ್ತು.

712

ಈ ಸಮಯದಲ್ಲಿ ಸಂಜನಾ ಸಂಘಿ, ಸುಶಾಂತ್ ಬಗ್ಗೆ ಮೀಟೂ ಆರೋಪ ಮಾಡಿದ್ದರು ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ಮಾಡಿದ್ದಾರೆ.

812

 'ಮೀಟೂ ಆರೋಪ ನಾನು ಮಾಡಿಲ್ಲ, ಸುಶಾಂತ್‌ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಯಾರೋ ಈ ರೀತಿ ಮಾಡಿದ್ದಾರೆಂದು ಸಂಜನಾ ಹೇಳಿದ್ದಾರೆ.  

912

9 ಗಂಟೆಗಳ ಕಾಲ ವಿಚಾರಣೆ ನಡೆದ ಮೇಲೆ ಸಂಜನಾ ಸಂಘಿ ಮುಂಬೈಗೆ ಗುಡ್‌ ಬೈ ಹೇಳಿ, ತಮ್ಮ ಹುಟ್ಟೂರು ದಿಲ್ಲಿಗೆ ತೆರಳಿದ್ದಾರೆ. 

1012

 'ಗುಡ್‌ ಬೈ ಮುಂಬೈ. ನಿನ್ನನ್ನು ನೋಡಲು ನಾಲ್ಕು ತಿಂಗಳುಗಳು ಬೇಕಾಗಿತ್ತು. ದಿಲ್ಲಿಗೆ ವಾಪಸ್‌ ಹೋಗುತ್ತಿದ್ದೇನೆ. ಮೊದಲ ಬಾರಿ ಮುಂಬೈ ಬೀದಿಗಳು ವಿಚಿತ್ರವಾಗಿ ಕಾಣಿಸಿದ್ದವು. ನನ್ನಲ್ಲಿರುವ ನೋವಿನಿಂದ ಹಾಗೆ ಕಂಡಿರಬಹುದು. ಮತ್ತೆ ಸಿಗುತ್ತೇವೋ ಅಥವಾ...ಇಲ್ಲವೇ?' ಎಂದು ಬರೆದುಕೊಂಡಿದ್ದಾರೆ.

1112

ಸುಶಾಂತ್ ನೆನಪಿನಲ್ಲಿ ಸಂಜನಾ ಸಂಘಿ ಬರೆದ ಸಾಲುಗಳು ಎಂಥವರಲ್ಲೂ ಕಣ್ಣೀರು ತರಿಸುತ್ತದೆ. ಮತ್ತೆ ನೋಡೋತ್ತೇನೋ, ಇಲ್ಲವೋ ಎಂದು ಬರೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಂತಾಗಿದೆ.

1212

'ಯಾರು ಹೇಳಿದ್ದು ಸಮಯ ಎಲ್ಲವನ್ನೂ ಸರಿ ಮಾಡುತ್ತದೆ ಎಂದು? ನೀವು ಬಿಟ್ಟು ಹೋದ ನೆನಪಿನಲ್ಲಿ ಇರುವೆ. ವೈಯಕ್ತಿಕವಾಗಿ ಇದರಿಂದ ಹೊರ ಬರಲು ನನಗೆ ಸಾಧ್ಯವಿಲ್ಲ' ಎಂದೂ ಸಂಜನಾ ಬರೆದುಕೊಂಡಿದ್ದರು.

click me!

Recommended Stories