ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುವಾಗ ಪಂದ್ಯ ನೋಡುವುದಿಲ್ಲ, ಸುನಿಲ್ ಶೆಟ್ಟಿ ನಿರ್ಧಾರಕ್ಕೆ ಕಾರಣವೇನು?

Published : Mar 01, 2026, 02:32 PM IST

ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುವಾಗ ಪಂದ್ಯ ನೋಡುವುದಿಲ್ಲ, ಹಲವು ಕ್ರಿಕೆಟಿಗರು ಯಶಸ್ಸಿಗಾಗಿ ಕೆಲ ಪದ್ಧತಿಗಳನ್ನು ಪಾಲಿಸುತ್ತಾರೆ, ಕೆಲವೊಮ್ಮೆ ಮೂಡನಂಬಿಕೆ ಎಂದೆನಿಸಿದರೂ ಕ್ರಿಕೆಟಿಗರು ತಮ್ಮ ಪದ್ಧತಿಯಿಂದ ಹಿಂದೆ ಸರಿದಿಲ್ಲ. ಇದೀಗ ಸುನಿಲ್ ಶೆಟ್ಟಿಯ ಈ ನಿರ್ಧಾರ ಹಿಂದಿನ ಕಾರಣವೇನು?

PREV
15
ರಾಹುಲ್ ಬ್ಯಾಟಿಂಗ್ ಬಂದರೆ ಟಿವಿ ಆಫ್

ಹಲವು ಅಂತಾರಾಷ್ಟ್ರೀಯ ಕ್ರಿಕೆಟಿಗರು ಹಲವು ಬಾರಿ ಮೂಡನಂಬಿಕೆ ರೀತಿಯ ಆಚರಣೆ ಮಾಡುತ್ತಾರೆ. ಕೆಲ ಕ್ರಿಕೆಟಿಗರು ಪ್ಯಾಡನ್ನು ಪ್ರತಿ ಬಾರಿ ಎಡಗಾಲಿಗೆ ಕಟ್ಟುತ್ತಾರೆ, ಇನ್ನು ಬ್ಯಾಟಿಂಗ್ ಇಳಿಯುವ ಮೊದಲು ಪೆವಿಲಿಯನ್ ಬದಲು ಡಗೌಟ್‌ನಲ್ಲಿ ಕುಳಿತುಕೊಳ್ಳುವುದು ಹೀಗೆ ಹಲವು. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುವಾಗ ತಾನು ಪಂದ್ಯ ನೋಡುವುದಿಲ್ಲ ಎಂದು ಬಾಲಿವುಡ್ ನಟ ಸುನಿಲ್ ಶೆಟ್ಟಿ ಹೇಳಿದ್ದಾರೆ.

25
ಅಳಿಯನ ಬ್ಯಾಟಿಂಗ್ ನೋಡುವುದಿಲ್ಲ ಯಾಕೆ

ಅಳಿಯ ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುವಾಗ ಪಂದ್ಯ ನೋಡುವುದಿಲ್ಲ ಅನ್ನೋದಕ್ಕೆ ಸುನಿಲ್ ಶೆಟ್ಟಿ ಕಾರಣವನ್ನೂ ನೀಡಿದ್ದಾರೆ. ಇದು ಯಾವುದೇ ನಂಬಿಕೆ ಪ್ರಶ್ನೆಯಲ್ಲ. ಕೆಎಲ್ ರಾಹುಲ್ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕು, ಉತ್ತಮ ಸ್ಕೋರ್ ಗಳಿಸಬೇಕು ಅನ್ನೋದು ಬಯಕೆ. ಹೀಗಾಗಿ ಲೈವ್ ಮ್ಯಾಚ್ ನೋಡುವಾಗ ನನ್ನ ಆತಂಕ ಹೆಚ್ಚಾಗುತ್ತೆ ಎಂದಿದ್ದಾರೆ.

35
ಪತ್ನಿ ಕಮೆಂಟ್ರಿ

ಕೆಎಲ್ ರಾಹುಲ್ ನನ್ನ ಅಳಿಯನಾಗಿದ್ದರೂ ನನಗೆ ಮಗನಿದ್ದಂತೆ. ಆತನ ಪರ್ಫಾಮೆನ್ಸ್ ಯಾವತ್ತು ಉತ್ತಮವಾಗಿರಬೇಕು ಎಂದು ನಾನು ಬಯಸುತ್ತೇನೆ. ಹೀಗಾಗಿ ಲೈವ್ ಪಂದ್ಯದ ವೇಳೆ ನನ್ನ ಆತಂಕ ಹೆಚ್ಚಾಗುತ್ತದೆ. ಈ ವೇಳೆ ನನ್ನ ಪತ್ನಿ ಪಂದ್ಯ ಏನಾಯಿತು, ಎಷ್ಟು ರನ್ ಆಯಿತು ಅನ್ನೋದು ತಿಳಿಸುತ್ತಾಳೆ ಎಂದಿದ್ದಾರೆ.

45
ಸಮಾಧಾನವಾದ ನಂತರ ಹೈಲೆಟ್ಸ್

ತೀವ್ರತೆ, ರೋಚಕತೆ ಘಟ್ಟ ಮುಗಿದಿ ಪಂದ್ಯ ಸಮಾಧಾನವಾದ ಬಳಿಕ ಪಂದ್ಯ ನೋಡುತ್ತೇನೆ. ಹಲವು ಬಾರಿ ಟೀಂ ಇಂಡಿಯಾ ರೋಚಕವಾಗಿ ಪಂದ್ಯ ಗೆದ್ದಿರುತ್ತೆ. ಆದರೆ ನಾನು ಆತಂಕದಲ್ಲಿ ನೋಡಿರುವುದಿಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಪಂದ್ಯದ ಹೈಲೆಟ್ಸ್ ನೋಡುತ್ತೇನೆ ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.

55
500 ಕೋಟಿ ರೂ ವರೆಗೆ ನೋಡುವುದಿಲ್ಲ

ನನ್ನ ಮಗನ ವಿಚಾರದಲ್ಲೂ ಅಷ್ಟೇ. ಮಗ ಆಹಾನ್ ಶೆಟ್ಟಿ ಬಾರ್ಡರ್ ಸಿನಿಮಾ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡುವವರೆಗೆ ಸಿನಿಮಾ ನೋಡುವುದಿಲ್ಲ ಎಂದು ನಾನು ಮೊದಲೇ ನಿರ್ಧರಿಸಿದ್ದೇನೆ. ಕಷ್ಟಪಟ್ಟು, ಶ್ರಮವಹಿಸಿ ಉತ್ತಮ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡುವ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories