ತಮ್ಮ ಫೋಟೋ ಕ್ಲಿಕ್ಕಿಸಿದ ಹಿರಿಯ ಛಾಯಾಗ್ರಾಹಕನ ಶ್ರದ್ಧಾಂಜಲಿ ಸಭೆಗೆ ಸೇರಿದ ಬಾಲಿವುಡ್‌

First Published | Aug 24, 2024, 11:21 AM IST

ಹಿರಿಯ ಛಾಯಾಗ್ರಾಹಕ ಪ್ರದೀಪ್ ಬಾಂದೇಕರ್ ಅವರ ಪ್ರಾರ್ಥನಾ ಸಭೆಯನ್ನು ಶುಕ್ರವಾರ ಸಂಜೆ ಮುಂಬೈನಲ್ಲಿ ಆಯೋಜಿಸಲಾಗಿತ್ತು. ಬಾಲಿವುಡ್‌ನಿಂದ ಶಾರುಖ್ ಖಾನ್, ಆಮಿರ್ ಖಾನ್, ಜಾಕಿ ಶ್ರಾಫ್, ವರುಣ್ ಧವನ್ ಮತ್ತು ವಿದ್ಯಾ ಬಾಲನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಪ್ರದೀಪ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸಿದ್ದರು. 

ಪ್ರದೀಪ್ ಬಾಂದೇಕರ್ ಈ ತಿಂಗಳ ಆರಂಭದಲ್ಲಿ ನಿಧನರಾದರು. ಅವರ ಅಕಾಲಿಕ ನಿಧನದ ಸುದ್ದಿಯನ್ನು ಅವರ ಪುತ್ರ ಪ್ರಥಮೇಶ್ ಬಾಂದೇಕರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಪ್ರದೀಪ್ ಬಾಂದೇಕರ್ ಅವರ ಆತ್ಮಕ್ಕೆ ಶಾಂತಿ ಕೋರಿ ಶುಕ್ರವಾರ ಮುಂಬೈನಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

ಶಾರುಖ್ ಖಾನ್ ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿ ಅವರೊಂದಿಗೆ ಪ್ರದೀಪ್ ಬಾಂದೇಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸಿದ್ದರು.

Tap to resize

ಹಿರಿಯ ಛಾಯಾಗ್ರಾಹಕ ಪ್ರದೀಪ್ ಬಾಂದೇಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಾಲಿವುಡ್‌ ನಟ ಆಮಿರ್ ಖಾನ್ ಕೂಡ ಆಗಮಿಸಿದ್ದರು.

ಹಿರಿಯ ನಟ ಅನಿಲ್ ಕಪೂರ್ ಕೂಡ ಶೃದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ  ಫೋಟೋಗ್ರಾಫರ್ ಪ್ರದೀಪ್ ಬಾಂದೇಕರ್ ಅವರಿಗೆ  ನಮನ ಸಲ್ಲಿಸಿದರು.

ಬಾಲಿವುಡ್‌  ಹಿರಿಯ  ನಟಿ ವಿದ್ಯಾ ಬಾಲನ್ ಅವರು ಕೂಡ ಛಾಯಾಗ್ರಾಹಕ ಪ್ರದೀಪ್ ಬಾಂದೇಕರ್ ಅವರ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು.

ನಟ ವಿಕ್ಕಿ ಕೌಶಲ್ ಕೂಡ ಪ್ರದೀಪ್ ಬಾಂದೇಕರ್ ಅವರ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಪ್ರದೀಪ್ ಬಾಂದೇಕರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಮತ್ತು ಅಗಲಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ವರುಣ್ ಧವನ್ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು.

ಹಿರಿಯ ನಟ ಜಾಕಿ ಶ್ರಾಫ್ ಪ್ರದೀಪ್ ಬಾಂದೇಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಅವರ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು.

ಹಿರಿಯ ಛಾಯಾಗ್ರಾಹಕ ಪ್ರದೀಪ್ ಬಾಂದೇಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಟ ಗುಲ್ಶನ್ ಗ್ರೋವರ್ ಕೂಡ ಆಗಮಿಸಿ, ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಹಿರಿಯ  ನಟಿ ಪೂನಂ ಧಿಲ್ಲೋನ್ ಪ್ರದೀಪ್ ಬಾಂದೇಕರ್ ಅವರ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಪ್ರದೀಪ್ ಬಾಂದೇಕರ್ ಅವರ ಪ್ರಾರ್ಥನಾ ಸಭೆಯಲ್ಲಿ ಹಿರಿಯ ನಟ ದಲೀಪ್ ತಾಹಿಲ್ ಕೂಡ ಭಾಗವಹಿಸಿ, ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ನಟಿ ಸೋನಾಲಿ ಕುಲಕರ್ಣಿ ಛಾಯಾಗ್ರಾಹಕ ಪ್ರದೀಪ್ ಬಾಂದೇಕರ್ ಅವರ ಪ್ರಾರ್ಥನಾ ಸಭೆಗೆ ಆಗಮಿಸಿ, ಆಪ್ತರಿಗೆ , ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಫೋಟೋಗ್ರಾಫರ್ ಪ್ರದೀಪ್ ಬಾಂದೇಕರ್ ಅವರ ಪ್ರಾರ್ಥನಾ ಸಭೆಯಲ್ಲಿ ನಟ ನಿರ್ಮಾಪಕ ನಿಖಿಲ್ ದ್ವಿವೇದಿ ಕೂಡ ಭಾಗವಹಿಸಿ, ಸಂತಾಪ ಸೂಚಿಸಿದರು.

ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಛಾಯಾಗ್ರಾಹಕ ಪ್ರದೀಪ್ ಬಾಂದೇಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Latest Videos

click me!