#Lockdown - 3 ತಿಂಗಳ ನಂತರ ಮಾಸ್ಕ್‌ನೊಂದಿಗೆ ಬಾಲಿವುಡ್ ತಾರೆಯರು

First Published | Jul 2, 2020, 3:20 PM IST

ಕರೋನಾದ ಭೀತಿ ಇನ್ನೂ ಕಡಿಮೆಯಾಗಿಲ್ಲ. ಇಂದಿಗೂ ಅನೇಕ ಜನರು ಈ ವೈರಸ್‌ಗೆ ಬಲಿಯಾಗುತ್ತಿದ್ದಾರೆ. ಈಗ ದೇಶದಲ್ಲಿ ಲಾಕ್‌ಡೌನ್‌ ಸಡಿಲಗೊಂಡಿದ್ದು, ಜನರು ಮನೆಯಿಂದ ಹೊರಹೋಗಲು ಅನುಮತಿ ಇರುವುದರಿಂದ ಸಾಮಾನ್ಯ ಜನರಂತೆ ಬಾಲಿವುಡ್‌ನ ನಟ ನಟಿಯರೂ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಮನೆಯಿಂದ ಹೊರ ಹೋಗುತ್ತಿದ್ದಾರೆ. ಮುಂಬೈನ ವಿವಿಧ ಸ್ಥಳಗಳಲ್ಲಿ ಅನೇಕ ಸೆಲೆಬ್ರೆಟಿಗಳು ಮನೆಯಿಂದ ಅಚೆ ಬಂದಿರುವುದನ್ನು ಗುರುತಿಸಲಾಗಿದೆ. ಸಾರಾ ಅಲಿ ಖಾನ್, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ಡೈಸಿ ಷಾ ಸೇರಿದಂತೆ ಇತರ ಬಾಲಿವುಡ್ ಗಣ್ಯರು ಮುಂಬಯಿಯ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರ ನಿರ್ಮಾಪಕ ಆನಂದ್ ಎಲ್. ರಾಯ್ ಕಚೇರಿಯ ಹೊರಗೆ ಸಾರಾ ಅಲಿ ಖಾನ್ ಕಾಣಿಸಿಕೊಂಡರು. ಅವರು ಮೀಡಿಯಾ ಪೋಟೋಗ್ರಾಫರ್‌ಗಳಿಗೆ ಕೈಮುಗಿದು ನಮಸ್ಕರಿಸುವ ಮೂಲಕ ಪೋಸ್‌ ನೀಡಿದ್ದಾರೆ. ಅದೇ ಸಮಯದಲ್ಲಿ, ಅಭಿಷೇಕ್ ಬಚ್ಚನ್ ಕೂಡ ಡಬ್ಬಿಂಗ್ ಸ್ಟುಡಿಯೋದ ಹೊರಗೆ ತಲೆ ತಗ್ಗಿಸಿಕೊಂಡು ನೆಡೆಯುತ್ತಿರುವುದು ಕಂಡು ಬಂತು.
ಪಿಂಕ್‌ ಬಣ್ಣದ ಸೂಟ್‌ನಲ್ಲಿ 3 ತಿಂಗಳ ನಂತರ ಮನೆಯಿಂದ ಮಾಸ್ಕ್‌ ಧರಿಸಿ ಹೊರ ಬಂದ ಸಾರಾ ಸಾಕಷ್ಟು ಫ್ರೆಶ್‌ ಹಾಗೂ ಎನರ್ಜಿಟಿಕ್‌ ಆಗಿ ಕಾಣುತ್ತಿದ್ದಳು.
Tap to resize

ಪಿಂಕ್‌ ಕಲರ್‌ನ ಹೂಡ್ ಜಾಕೆಟ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡ ಅಭಿಷೇಕ್ ಬಚ್ಚನ್ಹೇರ್‌ಬ್ಯಾಂಡ್ ಹಾಗೂ ಮಾಸ್ಕ್‌ ಧರಿಸಿದ್ದರು.
ತಮ್ಮ ಮನೆಯ ಹೊರಗೆ ಕಪ್ಪು ಟೀ ಶರ್ಟ್ ಮತ್ತು ಲೋಯರ್‌ನಲ್ಲಿ ಕಾಣಿಸಿಕೊಂಡು ಅನಿಲ್ ಕಪೂರ್ ಛಾಯಾಗ್ರಾಹಕರಿಗೆ ಕೈ ಬೀಸಿ ವಿಶ್‌ ಮಾಡಿದರು.
ಟೈಗರ್ ಶ್ರಾಫ್ ಕೂಡ ಮುಂಬೈ ಬೀದಿಗಳಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ.
ಅಮಿತ್ ಕೈಯಲ್ಲಿ ನೀರಿನ ಬಾಟಲಿ ಇತ್ತು. ಆದರೆ, ಮಾಸ್ಕ್ ಮರೆತಿರಲಿಲ್ಲ.
ನಟಿ ಡೈಸಿ ಷಾ ಕೂಡ ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದರು. ತನ್ನ ಮೊಬೈಲ್ ಕ್ಯಾಮೆರಾದೊಂದಿಗೆ ಫೋಟೋಗಳನ್ನು ಕ್ಲಿಕ್ ಮಾಡುತ್ತಿದ್ದಳು.
ಬೆಳಿಗ್ಗೆ ವಾಕ್ ಸಮಯದಲ್ಲಿ ಕ್ಯಾಪ್ ಮತ್ತು ಮಾಸ್ಕ್‌ನೊಂದಿಗೆ ಕಾಣಿಸಿಕೊಂಡಮಂದಿರಾ ಬೇಡಿ.
ಮಲ್ಲಿಕಾ ಶೆರಾವತ್.
ಛಾಯಾಗ್ರಾಹಕ ಡಬ್ಬೂ ರತಾನಾನಿ ಪತ್ನಿಯೊಂದಿಗೆ.
ನಿಮ್ರತ್ ಕೌರ್ ಕೂಡ ಮುಂಬೈ ಬೀದಿಗಳಲ್ಲಿ ಓಡಾಡಿದರು.
ಅಂಗದ್ ಬೇಡಿ, ಪತ್ನಿ ನೇಹಾ ಧೂಪಿಯಾ ಜೊತೆ ವಿಮಾನ ನಿಲ್ದಾಣದಲ್ಲಿ.

Latest Videos

click me!